Advertisement

ಸದ್ಯಕ್ಕೆ ಯಡಿಯೂರಪ್ಪನರೆ ಮುಖ್ಯಮಂತ್ರಿ : ಶಾಸಕ ಸಿ.ಟಿ ರವಿ

06:12 PM Jun 01, 2021 | Team Udayavani |

ಮೈಸೂರು : ಸದ್ಯಕ್ಕೆ ಯಡಿಯೂರಪ್ಪನರೆ ಮುಖ್ಯಮಂತ್ರಿ. ಭವಿಷ್ಯದ ಬಗ್ಗೆ ನನಗೆ ಗೊತ್ತಿಲ್ಲ. ನಾನು ವರ್ತಮಾನ ಬಗ್ಗೆ ಮಾತ್ರ ಮಾತನಾಡಬಲ್ಲೆ.ನಾಳೆ ನಾಳಿದ್ದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸಿಎಂ ಬದಲಾವಣೆಯ ವಿಷಯದ ಬಗ್ಗೆ ಶಾಸಕ ಸಿ.ಟಿ.ರವಿ ಅವರು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

Advertisement

ಇಂದು ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಬಿಜೆಪಿ ಸರ್ವಾನುಮತದಿಂದ ಯಡಿಯೂರಪ್ಪನವರನ್ನ‌ ಆಯ್ಕೆ ಮಾಡಲಾಗಿದೆ.ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಬಹುಮತದಿಂದ ಮುಖ್ಯಮಂತ್ರಿ ಆಯ್ಕೆ ಮಾಡಬಹುದ. ಆದರೆ ಸರ್ವಾನುಮತದಿಂದ ಸಾಧ್ಯವಿಲ್ಲ ಎಂದರು.

ಸಿದ್ದರಾಮಯ್ಯ ಅವರಿಗೆ ಜ್ವರ ಎಂಬ ವಿಷಯ ಕೇಳಲ್ಪಟ್ಟೆ. ಅವರು ಆದಷ್ಟು ಬೇಗ ಗುಣಮುಖರಾಗಲಿ. ಅವರೊಬ್ಬ ಉತ್ತಮ ಹಣಕಾಸು ನಿರ್ವಹಿಸಿದ ನಾಯಕ.

ಆದರೆ ಬಿಜೆಪಿ ಆಡಳಿತದಿಂದ ದೇಶ 70 ವರ್ಷ ಹಿಂದಕ್ಕೆ ಹೋಗಿದೆ ಎನ್ನುತ್ತಾರೆ. ಅವರ ಮೆದುಳು 70 ವರ್ಷಕ್ಕೆ ಹೋಗಿದೆ. ಮಲ್ಯನಿಗೆ ಸಾಲ ಕೊಟ್ಟಿದ್ದು ಮೋದಿ ಅಲ್ಲ. ಲಲಿತ್ ಮೋದಿಗೆ ಸಾಲ ಕೊಟ್ಟಿದ್ದು ಮೋದಿ ಅಲ್ಲ, ನಿಮ್ಮ ಪಕ್ಷದ ಚಿದಂಬರಂ, ಸೋನಿಯಾಗಾಂಧಿ ಅವರುಗಳು. ಉದ್ಯಮಿಗಳೊಂದಿಗೆ ಸಂಭಂದ ಇಟ್ಟುಕೊಂಡು ಸಾಲ ನೀಡಿದ್ದಾರೆ ಎಂದರು.

ಕಾಂಗ್ರೆಸ್ ನಲ್ಲಿ ಗುಲಾಮಗಿರಿ ಪದ್ದತಿ ಇದೆ. ಸಿದ್ದರಾಮಯ್ಯ ಗುಲಮರಾಗಿದ್ದಾರೆ. ಅವರಿಗೆ ಅಸಹಾಯಕತೆ ಕಾಡುತ್ತಿದೆ. ಕೋವಿಡ್ ನಲ್ಲೂ ಮೋದಿ ಸರ್ಕಾರ ಸಮರ್ಥವಾಗಿ ನಡೆಸಿಕೊಂಡು ಹೋಗಿದೆ.ಬಾದಾಮಿ, ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಬಿಜೆಪಿಗೆ ಲೀಡ್ ಬಂದಿದೆ.ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೋವಿಡ್ ನಂತ ಸಂದರ್ಭ ಎದುರಾಗಿರಲಿಲ್ಲ.

