Advertisement

ಗ್ರಾಮ ಸ್ವರಾಜ್ಯಕ್ಕೆ ಹೊಸ ರೂಪ; ಪರಿಷ್ಕೃತ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ

09:47 PM Apr 13, 2022 | Team Udayavani |

ನವದೆಹಲಿ: ಕೇಂದ್ರ ಸರ್ಕಾರ 2018ರಲ್ಲಿ ಜಾರಿಗೊಳಿಸಿದ ರಾಷ್ಟ್ರೀಯ ಗ್ರಾಮ ಸ್ವರಾಜ್ಯ ಅಭಿಯಾನ (ಆರ್‌ಜಿಎಸ್‌ಎ)ದ ಪರಿಷ್ಕೃತ ಯೋಜನೆಗೆ ಕೇಂದ್ರ ಸಂಪುಟ ಸಭೆಯಲ್ಲಿ ಬುಧವಾರ ಅನುಮೋದನೆ ನೀಡಲಾಗಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳಿಗಾಗಿನ ಕೇಂದ್ರ ಸಂಪುಟ ಸಮಿತಿ ಸಭೆಯಲ್ಲಿ 5,911 ಕೋಟಿ ರೂ. ವೆಚ್ಚದ ಪರಿಷ್ಕೃತ ಯೋಜನೆಗೆ ಸಮ್ಮತಿ ಸೂಚಿಸಲಾಗಿದೆ. ಈ ಪೈಕಿ 3,700 ಕೋಟಿ ರೂ. ಕೇಂದ್ರ ಸರ್ಕಾರ, 2,211 ಕೋಟಿ ರೂ. ಮೊತ್ತವನ್ನು ರಾಜ್ಯ ಸರ್ಕಾರಗಳು ನೀಡಲಿವೆ.

ಪರಿಷ್ಕೃತ ಯೋಜನೆಯ ಅನ್ವಯ ಏ.1ರಿಂದ 2026ರ ಮಾ.31ರ ವರೆಗೆ ದೇಶದ 2.78 ಲಕ್ಷ ಗ್ರಾಮ ಪಂಚಾಯತ್‌ ವ್ಯಾಪ್ತಿಗಳಲ್ಲಿರುವ 60 ಲಕ್ಷ ಚುನಾಯಿತ ಪ್ರತಿನಿಧಿಗಳು, ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಇದರಿಂದ ನೆರವಾಗಲಿದೆ.

ಇದನ್ನೂ ಓದಿ:ನಾಳೆ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಬೊಮ್ಮಾಯಿ ಮನೆ ಘೇರಾವ್

ಸಹ್ಯ ಅಭಿವೃದ್ಧಿ ಗುರಿ (ಎಸ್‌ಡಿಜಿ)ಯನ್ನೇ ಪ್ರಮುಖವಾಗಿ ಇರಿಸಿಕೊಳ್ಳಲಾಗಿರುವ ಬಡತನ ಮುಕ್ತ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸುಧಾರಿತ ಜೀವನ ಕ್ರಮ, ಆರೋಗ್ಯಯುಕ್ತ ಗ್ರಾಮ, ಮಕ್ಕಳ ಸ್ನೇಹಿ ವಾತಾವರಣ ಇರುವ, ಉತ್ತಮ ರೀತಿಯಲ್ಲಿ ನೀರು ಪೂರೈಕೆ, ನೈರ್ಮಲೀಕರಣ ಮತ್ತು ಹಸಿರುಯುಕ್ತ, ಮೂಲಸೌಕರ್ಯಗಳಲ್ಲಿ ಸ್ವಾವಲಂಬನೆ, ಸಾಮಾಜಿಕವಾಗಿ ಕೂಡ ಭದ್ರತೆ ಹೊಂದಿರುವ, ಉತ್ತಮ ಆಡಳಿತ ವ್ಯವಸ್ಥೆ ಹೊಂದಿರುವ ಮತ್ತು ಅಳಿವಿನ ಅಂಚಿನಲ್ಲಿರುವ ವ್ಯವಸ್ಥೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಕಾಪಾಡಿಕೊಳ್ಳುವ ಅಂಶಗಳನ್ನು ಆರ್‌ಜಿಎಸ್‌ಎ ಒಳಗೊಂಡಿದೆ.

Advertisement

ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆ ಇರುವ ಹಲವು ಅಂತರವನ್ನು ತಗ್ಗಿಸುವ ನಿಟ್ಟಿನಲ್ಲಿ ಈ ಯೋಜನೆ ನೆರವಾಗಲಿದೆ ಎಂದು ಸಂಪುಟ ಸಭೆಯ ಬಳಿಕ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next