Advertisement
ತಾಲೂಕಿನ ಟಿ.ಬೇಗೂರು ಸಮೀಪದ ಶ್ರೀಸಿದ್ಧಾರ್ಥ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ ಸಿ.ಟಿ. ಸ್ಕ್ಯಾನ್ ಸೆಂಟರ್, ವೆಲ್ಟಿಲೇಟರ್ ಬೆಡ್ ಸೆಂಟರ್ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ಕೋವಿಡ್ ಮೂರನೇ ಅಲೆ ಬರುತ್ತಿರುವ ಕಾರಣ ಆರ್‌ಟಿಪಿಸಿಆರ್ ಟೆಸ್ಟ್‌ನಲ್ಲಿ ಕೋವಿಡ್ ದೃಢವಾಗದೇ ಸಿ.ಟಿ. ಸ್ಕ್ಯಾನ್‌ಗಾಗಿ ಬೆಂಗಳೂರು ಅಥವಾ ತುಮಕೂರಿನ ಭಾಗಗಳಿಗೆ ಜನರು ಹೋಗ ಬೇಕಾಗಿತ್ತು. ಆದರೆ, ಟಿ.ಬೇಗೂರಿನಿಂದ 50 ಕಿ.ಮೀ ವ್ಯಾಪ್ತಿಯಲ್ಲಿರುವ ಏಕೈಕ ಆಧುನಿಕ ಸಿ.ಟಿ. ಸ್ಕ್ಯಾನ್ ಉಪಕರಣವನ್ನು ಸಿದ್ಧಾರ್ಥ ಸಂಸ್ಥೆ ಪರಿಚಯಿಸಿದೆ. ಕೇವಲ 1500 ಸಾವಿರ ಹಣದಲ್ಲಿ ಸೌಲಭ್ಯ ನೀಡಲು ಬದ್ಧವಾಗಿದ್ದೇವೆ. ತುರ್ತು ಸಮಯದಲ್ಲಿ ಸಿ.ಟಿ. ಸ್ಕ್ಯಾನ್ ಇರುವ ಆಸ್ಪತ್ರೆ ಯೊಂದು ಬಹಳಷ್ಟು ಹಣಪಡೆದು ಜನರಿಗೆ ಸಮಸ್ಯೆ ಮಾಡಿರುವುದು ತಿಳಿದಿದೆ. ನಾವು ಹಣ ಮಾಡಲು ಬಂದಿಲ್ಲ, ಸೇವೆ ಮಾಡಲು ಬಂದಿದ್ದೇವೆ. ಜನರಲ್ ವಾರ್ಡ್ ಸಂಪೂರ್ಣ ಉಚಿತವಾಗಿದ್ದು, ಐಸಿಯು ಬೆಡ್ 24 ಗಂಟೆಗೆ ಕೇವಲ 2 ಸಾವಿರ, ವೆಲ್ಟಿಲೇಟರ್ ಇರುವ ಐಸಿ ಯುಗೆ 3250 ರೂ. ಮಾತ್ರ ಪಡೆದುಕೊಳ್ಳಲಾಗುತ್ತದೆ ಎಂದರು.
ಕಡಿಮೆ ಬೆಲೆಯಲ್ಲಿ ಸೌಲಭ್ಯ ನೀಡಲಾಗುತ್ತಿದೆ. ಕೋವಿಡ್ ಮೂರನೇ ಅಲೆಯ ನಿಯಂತ್ರಣ ಹಾಗೂ ನಿರ್ವಹಣೆಗೆ ಸಿದ್ಧಾರ್ಥ ಸಂಸ್ಥೆ ಅನುಕೂಲವಾಗಿದೆ ಎಂದರು.
