Advertisement

ಮೋದಿ ನೂರು- ಮುನ್ನೂರು ವರ್ಷದ ಬಗ್ಗೆ ಯೋಚಿಸಿ ಬಜೆಟ್ ಮಾಡಿದ್ದಾರೆ: ಸಿ.ಟಿ ರವಿ

02:49 PM Feb 01, 2023 | Team Udayavani |

ಚಿಕ್ಕಮಗಳೂರು: ಪೊಲಿಟಿಷಿಯನ್ ಮತ್ತು ಸ್ಟೇಟ್ಸ್ ಮ್ಯಾನ್ ನಡುವೆ ದೊಡ್ಡ ಅಂತರವಿರುತ್ತದೆ. ಪೊಲಿಟಿಷಿಯನ್ ಮುಂದಿನ ಚುನಾವಣೆಗೋಸ್ಕರ ಯೋಚನೆ ಮಾಡುತ್ತಾರೆ ಆದರೆ ಸ್ಟೇಟ್ಸ್ ಮ್ಯಾನ್ ಮುಂದಿನ ನೂರು, ಮುನ್ನೂರು ವರ್ಷ ಭಾರತ ಹೇಗೆ ಇರಬೇಕೆಂಬ ಯೋಚನೆ ಮಾಡುತ್ತಾರೆ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ಟೇಟ್ಸ್ ಮ್ಯಾನ್. ಅವರು ಜಗತ್ತು ಹೇಗೆ ಇರುತ್ತದೆ ಎನ್ನುವುದು ಯೋಚನೆ ಮಾಡಿ ಬಜೆಟ್ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಸ್ಟೇಟ್ಸ್ ಮ್ಯಾನ್ ಅಧಿಕಾರ ನಡೆಸುತ್ತಿರುವುದಕ್ಕೆ ಜಗತ್ತಿನಲ್ಲಿ ನಾವು ಗೌರವ ಸಂಪಾದಿಸುವ ಸ್ಥಿತಿಗೆ ಬಂದಿದ್ದೇವೆ. ಹಾಗೆ ಆಗದೇ ಇದ್ದಿದ್ದರೆ ನಾವು ಕೂಡ ಪಾಕಿಸ್ಥಾನದ ರೀತಿಯಲ್ಲಿ ಭಿಕ್ಷೆ ಎತ್ತುವ ಸ್ಥಿತಿಗೆ ಬರುತ್ತಿದ್ದೆವು. ಕೇಜ್ರಿವಾಲ್ ಅಂತವರು ಅಧಿಕಾರದಲ್ಲಿ ಇದ್ದಿದ್ದರೆ ಶ್ರೀಲಂಕಾ, ಪಾಕಿಸ್ಥಾನದ ಸ್ಥಿತಿಗೆ ಬರುತ್ತಿತ್ತು. ರಾಹುಲ್ ಗಾಂಧಿ ತರಹದವರು ಇದ್ದಿದ್ದರೆ ದೇವರೇ ಕಾಪಾಡಬೇಕಾಗಿತ್ತು ಎಂದರು.

ಇದನ್ನೂ ಓದಿ:ಸಲ್ಮಾನ್‌ ಖಾನ್‌ ಗೆ ಸಿನಿಮಾ ಆಫರ್‌ ಕೊಟ್ಟ ಆಮಿರ್: ನಿರ್ಮಾಪಕರಾಗಿ ಕಂಬ್ಯಾಕ್‌ ಮಾಡ್ತಾರ ಮಿ.ಪರ್ಫೆಕ್ಟ್‌?

ಬಜೆಟ್ ನಲ್ಲಿ 7 ವಿಶೇಷಗಳಿಗೆ ಆದ್ಯತೆ ನೀಡಲಾಗಿದೆ. ಕಟ್ಟಕಡೆಯ ಮನುಷ್ಯನಿಗೆ ತಲುಪುವ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಯುವ ಸಮುದಾಯ, ಮೂಲಸೌಕರ್ಯ, ಪರಿಸರ ಸ್ನೇಹಿ ಬಜೆಟ್, ಆದಾಯ ತೆರಿಗೆ ರಿಯಾಯಿತಿ ನೀಡಲಾಗಿದೆ. ಇದು ದೂರದೃಷ್ಟಿ, ದೇಶದ ಹಿತದೃಷ್ಟಿಯುಳ್ಳ, ಬಡವರ ಸ್ನೇಹಿ ಬಜೆಟ್ ಆಗಿದೆ ಎಂದು ಸಿ.ಟಿ ರವಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next