Advertisement

ಸಿದ್ದರಾಮಯ್ಯ ತಾಲಿಬಾನ್ ಗೆ ಕಡಿಮೆ ಇಲ್ಲದ ಮನಸ್ಥಿತಿಯವರು: ಸಿ.ಟಿ.ರವಿ ಟೀಕೆ

03:34 PM Feb 28, 2022 | Team Udayavani |

ಚಿಕ್ಕಮಗಳೂರು: ಕೇಸರಿ ಶಾಲು ತಿರಸ್ಕರಿಸುವ ಸಿದ್ದರಾಮಯ್ಯ ಮುಸ್ಲಿಂ ಧರ್ಮದ ಟೋಪಿ ಧರಿಸುತ್ತಾರೆ. ಕೇಸರಿ ಪೇಟವನ್ನು ನೋಡಿದರೆ ಸಿದ್ದರಾಮಯ್ಯ ಉರಿದು ಬೀಳುತ್ತಾರೆ. ಸಿದ್ದರಾಮಯ್ಯ ಒಬ್ಬರು ಮತೀಯವಾದಿ, ಸಿದ್ದರಾಮಯ್ಯ ತಾಲಿಬಾನ್ ಕ್ಕಿಂತ ಕಡಿಮೆ ಇಲ್ಲದ ಮನಸ್ಥಿತಿಯವರು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಿಡಿಕಾರಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿವಾದದ ಮೂಲಕ ಕಾಂಗ್ರೆಸ್ ಮತಿಯ ವಾದವನ್ನು ಹೊರಹಾಕಿದೆ. ಕಾಂಗ್ರೇಸ್ ನ ಜಾತ್ಯತೀತವಾದ ಎನ್ನುವುದು ನಾಟಕ, ಹಿಂದೂಗಳನ್ನು ಮೋಸ ಮಾಡುವುದಕ್ಕೆ ಮಾತ್ರ ಉಪಯೋಗವಾಗುತ್ತದೆ ಎಂದರು.

ಕೇಸರ ಪೇಟ ನೋಡಿದರೆ ಉರಿದುಬೀಳುವ ಸಿದ್ದರಾಮಯ್ಯನವರು ಸ್ಕಲ್ ಟೋಪಿ ಹಾಕಿಕೊಂಡು ಹೋಗಿದ್ದು ನೋಡಿದಾಗ ಅವರು ಜಾತ್ಯಾತೀತವೆಂದು ಯಾವ ಲೇಬಲ್ ನಲ್ಲಿ ಬರೆದುಕೊಂಡರೂ ನಂಬಲಾಗದು. ಕುಂಕುಮ ಕಂಡರೆ ಹೆದರಿಕೆಯಾಗುತ್ತದೆಂದು ಹೇಳಿದ್ದರು. ಅವರ ತಾಯಿಯ ಹಣೆಯಲ್ಲಿ ಕುಂಕುಮ ಇದೆ, ಪತ್ನಿಯ ಹಣೆಮೇಲೂ ಕುಂಕಮವಿದೆ. ಸೊಸೆಯ ಹಣೆಮೇಲೂ ಕುಂಕುಮವಿದೆ. ಅವರಿಗೆ ಹೆಣ್ಣು ಮಕ್ಕಳಿದ್ದರೆ ಅವರ ಹಣೆಯಲ್ಲಿಯೂ ಕುಂಕುಮ ಇದೆ ಎಂದರು.

