Advertisement
ಮುಖ್ಯಮಂತ್ರಿ ಬೊಮ್ಮಾಯಿ ತತ್‌ಕ್ಷಣ ಸಚಿವ ಸಂಪುಟ ರಚಿಸುವ ಲೆಕ್ಕಾಚಾರದಲ್ಲಿ ಇದ್ದಂತೆ ಕಾಣಿಸುತ್ತಿಲ್ಲ. ಆಷಾಢ ಮುಗಿ ಯುವವರೆಗೂ ಆಕಾಂಕ್ಷಿಗಳು ಕಾಯ ಬೇಕಾಗ ಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
Related Articles
Advertisement
ಡಿಸಿಎಂ ಸ್ಥಾನದ ಇನ್ನೋರ್ವ ಆಕಾಂಕ್ಷಿ ಆರ್. ಅಶೋಕ್ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮೂಲಕ ಅಮಿತ್ ಶಾ ಮತ್ತು ಜೆ.ಪಿ. ನಡ್ಡಾ ಭೇಟಿಗೆ ಕಸರತ್ತು ನಡೆಸಿದ್ದಾರೆ.
ಡಿಸಿಎಂ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದ ಬಿ. ಶ್ರೀರಾಮುಲು ವರಿಷ್ಠರಿಂದ ಭರವಸೆ ದೊರೆಯದೆ ಬೇಸರಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹೊರಗಿಡುವ ಗೊಂದಲ:
ಹಿಂದಿನ ಸರಕಾರದಲ್ಲಿ ಸಚಿವರಾಗಿದ್ದವರಲ್ಲಿ ಯಾರನ್ನು ಸಂಪುಟದಿಂದ ಹೊರಗಿಡಬೇಕೆಂಬ ಗೊಂದಲ ವರಿಷ್ಠರು ಮತ್ತು ಸಿಎಂ ಬೊಮ್ಮಾಯಿ ಅವರನ್ನು ಕಾಡುತ್ತಿದೆ ಎನ್ನಲಾಗಿದೆ.
ಹಿರಿಯ ಸಚಿವರನ್ನು ಕೈ ಬಿಡುವ ಬಗ್ಗೆ ವರಿಷ್ಠರು ಸುಳಿವು ನೀಡಿದ್ದರೂ ಹಾಗೆ ಮಾಡಿದರೆ ಅದೇ ಸಮುದಾಯದ ಹೊಸಬರಿಗೆ ಅವಕಾಶ ನೀಡಬೇಕಾಗುತ್ತದೆ. ಅಲ್ಲದೆ ಎಲ್ಲ ಹಿರಿಯರನ್ನು ಕೈ ಬಿಟ್ಟು ಹೊಸಬರನ್ನು ಮಾತ್ರ ಸೇರಿಸಿಕೊಂಡರೆ, ಸದನದಲ್ಲಿ ಸರಕಾರವನ್ನು ಬಲವಾಗಿ ಸಮರ್ಥನೆ ಮಾಡಿಕೊಳ್ಳುವುದು ಕಷ್ಟವಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ವಲಸಿಗರಲ್ಲಿ ಕೆಲವರ ಕಾರ್ಯವೈಖರಿಯ ಬಗ್ಗೆ ಪಕ್ಷದ ನಾಯಕರಿಗೆ ತೃಪ್ತಿ ಇಲ್ಲ. ಆದರೆ ಸರಕಾರ ರಚನೆಗೆ ಕಾರಣರಾದವರನ್ನು ಕೈ ಬಿಟ್ಟರೆ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆ ಇದೆ ಎಂಬ ಆತಂಕ ಇದೆ ಎನ್ನಲಾಗುತ್ತಿದೆ.
ವಲಸಿಗರಿಂದಲೇ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ. ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸುವೆ.– ಬಿ.ಎಸ್. ಯಡಿಯೂರಪ್ಪ , ಮಾಜಿ ಸಿಎಂ