Advertisement

ರಾಜ್ಯದಲ್ಲಿ ಅತಿ ಹೆಚ್ಚು ಸಾಲ ಮಾಡಿದ ಸಿಎಂ ಎಂದರೆ ಅದು ಸಿದ್ದರಾಮಯ್ಯ, ಅದನ್ನ ಅವರು ಎದೆ ತಟ್ಟಿಕೊಂಡು ಹೇಳಿಕೊಳ್ಳಬಹುದು.ಯಾವ ಕಾರಣಕ್ಕೆ ಅತಿ ಹೆಚ್ಚು ಸಾಲ ಮಾಡಿದಿರಿ..? ಎಂದು ಪ್ರಶ್ನಿಸಿದ ಸಿಟಿ ರವಿ, ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ಕೊಡಬೇಕಿತ್ತು, ಆದರೆ ಅಂತಹ ದುಸ್ಸ್ಥಿತಿ ಮೋದಿ ಅವರಿಗೆ ಬಂದಿಲ್ಲ.

ಜನಧನ್ ಖಾತೆಗೆ 3 ಸಾವಿರ ಹಮ ಹಾಕಿದೆ. ಉದ್ದಿಮೆದಾರರ, ಸಣ್ಣ ಕೈಗಾರಿಕೋದ್ಯಮಿಗಳ ಪ್ಯಾಕೇಜ್ ನೀಡಿದೆ. ನಿಮಗೂ ಸತ್ಯ ಗೊತ್ತಿದೆ ಆದರೆ ಸತ್ಯ ಒಪ್ಪಿಕೊಂಡರೆ ಕಾಂಗ್ರೆಸ್ ನಿಂದ ಹೊರ ಬರಬೇಕಾಗುತ್ತದೆ ಆದ್ದರಿಂದ ಸುಮ್ಮನಿದ್ದೀರಿ. ಈ ವಿಚಾರವಾಗಿ ಚರ್ಚೆಗೂ ನಾವು ಸಿದ್ದ ಎಂದರು.

ನಾವು ಕಾಂಗ್ರೆಸ್ ನ್ನು ಜವಬ್ದಾರಿ ಪಕ್ಷ ಎಂದುಕೊಂಡಿದ್ದೆವು. ಇದರಿಂದ ಕೋವಿಡ್ ಸಂಧರ್ಭದಲ್ಲಿ ಸಹಕಾರದ ನಿರೀಕ್ಷೆ ಮಾಡಿದ್ದೆವು. ಸಹಕಾರದ ಬದಲು ಟೂಲ್ ಕಿಟ್ ಮೂಲಕ ಅರಾಜಕತೆ ಹುಟ್ಟುಹಾಕಿದ್ದಾರೆ. ಅಕ್ಸಿಜನ್ ಕೊರತೆ ಉಂಟಾದಾಗ ಅದನ್ನು ಸಮರ್ಥವಾಗಿ ಸಮಸ್ಯೆ ಪರಿಹಾರ ಹುಡುಕಿದ್ದೇವೆ. ಸಮರ್ಥವಾಗಿ ಕೊರೊನಾ ನಿಯಂತ್ರಣ ಮಾಡಲಾಗುತ್ತಿದೆ. ಹೊಸ ಹೊಸ ಸವಾಲು ಬಂದಾಗ ಅದನ್ನು ಹೆದರಿಸುತಿದ್ದೇವೆ. ಆದ್ರೆ ಕಾಂಗ್ರೆಸ್ ಮಾತ್ರ ತದ್ವಿರುದ್ಧವಾಗಿ ಕೆಲಸ ಮಾಡುತ್ತಿದೆ.

ಕಾಂಗ್ರೆಸ್ ನವರಿಗೆ ಕೊರೊನಾ ಚೀನಿ ವೈರಸ್ ಎಂದು ಕರೆಯಲು ದೈರ್ಯ ವಿಲ್ಲ. ಇಂಡಿಯನ್ ವೈರಸ್ ಎಂದು ಕಾಂಗ್ರೆಸ್ ಹೇಳುತ್ತಿದೆ. ಕಾಂಗ್ರೆಸ್ ಕೊರೊನಾವನ್ನು ವಿಜೃಂಭಿಸುವ ಕೆಲಸವನ್ನು ಮಾಡುತ್ತಿದೆ.  ಮೈಸೂರಿನಲ್ಲಿ ಕಾಂಗ್ರೆಸ್ ವಿರುದ್ಧ ಸಿ.ಟಿ.ರವಿ ವಾಗ್ದಾಳಿ.

ಕಾಂಗ್ರೆಸ್ ನಲ್ಲಿ ಗುಲಾಮರಿಗೆ ಮಾತ್ರ ಅವಕಾಶ. ಸತ್ಯ ಹೇಳುವವರಿಗೆ ಅವಕಾಶ ಇಲ್ಲ. ಸತ್ಯ ಹೇಳಿದ್ರೆ ಸಿದ್ದರಾಮಯ್ಯರನ್ನ ಕಾಂಗ್ರೆಸ್‌ನಿಂದ ಹೊರಗೆ ಹಾಕ್ತಾರೆ ಅನ್ನೋ ಆತಂಕ ಇದೆ.  ಆದ್ರೆ ಸತ್ಯವೆಲ್ಲ ಸಿದ್ದರಾಮಯ್ಯಗೆ ಗೊತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next