Advertisement

India ; 7 ದಿನಗಳಲ್ಲೇ ಸಿಎಎ ಜಾರಿ: ಕೇಂದ್ರ ಸಚಿವ

01:01 AM Jan 30, 2024 | Team Udayavani |

ಕೋಲ್ಕತ್ತಾ: ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಇನ್ನೊಂದು ವಾರದಲ್ಲೇ ದೇಶದಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ಕೇಂದ್ರ ಸಚಿವ ಶಂತನು ಠಾಕೂರ್‌ ಘೋಷಿಸಿದ್ದಾರೆ.

Advertisement

ಪಶ್ಚಿಮ ಬಂಗಾಲದಲ್ಲಿ ಸೋಮ ವಾರ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುವ ವೇಳೆ ಶಂತನು ಠಾಕೂರ್‌ ಅವರು ಈ ಘೋಷಣೆ ಮಾಡಿದ್ದಾರೆ.

“ವಿವಾದಿತ ಸಿಎಎ ಕಾಯ್ದೆಯನ್ನು ಮುಂದಿನ 7 ದಿನಗಳ ಒಳಗಾಗಿ ದೇಶಾದ್ಯಂತ ಜಾರಿ ಮಾಡಲಾಗುತ್ತದೆ. ಇದು ನಾನು ನೀಡುವ ಗ್ಯಾರಂಟಿ. ಒಟ್ಟಿನಲ್ಲಿ ಲೋಕಸಭೆ ಚುನಾವಣೆಗೆ ಮುನ್ನವೇ ಇದು ಅನುಷ್ಠಾನಗೊಳ್ಳಲಿದೆ’ ಎಂದು ಕೇಂದ್ರದ ಬಂದರು ಖಾತೆ ಸಹಾಯಕ ಸಚಿವರಾಗಿರುವ ಠಾಕೂರ್‌ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next