Advertisement
ಎಲ್‌ಐಸಿ ಉದ್ಯೋಗಿ ರಮೇಶ್ ರಾವ್ ಮತ್ತು ನ್ಯಾಶನಲ್ ಇನ್ಸೂರೆನ್ಸ್ ಉದ್ಯೋಗಿ ಮೀರಾ ದಂಪತಿಯ ಪುತ್ರಿ. ಕಾಮತ್ ಆ್ಯಂಡ್ ರಾವ್ ಹಾಗೂ ಎಂ.ಆರ್. ಪಿ.ಎಲ್. ಸಂಸ್ಥೆಯ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ. ಸಿಎ ಇಂಟರ್ ಪರೀಕ್ಷೆಗೆ ತ್ರಿಶಾ ದಲ್ಲಿ ತರಬೇತಿ ಪಡೆದುಕೊಂಡಿದ್ದರು. ಅಂತಿಮ ಪರೀಕ್ಷೆಗೆ ಸ್ವಯಂ ಅಧ್ಯಯನ ನಡೆಸಿದ್ದರು.
ಸಿಎ ಅಂತಿಮ ಪರೀಕ್ಷೆಯಲ್ಲಿ ದೇಶದಲ್ಲಿ ದ್ವಿತೀಯ ರ್‍ಯಾಂಕ್ ಪಡೆದಿರುವ ರಮ್ಯಶ್ರೀ ಈ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಅವರು, ರ್‍ಯಾಂಕ್ ನಿರೀಕ್ಷೆ ಇರಲಿಲ್ಲ. ಆದರೆ ದೇಶದಲ್ಲೇ ಎರಡನೇ ರ್‍ಯಾಂಕ್ ಲಭಿಸಿರುವುದು ನನ್ನ ಭಾಗ್ಯ. ಪ್ರತೀ ದಿನ 12 ಗಂಟೆಗಳ ಕಾಲ ಸಿಎ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ಈ ಹಿಂದೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್‍ಯಾಂಕ್, ಪಿಯುಸಿಯಲ್ಲಿ 5ನೇ ರ್‍ಯಾಂಕ್ ಮತ್ತು ಸಿಎ ಇಂಟರ್ ಪರೀಕ್ಷೆಯಲ್ಲಿ ದೇಶದಲ್ಲಿ 16 ನೇ ರ್‍ಯಾಂಕ್ ಪಡೆದುಕೊಂಡಿದ್ದೆ. ಇದೇ ಕಾರಣಕ್ಕೆ ನನ್ನ ಮೇಲೆ ಪೋಷಕರಿಗೆ ನಿರೀಕ್ಷೆ ಹೆಚ್ಚಿತ್ತು. ಈಗಿನ ಸಾಧನೆ ಅತ್ಯಂತ ಸಂತೋಷ ತಂದಿದೆ ಎನ್ನುತ್ತಾರೆ.
Related Articles
Advertisement