Advertisement

ಸಿಎಎ ಪ್ರತಿಭಟಿಸಿ ಮಹಾ ಮಾನವ ಸರಪಳಿ

11:58 PM Jan 26, 2020 | Sriram |

ಕಾಸರಗೋಡು: ಕೇಂದ್ರ ಸರಕಾರದ ಪೌರತ್ವ ಮಸೂದೆ ತಿದ್ದುಪಡಿ ಪ್ರತಿಭಟಿಸಿ ಕೇರಳ ರಾಜ್ಯಾದ್ಯಂತ ಎಡರಂಗದ ವತಿಯಿಂದ ರವಿವಾರ ಸಂಜೆ ಮಾನವ ಮಹಾ ಸರಪಳಿ ನಡೆಯಿತು. ಮಹಿಳೆಯರ ಸಹಿತ ಲಕ್ಷಾಂತರ ಮಂದಿ ಭಾಗವಹಿಸಿದರು.

Advertisement

ಕಾಸರಗೋಡು ಜಲ್ಲಾ ಮಟ್ಟದಲ್ಲಿ ಹೊಸ ಬಸ್‌ ನಿಲ್ದಾಣ ಪರಿಸರದಿಂದ ಆರಂಭಿಸಿದ ಮಾನವ ಮಹಾ ಸರಪಳಿ ಚಂದ್ರಗಿರಿ ದಾರಿಯಾಗಿ ಕಾಲಿಕ್ಕಡವ್‌ವರೆಗಿನ 45 ಕಿ.ಮೀ. ದೂರ ರಚಿಸಲಾಯಿತು. ಕಾರ್ಯಕರ್ತರು ಮೊದಲೇ ನಿರ್ಧರಿಸಿದ ಸ್ಥಳಗಳಲ್ಲಿ ಮಾನವ ಮಹಾ ಸರಪಳಿಗೆ ಕೈಜೋಡಿಸಿದರು. ಸಿಎಎ ವಿರುದ್ಧ ಪ್ರತಿಜ್ಞೆ ಸ್ವೀಕರಿಸಲಾಯಿತು. ಪ್ರಮುಖ ಕೇಂದ್ರಗಳಲ್ಲಿ ಸಾರ್ವಜನಿಕ ಸಭೆಗಳೂ ಜರಗಿದವು.

ಕಾಸರಗೋಡಿನಲ್ಲಿ ಕಂದಾಯ ಸಚಿವ ಇ. ಚಂದ್ರಶೇಖರನ್‌, ಸಿ.ಪಿ.ಎಂ. ಕೇಂದ್ರ ಸಮಿತಿ ಸದಸ್ಯ ಎಂ.ವಿ. ಗೋವಿಂದನ್‌, ಮಾನವ ಮಹಾ ಸರಪಳಿ ಸಂಚಾಲಕ ಕೆ.ಪಿ.ಸತೀಶ್ಚಂದ್ರನ್‌, ಎಡರಂಗ ನೇತಾರರಾದ ಟಿ.ಕೃಷ್ಣನ್‌, ಅಸೀಸ್‌ ಕಡಪ್ಪುರ, ಅಹಮ್ಮದಲಿ ಕುಂಬಳೆ, ಕೆ.ಎ.ಮುಹಮ್ಮದ್‌ ಹನೀಫ್‌, ರತೀಶ್‌ ಪುದಿಯಪುರಂ, ಪಿ.ಪಿ.ರಾಜು, ಸಿ.ಎಚ್‌.ಕುಂಞಂಬು, ಮಾಜಿ ಸಂಸದ ಪಿ.ಕರುಣಾಕರನ್‌, ಟಿ.ಕೆ.ರವಿ, ಕೆ.ವಿ.ದಾಮೋದರನ್‌, ಕೊಟ್ಟರ ವಾಸುದೇವನ್‌, ವಿ.ಕೆ.ರಾಜನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next