ಕುಂಕುಮದಿಂದ ಜಗತ್ತಿನಲ್ಲಿ ಎಲ್ಲೂ ಭಯೋತ್ಪಾದನೆ ನಡೆದಿಲ್ಲ. ಸ್ಕಲ್ ಟೋಪಿಯ ಜನ ತಮ್ಮವರನ್ನು ಕೊಂದಿದ್ದಾರೆ ಬೇರೆಯವರನ್ನೂ ಕೊಂದಿದ್ದಾರೆ, ಬಹುಶಃ ಇವನ್ನೆಲ್ಲ ನೋಡಿದರೆ ಅವರ ತಂದೆ ಸಿದ್ದರಾಮಯ್ಯ ಎಂದು ಹೆಸರು ಇಡುತ್ತಿರಲಿಲ್ಲ. ಹಿಂದೆ ರಾಮನ ಹೆಸರಿದೆ ಎಂದಿದ್ದರು, ಅಂದಿನ ಕಾಲದ ಸಮಾಜ ಸುಧಾರಕ ಸಿದ್ದರಾಮನ ಹೆಸರಿದೆ. ಆದರೆ ಇವರು ನಡೆದುಕೊಳ್ಳುತ್ತಿರುವ ರೀತಿಗೂ ಅವ್ರಿಗೂ ಸಂಬಂಧವಿಲ್ಲ ಎನ್ನುವುದು ವ್ಯಕ್ತವಾಗುತ್ತದೆ ಎಂದು ಸಿ.ಟಿ ರವಿ ಟೀಕೆ ಮಾಡಿದರು.

ಇದನ್ನೂ ಓದಿ:ಯುದ್ಧದಿಂದ ಭಾರತದ ಕೃಷಿ ಕ್ಷೇತ್ರದ ಮೇಲೆ ಪರಿಣಾಮದ ಬಗ್ಗೆ ಚಿಂತೆ

Advertisement

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ, ರಾಜಕಾರಣ ಬಿಟ್ಟರೆ ಬೇರೆನೂ ಇಲ್ಲವೆಂದು ಎಲ್ಲರಿಗೂ ಸ್ಪಷ್ಟವಾಗಿದೆ. ನಮ್ಮ ಪ್ರಶ್ನೆಗಳಿಗೆ ಇವತ್ತಿನವರೆಗೂ ಉತ್ತರ ಕೊಟ್ಟಿಲ್ಲ. ನೀವು ಇಲ್ಲಿ ಪಾದಯಾತ್ರೆ ನಾಟಕವನ್ನು ಮಾಡುವುದರ ಬದಲಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಿಯೋಗ ಕರೆದುಕೊಂಡು ತಮಿಳುನಾಡಗೆ ಹೋಗಿ. ಅಲ್ಲಿರುವ ಚಿದಂಬರಂ, ಡಿಎಂಕೆ ಸ್ಟಾಲಿನ್ ಅವರನ್ನು ಒಪ್ಪಿಸಿದರೆ ಸುಲಭವಾಗುತ್ತದೆ. ಅವರು ಅಕ್ಷೇಪಣೆ ಇಲ್ಲವೆಂದರೆ ಎಲ್ಲಾ ರೀತಿಯ ಅಡೆತಡೆಗಳು ನಿವಾರಣೆಯಾಗುತ್ತದೆ. ಅದನ್ನು ಮಾಡುವುದು ಬಿಟ್ಟು ಪಾದಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆ ಕೇವಲ ದೈಹಿಕ ಕಸರತ್ತು ಕೊಡಬಹುದು ಎಂದರು.

ತಮಿಳುನಾಡನ್ನು ಒಪ್ಪಿಸುವ ತಾಕತ್ತು ಸಿದ್ದರಾಮಯ್ಯನವರಿಗಿದೆ. ಸಿದ್ದರಾಮಯ್ಯ ಗುಟುರು ಹಾಕಿದರೆ ಸೋನಿಯಾ ಗಾಂಧಿ ಅಲರ್ಟ್ ಆಗುತ್ತಾರೆ. ಸೋನಿಯಾ ಗಾಂದಿ ಮಾತು ಹೇಳಿದರೆ ಚಿದಂಬರಂ ತೆಗೆದುಹಾಕಲ್ಲ. ಚಿದಂಬರಂ ಒಂದು ಮಾತು ಹೇಳಿದರೆ ಸ್ಟಾಲಿನ್ ತೆಗೆದುಹಾಕಲ್ಲ. ಇದು ಸುಲಭದಲ್ಲಿ ಅಗಲಿರುವ ಸಂಗತಿ. ಆದರೆ ಇಲ್ಲಿ ಮಾಡುತ್ತಿರುವುದು ರಾಜಕಾರಣ ಅದು ಬಿಟ್ಟು ಬೇರೆನೂ ಇಲ್ಲ ಎಂದು ಸಿ.ಟಿ ರವಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next