Related Articles
Advertisement
120 ಸಂಸ್ಥೆಗಳ ಮೂಲಕ ಶಿಕ್ಷಣ ನೀಡುತ್ತಿರುವ, ಗೃಹ ಇಲಾಖೆ ಸೇರಿದಂತೆ ಅನೇಕ ಇಲಾಖೆ ಸಚಿವ ಸ್ಥಾನ ಪಡೆದು ಉಪಮುಖ್ಯಮಂತ್ರಿಯಾಗಿ ಅನುಭವವಿರುವ ಜಿ.ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ ಆಗಬೇಕು ಎನ್ನುವ ಬಯಕೆ ನನಗಿದೆ. ಪಕ್ಷಾತೀತವಾಗಿ ಸಿಎಂ ಆಗ ಬೇಕಾಗಿದ್ದು, ದಲಿತ ಸಿಎಂ ಎಂಬ ವಿಚಾರಗಳು ಬರಬಾರದು.ಅವರ ಸೇವೆ ನೋಡಿ ಸ್ಥಾನ ನೀಡಬೇಕು. ಪರಮೇ ಶ್ವರ್ ಸಿಎಂ ಆಗಬೇಕು ಎನ್ನುವ ವಿಚಾರ ನನ್ನ ವೈಯಕ್ತಿಕ ಪಕ್ಷಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿಸಿದರು.
ಬೇರೆ ಅರ್ಥ ಕಲ್ಪಿಸುವುದು ಬೇಡ: ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಮಾತನಾಡಿ, ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಅವರ ಅಭಿಮಾನದ ಮಾತನ್ನು ಹೇಳಿದ್ದಾರೆ. ಅವರು ಜೆಡಿಎಸ್ ಶಾಸಕರಾಗಿರುವುದರಿಂದ ಬೇರೆ ಅರ್ಥ ಕಲ್ಪಿಸುವುದು ಬೇಡ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ. ಸಿಎಂ ಸ್ಥಾನದ ವಿಚಾರ ಸಿಎಲ್‌ಪಿ ಸಭೆಯಲ್ಲಿ ತೀರ್ಮಾನವಾಗಿ ಹೈಕಮಾಂಡ್‌ನ ಹಿರಿಯರ ಚರ್ಚೆಯ ನಂತರ ಘೋಷಣೆಯಾಗುತ್ತದೆ. ಅದರ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜತೆ ನಿಂತು ಕೆಲಸ ಮಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುತ್ತೇವೆ ಎಂದರು. ಸಿದ್ಧಾರ್ಥ ವಿವಿ ಕುಲಪತಿ ಡಾ.ಬಾಲಕೃಷ್ಣಪ್ಪ, ತುಮಕೂರು ಸಿದ್ಧಾರ್ಥ ಕಾಲೇಜಿನ ಪ್ರಾಂಶುಪಾಲ ಎಸ್.ಸಿ ಮಹಾಪಾತ್ರ, ಉಪಪ್ರಾಂಶುಪಾಲ ಶ್ರೀನಿವಾಸ್, ಸಿದ್ಧಾರ್ಥ ಸಂಸ್ಥೆಯ ಪ್ರಾಂಶುಪಾಲ ವಾಸುದೇವ್, ಮುಖ್ಯಸ್ಥ ದೇವದಾಸ್, ಡಾ.ಮನೋಹರ್, ಸುದೀಪ್ ಹಾಜರಿದ್ದರು.
ತುರ್ತು ಸಮಯದಲ್ಲಿಯೂ ಸಹ ಆಸ್ಪತ್ರೆಯೊಂದರಲ್ಲಿ ಸಿ.ಟಿ.ಸ್ಕ್ಯಾನ್‌ಗೆ 6 ಸಾವಿರಕ್ಕೂ ಹೆಚ್ಚು ಹಣ ಪಡೆದು ಜನರನ್ನು ಸುಲಿಗೆ ಮಾಡಿರುವುದು ದುರಂತವೇ ಸರಿ. ಇಂತಹ ಆಸ್ಪತ್ರೆಗಳು ಜನರ ಹಣದ ಮೇಲೆ ಸುಖಪಡೆಯಲು ಮುಂದಾಗುವುದು ಸರಿಯಲ್ಲ. ಮೂರನೇ ಅಲೆಯ ಮೊದಲೇಸಿ.ಟಿ. ಸ್ಕ್ಯಾನ್ ಸೆಂಟರ್ ತಂದಿರುವುದು ಬಹಳಷ್ಟು ಪ್ರಯೋಜನವಾಗಿದೆ.
– ಡಾ.ಕೆ.ಶ್ರೀನಿವಾಸಮೂರ್ತಿ, ಶಾಸಕ