Advertisement

“ಸಿ’ಗ್ರೇಡ್‌ ದೇಗುಲ ಶೀಘ್ರ ಅಭಿವೃದ್ಧಿಗೆ ಚಿಂತನೆ: ಶೋಭಾ ಕರಂದ್ಲಾಜೆ

10:24 PM Jan 29, 2020 | mahesh |

ಕಾಣಿಯೂರು: ಎ ಗ್ರೇಡ್‌ ದೇವಸ್ಥಾನಗಳಿಂದ ಸಿಗುವ ಆದಾಯದಿಂದ ಸಿ ಗ್ರೇಡ್‌ ದೇವಸ್ಥಾನಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸುತ್ತಿದ್ದು, ಇದು ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಅವರು ಜ. 28ರಂದು ರಾತ್ರಿ ಚಾರ್ವಾಕ ಗ್ರಾಮದ ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವರ ಪುನರ್‌ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇವಸ್ಥಾನದೊಳಗೆ ಜಾತಿ, ರಾಜಕೀಯ ಬೇಡ, ದೇವಸ್ಥಾನದಲ್ಲಿ ರಾಜಕೀಯವನ್ನು ಶಾಶ್ವತವಾಗಿ ಕೈ ಬಿಟ್ಟಾಗ ಮಾತ್ರ ದೇವಸ್ಥಾನಗಳು ಅಭಿವೃದ್ಧಿ ಕಾಣಲು ಸಾಧ್ಯ. ಮಾಚಿಲ ಉಳ್ಳಾಲ್ತಿ ಕ್ಷೇತ್ರದ ಅಭಿವೃದ್ಧಿಗೆ 10 ಲಕ್ಷ ರೂ. ಅನುದಾನ ನೀಡುವುದಾಗಿ ಶೋಭಾ ಕರಂದ್ಲಾಜೆ ಹೇಳಿದರು.

ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋನಪ್ಪ ಗೌಡ ಉಳವ ಅಧ್ಯಕ್ಷತೆ ವಹಿಸಿದ್ದರು.  ಕಾಣಿಯೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಮಾಧವಿ ಕೋಡಂದೂರು, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ಗ್ರಾಮ ಪಂಚಾಯತ್‌ ಸದಸ್ಯರಾದ ಸೀತಮ್ಮ ಖಂಡಿಗ, ವೀರಪ್ಪ ಗೌಡ ಉದ್ಲಡ್ಡ, ಗಣೇಶ್‌ ಉದುನಡ್ಕ, ಮಾಚಿಲ ಉಳ್ಳಾಲ್ತಿ ