Advertisement

ವಾಚ್ ಮ್ಯಾನ್ ಆಗದಿರುವ ಜಮೀರ್ ಈಗ ಆಸ್ತಿ ಬರೆದುಕೊಡ್ತಾರಾ: ಸಿ.ಟಿ ರವಿ ವ್ಯಂಗ್ಯ

03:01 PM Sep 12, 2020 | keerthan |

ಚಿಕ್ಕಮಗಳೂರು: ಡ್ರಗ್ ಪ್ರಕರಣದಲ್ಲಿ ತನ್ನ ಹೆಸರು ಸಾಬೀತಾದರೆ ಸಂಪೂರ್ಣ ಆಸ್ತಿ ಸರ್ಕಾರಕ್ಕೆ ಬರೆದು ಕೊಡುವುದಾಗಿ ಜಮೀರ್ ಆಹಮ್ಮದ್ ಹೇಳಿದ್ದು, ಅವರು ಈ ಹಿಂದೆ ಯಡಿಯೂರಪ್ಪ ಸಿಎಂ ಆದರೆ ನಾನು ಅವರ ಮನೆ ಮುಂದೆ ವಾಚ್ ಮ್ಯಾನ್ ಆಗುತ್ತೇನಿ ಎಂದಿದ್ದರು. ಆದರೆ ಹೇಳಿದಂತೆ ವಾಚ್ ಮ್ಯಾನ್ ಆಗಿಲ್ಲ. ವಾಚ್ ಮ್ಯಾನ್ ಆಗದೇ ಇರುವವರು, ಆಸ್ತಿ ಬರೆದುಕೊಡುತ್ತಾರಾ ಎಂದು ಸಚಿವ ಸಿ.ಟಿ.ರವಿ ವ್ಯಂಗ್ಯ ಮಾಡಿದರು.

Advertisement

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಜಮೀರ್ ಅಹಮದ್ ಆಸ್ತಿ ಅಕ್ರಮವಾಗಿದ್ದರೆ ಸರ್ಕಾರವೇ ಮುಟ್ಟುಗೋಲು ಹಾಕಿಕೊಳ್ಳುತ್ತದೆ. ಅವರ ರಾಜಕೀಯ ಹೇಳಿಕೆ ಜನರೆ ಗಂಭೀರವಾಗಿ ತೆಗೆದುಕೊಂಡಿಲ್ಲ. ನಿಜವಾಗಿಯೂ ಅವರ ಮಾತಿಗೆ ತಕ್ಕ ಹಾಗೇ ನಡೆದುಕೊಳ್ಳುದಾದರೆ ಮೊದಲು ಹೇಳಿದ ರೀತಿಯಲ್ಲಿ ನಡೆದುಕೊಳ್ಳಲಿ ಎಂದರು.

ಡ್ರಗ್ ಮಾಫಿಯಾ ಅಕ್ರಮ ಚಟುವಟಿಕೆ ತನಿಖೆ ಗಂಭೀರವಾಗಿ ನಡೆಯುತ್ತಿದೆ. ಇದರ ಬಗ್ಗೆ ಮಾಹಿತಿಯಿದ್ದರೆ ಪೊಲೀಸರಿಗೆ ನೀಡಿ. ಮೊದಲೆಲ್ಲಾ ಎಲ್ಲಿ ಪ್ರಕರಣವನ್ನು ಮುಚ್ಚಿ ಹಾಕುತ್ತಾರೆ ಎನ್ನುವ ಭಯದಿಂದ ಮಾಹಿತಿ ನೀಡುತ್ತಿರಲಿಲ್ಲ. ಇದರ ವಿರುದ್ಧಇಷ್ಟು ಗಂಭೀರ ತನಿಖೆಯಾಗಿದ್ದು ಇದೇ ಮೊದಲು. ಡ್ರಗ್ ಮಾಫಿಯಾವನ್ನು ಬೇರು ಸಹಿತ ಕಿತ್ತು ಹಾಕಬೇಕೆಂದು ತನಿಖೆ ಗಂಭೀರವಾಗಿ ನಡೆಸುತ್ತಿದ್ದೇವೆ ಎಂದರು.

ಇದನ್ನೂ ಓದಿ:ಕ್ಯಾಸಿನೋ ಜಟಾಪಟಿ: ಬಿಜೆಪಿ ಶಾಸಕರು ಮತ್ತು ಕುಮಾರಸ್ವಾಮಿ ಬಗ್ಗೆ ಜಮೀರ್ ಹೇಳಿದ್ದೇನು?

ಪ್ರಶಾಂತ್ ಸಂಬರಗಿ ಮಾತ್ರವಲ್ಲ. ಬೇರೆ ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸರಿಗೆ ಸಲ್ಲಿಸಿ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೂಡ ನನ್ನ ಬಳಿ ಮಾಹಿತಿ ಇದೆ ಅಂದಿದ್ದಾರೆ. ಅವರೂ ಅದನ್ನು ತನಿಖೆ ತಂಡಕ್ಕೆ ಹಂಚಿಕೊಳ್ಳಲಿ. ಆಗ ಡ್ರಗ್ ಜಾಲವನ್ನ ಬಗ್ಗು ಬಡಿಯಲು ಸಾಧ್ಯ ಎಂದರು.

Advertisement

ಲವ್ ಜಿಹಾದ್, ಭಯೋತ್ಪಾದನೆ, ಡ್ರಗ್ ಜಾಲ ಹೀಗೆ ಹಲವು ಮುಖಗಳ ಬಗ್ಗೆ ಹಲವರು ಮಾತಾನಾಡಿದ್ದಾರೆ. ಎಲ್ಲಾ ಮುಖಗಳ ಬಗ್ಗೆ ತನಿಖೆ ನಡೆಯುತ್ತದೆ. ತನಿಖಾ ತಂಡ ಯಶಸ್ವಿಯಾಗಿ ತನಿಖೆ ನಡೆಸುತ್ತಿದೆ. ಪ್ರಮೋದ್ ಮುತಾಲಿಕ್, ಶೋಭಾ ಕರಂದ್ಲಾಜೆ ಹೇಳಿಕೆ ಆಧಾರದ ಮೇಲೆ ತನಿಖೆ ನಡೆಯುತ್ತಿದೆ. ಹವಾಲ ಹಣದ ಬಗ್ಗೆಯೂ ಸಂಶಯವಿದೆ. ತನಿಖೆ ದಿಕ್ಕಿನಲ್ಲಿ ಹೊಸ ಮಜುಲುಗಳು ತೆರದಿಟ್ಟುಕೊಳ್ಳಬಹುದು ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next