ಕುಣಿಗಲ್: ತಾಲೂಕು ಬಿಜೆಪಿ ಘಟಕವು ಎಡೆಯೂರಿನಿಂದ ಕುಣಿಗಲ್ ಮಾರ್ಗವಾಗಿ ಹುಲಿಯೂರು ದುರ್ಗದವರೆಗೆ 40 ಕಿ.ಮೀ ದೂರದ ಬೃಹತ್ ಬೈಕ್ ರ್ಯಾಲಿ ನಡೆಸಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವಥನಾರಾಯಣ್‌ಗೌಡ ಪರವಾಗಿ ಮತಯಾಚಿಸಿದರು.
ಬುಧವಾರ ಬೆಳಗ್ಗೆ 10 ಗಂಟೆಗೆ ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಅಭ್ಯರ್ಥಿ ಅಶ್ವಥ್‌ನಾರಾಯಣ್‌ಗೌಡ, ಮಾಜಿ ಸಚಿವ ಕಟ್ಟಾಸುಬ್ರಮಣ್ಯ ನಾಯ್ಡು, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಡಿ.ಕೃಷ್ಣಕುಮಾರ್ ನಂತರ ನೂರಾರು ಬೆಂಬಲಿಗರೊಂದಿಗೆ ಬೈಕ್ ರ್ಯಾಲಿ ಮೂಲಕ ಎಡೆಯೂರು, ಮಾಗಡಿಪಾಳ್ಯ, ಆಲಪ್ಪನಗುಡ್ಡೆ, ಬಿಳಿ ದೇವಾ
ಲಯ ಮಾರ್ಗವಾಗಿ ಕುಣಿಗಲ್ ಪಟ್ಟಣದವರಗೆ ಬೃಹತ್ ರ್ಯಾಲಿ ನಡೆಸಿದರು. ಬಳಿಕ ಪಟ್ಟಣದ ಹುಚ್ಚಮಾಸ್ತಿಗೌಡ ಸರ್ಕಲ್‌ನಲ್ಲಿ ಮಾಜಿ ಸಚಿವ, ಬಿಜೆಪಿ ಮುಖಂಡ ಸಿ.ಪಿ.ಯೊಗೀಶ್ವರ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿ ಡಿಕೆಶಿ ಬ್ರದರ್ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.
ಮೂರು ಪಟ್ಟು ಆದಾಯ ದುಪ್ಪಟ್ಟು: ಡಿ.ಕೆ.ಸುರೇಶ್ 2014ರ ಲೋಕಸಭಾ ಚುನಾವಣಾ ವೇಳೆಯಲ್ಲಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಕ್ಕಿಂತ ಮೂರು ಪಟ್ಟು ಆದಾಯ ದುಪ್ಪಟ್ಟಾಗಿದೆ. ಆದರೆ, ಈ ಆದಾಯ ಯಾವ ಮೂಲದಿಂದ ಬಂದಿದೆ ಎಂದು ಜನರಿಗೆ ತಿಳಿಸಬೇಕೆಂದರು.ಆದಾಯ ಹೆಚ್ಚಿಸಿಕೊಳ್ಳಲು ಡಿಕೆಶಿ ಬ್ರದರ್ಗೆ ಅಧಿಕಾರ ಬೇಕು, ವಿನಃ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳು ಬೇಕಾಗಿಲ್ಲಎಂದು ಹರಿಹಾಯ್ದರು. ಡಿಕೆಶಿ ಅವರ ದೌರ್ಜನ್ಯ, ದಬ್ಟಾಳಿಕೆ ಹೋಗಲಾಡಿಸಿ ಉತ್ತಮ ಆಡಳಿತ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿ ಅಶ್ವಥ್‌ನಾರಾಯಣ್‌ಗೌಡ ಅವರನ್ನು ಗೆಲ್ಲಿಸಬೇಕೆಂದು ಯೋಗಿಶ್ವರ್ ಮನವಿ ಮಾಡಿದರು.
ಮರಳು ಮಾಡುವವರನ್ನು ನಂಬಬೇಡಿ: ಬಿಜೆಪಿ ಅಭ್ಯರ್ಥಿ ಅಶ್ವಥ್‌ನಾರಾಯಣ್‌ಗೌಡ ಮಾತನಾಡಿ, ಸಂಸದ ಡಿ.ಕೆ.ಸುರೇಶ್ ಅವರು ಗ್ರಾಪಂ, ಜಿಪಂ ಹಾಗೂ ನಗರಸಭೆ ಸದಸ್ಯರು ಮಾಡಿರುವ ಕೆಲಸವನ್ನು ನಾನು
ಮಾಡಿದ್ದೇನೆ ಎಂದು ಕರಪತ್ರದಲ್ಲಿ ಮುದ್ರಿಸಿ ಜನರನ್ನು ಮರಳು ಮಾಡಲು ಹೊರಟಿದ್ದಾರೆ. ಮರಳು ಮಾಡುವ ರಾಜಕಾರಣಿಗಳನ್ನು ಎಂದೂ ನಂಬಬೇಡಿ ಎಂದು ತಿಳಿಸಿದ ಅವರು, ನಾನು ಸಂಸದನಾದರೇ ಕುಣಿಗಲ್ ತಾಲೂಕು ಸೇರಿದಂತೆ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ನೀರಾವರಿ, ಕೈಗಾರಿಕೆ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳನ್ನು ಪ್ರತಿ
ಗ್ರಾಮೀಣ ಪ್ರದೇಶಕ್ಕೆ ತಲುಪಿಸುವಂಥ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಡಿ.ಕೃಷ್ಣಕುಮಾರ್ ಮಾತನಾಡಿದರು.
ರ್ಯಾಲಿಯಲ್ಲಿ ತಾಪಂ ಸದಸ್ಯ ಕೆ.ಎಸ್.ಬಲರಾಮ್, ನಗರ ಬಿಜೆಪಿ ಅಧ್ಯಕ್ಷ ಕೃಷ್ಣ, ಜಿಪಂ ಮಾಜಿ ಸದಸ್ಯಅರುಣ್‌ಕುಮಾರ್, ಎಡೆಯೂರು ಬಿಜೆಪಿ ಘಟಕದಅಧ್ಯಕ್ಷ ತಿಮ್ಮೇಗೌಡ, ಮುಖಂಡರಾದ ಬಿ.ಆರ್. ನಾರಾಯಣಗೌಡ, ಎನ್.ರಂಗಸ್ವಾಮಿ, ದೇವರಾಜ್‌ಮತ್ತಿತರರಿದ್ದರು. ನಂತರ ಬೈಕ್ ರ್ಯಾಲಿ ಸಂತೇ ಮಾವತ್ತೂರು ಮಾರ್ಗವಾಗಿ ಹುಲಿಯೂರುದುರ್ಗಕ್ಕೆ ತೆರಳಿತು.