Advertisement

C. Rajagopalachari; ನೆಹರೂ ವಿರೋಧಿಸಿ, ಆರಂಭವಾದ ಸ್ವತಂತ್ರ ಪಾರ್ಟಿ

12:36 AM Mar 11, 2024 | Team Udayavani |

ನೆಹರೂ ಸಮಾಜವಾದವನ್ನು ವಿರೋಧಿಸುತ್ತಿದ್ದ ಸಿ ರಾಜಗೋಪಾಲಾಚಾರಿ ಅವರು “ಸ್ವತಂತ್ರ ಪಾರ್ಟಿ’ಯನ್ನು ಸ್ಥಾಪಿಸಿ ದರು. ಇದು 1959ರಿಂದ 1974ರ ವರೆಗೂ ಅಸ್ತಿತ್ವ ದ್ಲಲ್ಲಿತ್ತು. ಪಕ್ಷವು ಸಂಪ್ರದಾಯವಾದಿವಾಗಿದ್ದರೂ ಅದರ ಸ್ವರೂಪದಲ್ಲಿ ಉದಾರವಾದವೂ ಇತ್ತು.

Advertisement

ಕಾಂಗ್ರೆಸ್‌ನಲ್ಲಿದ್ದ ಟಿ.ಪಿ. ಪಂತ್‌, ಮಿನೋ ಮಸಾನಿ, ಎನ್‌ ಜಿ ರಂಗಾ ಮತ್ತು ಕೆ ಎಂ ಮುನ್ಶಿ ಈ ಪಕ್ಷದ ಪ್ರಮುಖ ನಾಯಕರಾಗಿದ್ದರು. “ಮಧ್ಯ ವಯಸ್ಸಿನ ನಾಯಕರ ಭೂ ಒಡೆಯರ ಪಕ್ಷ’ ಎಂದು ನೆಹರೂ ಈ ಪಕ್ಷವನ್ನು ಟೀಕಿಸುತ್ತಿದ್ದರು! ಎದುರಿಸಿದ ಮೊದಲ ಚುನಾವಣೆಯಲ್ಲಿ 18 ಸ್ಥಾನ ಗೆದ್ದಿತು.

ಬಿಹಾರ, ರಾಜಸ್ಥಾನ, ಗುಜರಾತ್‌ ಮತ್ತು ಒಡಿಶಾ ವಿಧಾನಸಭೆಗಳಲ್ಲಿ ಪ್ರಮುಖ ವಿರೋಧ ಪಕ್ಷವಾಯಿತು. 4ನೇ ಲೋಕಸಭೆ ಚುನಾವಣೆಯಲ್ಲಿ 44 ಸ್ಥಾನ ಗೆದ್ದು, ವಿಪಕ್ಷವಾಗಿ ಹೊರಹೊಮ್ಮಿತು. 1974ರಲ್ಲಿ ರಾಜಗೋಪಾಲಚಾರಿ ನಿಧನ ಹೊಂದಿದ ಬಳಿಕ, ಪಕ್ಷವನ್ನು ಭಾರತೀಯ ಲೋಕದಳ ಪಕ್ಷದ ಜತೆ ವಿಲೀನಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next