Advertisement

ಕಾಂಗ್ರೆಸ್ ಚಲಾವಣೆಯಲ್ಲಿ ಇಲ್ಲದ ಸವಕಲು ನಾಣ್ಯ: ಸಿ.ಟಿ.ರವಿ ವ್ಯಂಗ್ಯ

01:24 PM Dec 25, 2021 | Team Udayavani |

ಚಿಕ್ಕಮಗಳೂರು: ಕಾಂಗ್ರೆಸ್ ಚಲಾವಣೆಯಲ್ಲಿ ಇಲ್ಲದ ಸವಕಲು ನಾಣ್ಯ. ಸಿದ್ದು, ಡಿಕೆಶಿ, ಸೋನಿಯಾಗಾಂಧಿ, ಪರಮೇಶ್ವರ್ ಯಾರ ನಾಯಕತ್ವದಲ್ಲಾದರು ಎಲೆಕ್ಷನ್ ಮಾಡಲಿ, ಯಾರ ನೇತೃತ್ವದಲ್ಲಿ ಹೋದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ನಿಲುವು ಏನೆಂದು ವಿಧಾನಸಭೆ ಅಧಿವೇಶನದಲ್ಲೇ ನೋಡಿದ್ದೇವೆ. ಕಾಂಗ್ರೆಸ್ ನಿಲುವುಗಳೇ ಕಾಂಗ್ರೆಸ್ ಪಕ್ಷಕ್ಕೆ ಮಾರಕವಾಗಿವೆ. ಅವರ ನಿಲುವು, ತತ್ವಗಳಿಂದ ಕಾಂಗ್ರೆಸ್ ಸೋಲುತ್ತಿದೆ, ಅವರ ತತ್ವ-ನಿಲುವು ಜನಹಿತಕ್ಕೆ ಮಾರಕವಾಗಿದೆ. ಅವರ ತತ್ವ-ನಿಲುವು ಓಲೈಕೆ ರಾಜನೀತಿ ಅದಕ್ಕೆ ಅವರು ವಿಫಲರಾಗುತ್ತಾರೆ, ಮತ್ತೇನೂ ಇಲ್ಲ ಎಂದರು.

ಹೆಬ್ಬೆಟ್ಟಿನ ಜನ ಕೂಡ ಮತ್ತೊಬ್ಬರ ಬಳಿ ಕೇಳಿ ಹೆಬ್ಬೆಟ್ಟು ಒತ್ತುತ್ತಾರೆ. ಹೆಬ್ಬೆಟ್ಟಿನ ಜನರಿಗಾದರೂ ತಿಳುವಳಿಕೆ ಇರುತ್ತದೆ, ಇವರದ್ದು ಬರೀ ನಾಟಕ. 2016ರಲ್ಲಿ ಮತಾಂತರ ಡ್ರಾಫ್ಟ್ ಗೆ ಸಹಿ ಹಾಕಿ, ನಾನು ಹಾಕಿಲ್ಲ ಅಂದರು. ಗೊತ್ತಿಲ್ಲದೆ ಸಹಿ ಹಾಕಿದ್ದೇನೆ ಅಂದರು ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರನ್ನು ವ್ಯಂಗ್ಯಮಾಡಿದರು.

ಮೇಕೆದಾಟು ವಿಚಾರವಾಗಿ ಕಾಂಗ್ರೆಸ್ ಪಾದಯಾತ್ರೆ, ಉರುಳು ಸೇವೆ ಎನೂ ಬೇಕಾದರೂ ಮಾಡಬಹುದು, ಮಾಡಿಕೊಳ್ಳಲಿ. ಕೇಂದ್ರದಲ್ಲಿ 2004 ರಿಂದ 2014 ರವರೆಗೂ ಕಾಂಗ್ರೆಸ್ ಸರ್ಕಾರವಿತ್ತು. ಅನುಮತಿ ಕೊಟ್ಟಿದ್ದರಾ.? 1996 ರಲ್ಲಿ ಪ್ರಸ್ತಾವನೆ, ಮಂಜೂರಾತಿ ಮಾಡಿಸಿದ್ದೆವು ಎಂದು ಎಚ್.ಡಿ.ಕೆ ಹೇಳಿದ್ದಾರೆ. 2004 ರಿಂದ 2014 ಕಾಂಗ್ರೆಸ್ ಸರ್ಕಾರ ಇತ್ತಲ್ಲ ಯಾಕೆ ಅನುಮತಿ ನೀಡಿಲ್ಲ ಇವರ ಅಡಳಿತ ಅವಧಿಯಲ್ಲಿ ತೆಗೆದುಕೊಂಡ ಕ್ರಮ ಏನು ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next