ಚಿಕ್ಕಮಗಳೂರು: ಪಾಸಿಟಿವ್ ಸಲಹೆಗಳನ್ನು ಸ್ವೀಕರಿಸುತ್ತೇವೆ. ಕೋವಿಡ್ ಎದುರಿಸಿದ ನಂತರ ವೈಫಲ್ಯಗಳನ್ನು ಬೊಟ್ಟು ಮಾಡಿ ತೋರಿಸಲಿ. ಬುದ್ದಿವಂತರಂತೆ ಮುಂಚೆಯೇ ತಿಳಿದಿತ್ತು ಎಂದು ಕೆಲವರು ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಜಿಲ್ಲಾಸ್ಪತ್ರೆಯಲ್ಲಿ ಸೋಂಕಿತರ ಆರೋಗ್ಯ ವಿಚಾರಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನಿಯಂತ್ರಣ ಹೇರಬೇಕೆಂಬ ಒತ್ತಡವನ್ನು ಯಾರೂ ಹಾಕಿಲ್ಲ. ವಿರೋಧ ಪಕ್ಷವೂ ಮಾಡಿಲ್ಲ, ಮಾಧ್ಯಮವೂ ಮಾಡಿಲ್ಲ ಎಂದರು.
ಇದನ್ನೂ ಓದಿ:ಆಕ್ಸಿಜನ್ ಕೊರತೆ ನೀಗಿಸಲು 10, 20 ಎಮ್ ಟಿ ಕ್ರಯೋಜೆನಿಕ್ ಟ್ಯಾಂಕರ್ ಗಳ ಆಮದು : ಕೇಂದ್ರ
ರಾಜಕಾರಣಿಗಳು, ಮಾಧ್ಯಮದವರು ಮಾಡಿದ್ದು ಬರೀ ಸಿಡಿ ಚರ್ಚೆ. ಕೋವಿಡ್ ಹೆಚ್ಚಾಗುತ್ತೆಂದು ತಜ್ಞರನ್ನು ಕರೆಸಿ ಎಜುಕೇಟ್ ಮಾಡುವ ಕೆಲಸವನ್ನು ಯಾರೂ ಮಾಡಿಲ್ಲ. ವಿಧಾನಸಭೆ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕರು ಹೇಳಲಿಲ್ಲ. ಅಂದು ಸಲಹೆ ನೀಡಿದ್ದರೆ ಇಂದು ಆಪಾದನೆಗೂ ತಾಕತ್ತು ಬರುತ್ತಿತ್ತು ಎಂದರು.
ಜಿಲ್ಲಾಸ್ಪತ್ರೆಯಲ್ಲಿ ಪಿಪಿಇ ಕಿಟ್ ಧರಿಸಿ ಸೋಂಕಿತರ ಆರೋಗ್ಯ ವಿಚಾರಣೆ ನಡೆಸಿದರು.