Advertisement

ಸಂಭ್ರಮದ ಕಾರಹುಣ್ಣಿಮೆ; ಮೇಟಿಯವರ ಎತ್ತು ಪ್ರಥಮ

04:32 PM Jun 25, 2021 | Team Udayavani |

ಮಹಾಲಿಂಗಪುರ: ಕಾರ ಹುಣ್ಣಿಮೆಯ ನಿಮಿತ್ತ ಎತ್ತುಗಳ ಕರಿ ಹರಿಯುವ ಕಾರ್ಯಕ್ರಮ ಗುರುವಾರ ನಡೆಯಿತು. ಮಹಾಲಿಂಗೇಶ್ವರ ಗುಡಿಯ ಹತ್ತಿರ ಕರಿ ಹರಿಯುವ ಎತ್ತುಗಳ ಕೊಡುಗಳಿಗೆ ಕೊಡುಬಳೆ ಹಾಕಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪೂಜೆ ಸಲ್ಲಿಸಿದರು.

Advertisement

ನಂತರ ಎತ್ತುಗಳನ್ನು ಜೋಡು ರಸ್ತೆಯ ವಿವೇಕ ವೃತ್ತದಿಂದ ಮಹಾಲಿಂಗೇಶ್ವರ ಗುಡಿಯವರೆಗೆ ಓಡಿಸಲಾಯಿತು. ಪ್ರಸಕ್ತ ವರ್ಷದ ಕರಿಹರಿಯುವ ಓಟದಲ್ಲಿ ಮೇಟಿಯವರ ಎತ್ತು ಪ್ರಥಮ ಸ್ಥಾನ ಗಳಿಸಿತು. ಪ್ರತಿವರ್ಷವು ಗೌಡರ ಎತ್ತು ಪ್ರಥಮ ಸ್ಥಾನಗಳಿಸುತ್ತಿತ್ತು. ದಶಕಗಳ ನಂತರ ಮೇಟಿಯವರ ಎತ್ತು ಪ್ರಥಮ ಸ್ಥಾನ ಗಳಿಸಿದ್ದು ವಿಶೇಷವಾಗಿತ್ತು.

ಕರಿ ಹರಿಯುವ ಸಂದರ್ಭದಲ್ಲಿ ಪಟ್ಟಣದ ಹಿರಿಯರಾದ ಯಲ್ಲನಗೌಡ ಪಾಟೀಲ, ನಿಂಗಪ್ಪ ಬಾಳಿಕಾಯಿ, ವಿಜುಗೌಡ ಪಾಟೀಲ, ಕೃಷ್ಣಗೌಡ ಪಾಟೀಲ, ಮಹಾಲಿಂಗಪ್ಪ ಜಕ್ಕನ್ನವರ, ಗಂಗಾಧರ ಮೇಟಿ, ವಿಠ್ಠಲ ಕುಳಲಿ, ಹನಮಂತ ಬುರುಡ, ತುಳಜಪ್ಪ ಬಾಳಿಕಾಯಿ, ರವಿಗೌಡ ಪಾಟೀಲ, ಶಿವಾನಂದ ಮೇಟಿ, ಮಹಾಲಿಂಗಪ್ಪ ತಟ್ಟಿಮನಿ, ಸುನೀಲಗೌಡ ಪಾಟೀಲ, ಸುಭಾಸ ವಜ್ಜರಮಟ್ಟಿ, ಲಕ್ಕಪ್ಪ ಚಮಕೇರಿ, ಮಹಾಲಿಂಗ ಮಾಳಿ, ಸದಾಶಿವ ಗೊಬ್ಬರದ, ಕಲ್ಲಪ್ಪ ಹೆಬ್ಟಾಳ, ರಾಘು ಚಿಂಚಲಿ, ಮಹಾಲಿಂಗ ಪಾಟೀಲ ಇದ್ದರು.

ಮಣ್ಣೆತ್ತಿನ ಪೂಜೆ: ಕಾರಹುಣ್ಣಿಮೆ ನಿಮಿತ್ತ ಮಣ್ಣಿನ ಎತ್ತುಗಳನ್ನು ಕೊಂಡುಕೊಂಡು ಮಹಿಳೆಯರು ಪೂಜೆ ಸಲ್ಲಿಸಿದರು. ಮಣ್ಣೆತ್ತಿನ ಬಸವಣ್ಣನ ನೈವೈದ್ಯಗಾಗಿ ಅಡಿಕೆ ಹಾಕಿ ಅನ್ನವನ್ನು ತಯಾರಿಸುವ ಸಂಪ್ರದಾಯ ರೂಢಿಯಲ್ಲಿದೆ. ನೈವೇದ್ಯ ಮಾಡುವಾಗ ಅನ್ನದಲ್ಲಿಯ ಅಡಿಕೆ ಬಸವಣ್ಣನ ನೈವೇದ್ಯದಲ್ಲಿ ಬಂದರೆ ಪ್ರಾಣಿ ಸಂಕುಲಕ್ಕೆ ಸುಖ, ಮನುಷ್ಯರ ಊಟದಲ್ಲಿ ಸಿಕ್ಕರೆ ಜನ ಸಮುದಾಯಕ್ಕೆ ಸುಖ ಪ್ರಾಪ್ತಿಯಾಗುತ್ತದೆ ಎಂಬುದು ಗುರು ಹಿರಿಯರ ನಂಬಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next