Advertisement

ಕಾಂಗ್ರೆಸ್ ನವರು ಚಳುವಳಿ ಮಾಡುವ ಮಟ್ಟಕ್ಕೆ ಬೆಲೆ ಏರಿಕೆಯಾಗಿಲ್ಲ: ಸಿ.ಟಿ. ರವಿ

03:36 PM Sep 05, 2021 | Team Udayavani |

ಚಿಕ್ಕಮಗಳೂರು: ಕಾಂಗ್ರೆಸ್ ನವರು ಚಳುವಳಿ ಮಾಡುವ ಮಟ್ಟಕ್ಕೆ ಬೆಲೆ ಏರಿಕೆಯಾಗಿಲ್ಲ. ಕಾಂಗ್ರೆಸ್ ನವರು ಅಧಿಕಾರ ಬಿಟ್ಟು ಹೋಗುವಾಗ ಗ್ಯಾಸ್ ಬೆಲೆ 981 ರೂಪಾಯಿ ಇತ್ತು. ಬೆಲೆ ಏರಿಕೆ ವಿರುದ್ಧ ಚಳುವಳಿ ಮಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಂದ ಆರ್ಥಿಕತೆಯ ಏರಿಳಿತವನ್ನು ಇಡೀ ಜಗತ್ತು ಎದುರಿಸುತ್ತಿದೆ. ಸದ್ಯ ದೇಶದಲ್ಲಿ ಆಗಿರುವ ಬೆಲೆ ಏರಿಕೆ ತಾತ್ಕಾಲಿಕ, ಈ ಹಿಂದೆ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಕಾರಣಕ್ಕೆ ಬೆಲೆ ಏರಿಕೆಯಾಗಿತ್ತು. 20 ತಿಂಗಳು ಗರೀಬಿ ಕಲ್ಯಾಣ್ ಯೋಜನೆಯಡಿ ದವಸ ಧಾನ್ಯ ಉಚಿತವಾಗಿ ನೀಡಿರೋ ಏಕೈಕ ರಾಷ್ಟ್ರ ಭಾರತ, ನೂರು ಕೋಟಿ ಜನರಿಗೆ ಲಸಿಕೆ ನೀಡುತ್ತಿರುವ ಏಕೈಕ ರಾಷ್ಟ್ರ ಭಾರತ ಎಂದು ಬೆಲೆ ಏರಿಕೆಯನ್ನು ಸಮರ್ಥನೆ ಮಾಡಿಕೊಂಡರು.

ಗೂಂಡಾಗಿರಿಯಿಂದ ಜೈಲಿಗೆ ಹೋಗಿಲ್ಲ: ನನ್ನ ಕಾಲದಲ್ಲಿ ಕೊತ್ವಾಲ್ ರಾಮಚಂದ್ರ ಬದುಕೇ ಇರಲಿಲ್ಲ, ಕೊತ್ವಾಲ್ ರಾಮಚಂದ್ರ ಸತ್ತಾಗ ನಾನು ಪ್ರೈಮರಿ ಸ್ಕೂಲಿನಲ್ಲಿದ್ದೆ. ನಾನು ಅವರ ಶಿಷ್ಯ ಅಂತ ಹೆಮ್ಮೆಯಿಂದ ಹೇಳಿಕೊಂಡದ್ದು ನಾನಲ್ಲ. ಆ ದಿನಗಳು ಪುಸ್ತಕದಲ್ಲಿ ಯಾರು, ಯಾರ ಶಿಷ್ಯರು ಅಂತ ಬರೆದಿದ್ದಾರೆ. ಆ ಪುಸ್ತಕದಲ್ಲಿ ನನ್ನ ಹೆಸರು ಖಂಡಿತವಾಗಿಯೂ ಇಲ್ಲ ಎಂದು ಸಿ.ಟಿ.ರವಿ ಡಿ.ಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು.

ಇದನ್ನೂ ಓದಿ:ನಮ್ಮ ಸರಕಾರ ಮಾತ್ರವಲ್ಲ, ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಸಿಲಿಂಡರ್ ಬೆಲೆ ಏರಿಕೆಯಾಗಿದೆ :ಕಟೀಲ್

ರಾಜಕೀಯ ಮಾಡಲು ಗೂಂಡಾಗಿರಿ ಮೆರಿಟ್ ಎಂದು ನಾನು ಭಾವಿಸಿಲ್ಲ. ನಾನು ಚಳುವಳಿ ಮಾಡಿದ್ದೇನೆ, ಆ ಕಾರಣಕ್ಕೆ ಜೈಲಿಗೆ ಹೋಗಿದ್ದೇನೆ. ಭ್ರಷ್ಟಾಚಾರ, ಗೂಂಡಾಗಿರಿ ಮಾಡಿ ಜೈಲಿಗೆ ಹೋಗಿಲ್ಲ ನನ್ನ ಮೇಲೆ ತುಂಬಾ ಕೇಸುಗಳು ಬಿದ್ದಿವೆ ಆ ಎಲ್ಲಾ ಕೇಸುಗಳು ಹೋರಾಟ ಮಾಡಿ ಜೈಲಿಗೆ ಹೋಗಿರುವುದು, ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿಲ್ಲ, ಹೋಗಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next