Advertisement

Karnataka ರಾಜ್ಯದ 16 ನಗರಗಳಲ್ಲಿ ಶೀಘ್ರ ಖಾಸಗಿ ಎಫ್ಎಂ?

01:44 AM Aug 29, 2024 | Team Udayavani |

ಹೊಸದಿಲ್ಲಿ: ಖಾಸಗಿ ಎಫ್ಎಂ ರೇಡಿಯೋ 3ನೇ ಹಂತ ನೀತಿಯಡಿ 784 ಕೋಟಿ ರೂ. ಮೀಸಲು ಬೆಲೆಯೊಂದಿಗೆ, ಕರ್ನಾಟಕದ 16 ನಗರಗಳ ಸಹಿತ ದೇಶದ 234 ನಗರಗಳಲ್ಲಿ 730 ಎಫ್ ಎಂ ಚಾನೆಲ್‌ಗ‌ಳನ್ನು ಆರಂಭಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಇ-ಹರಾಜು ನಡೆಸಲಾಗುತ್ತದೆ ಎಂದು ಕೇಂದ್ರ ಸಚಿವ ಅಶ್ವಿ‌ನಿ ವೈಷ್ಣವ್‌ ಮಾಹಿತಿ ನೀಡಿದ್ದಾರೆ.

Advertisement

ಎಫ್ಎಂ ಚಾನೆಲ್‌ಗ‌ಳಿಂದ ವಾರ್ಷಿಕ ಪರವಾನಿಗೆ ಶುಲ್ಕ (ಎಎಲ್‌ಎಫ್) ಸಂಗ್ರಹಿಸುವ ಪ್ರಸ್ತಾವಕ್ಕೂ ಒಪ್ಪಿಗೆ ದೊರೆತಿದೆ.ಇದು ಜಾರಿಯಾದರೆ ಜಿಎಸ್‌ಟಿ ಹೊರತುಪಡಿಸಿ ಆದಾಯದ ಶೇ. 4ರಷ್ಟು ಶುಲ್ಕ ತೆರಬೇ ಕಾಗುತ್ತದೆ ಎಂದು ತಿಳಿಸಿದ್ದಾರೆ.

ಖಾಸಗಿ ಎಫ್ಎಂಗಳಿಂದ ದೂರವೇ ಇದ್ದ ಈ ನಗರಗಳಲ್ಲಿ, ಇನ್ನು ಸ್ಥಳೀಯ ವಿಷಯವಸ್ತುಗಳನ್ನು ಸ್ಥಳೀಯ ಭಾಷೆಯಲ್ಲಿ ನೀಡಲು ಸಾಧ್ಯವಾಗಲಿದೆ. ಇವುಗಳಿಂದ ಹೊಸ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ. ಸ್ಥಳೀಯ ಭಾಷೆ, ಸಂಸ್ಕೃತಿ ಉತ್ತೇಜನಕ್ಕೂ ಸಹಕಾರಿಯಾಗಲಿದೆ. ಸರಕಾರ ಜನರನ್ನು ತಲುಪಲು ಸುಲಭವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ರಾಜ್ಯದ ಯಾವ ನಗರದಲ್ಲಿ  , ಎಷ್ಟು ?
ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಶಿವಮೊಗ್ಗ ತಲಾ 4, ಬಾಗಲಕೋಟೆ, ಬೀದರ್‌, ಚಿಕ್ಕ ಮಗಳೂರು, ಚಿತ್ರ ದುರ್ಗ, ಗದಗ -ಬೆಟಗೇರಿ, ಹೊಸ ಪೇಟೆ, ಹಾಸನ, ಕೋಲಾರ, ರಾಯ ಚೂರು, ತುಮಕೂರು ಮತ್ತು ಉಡುಪಿ ತಲಾ 3

Advertisement

Udayavani is now on Telegram. Click here to join our channel and stay updated with the latest news.

Next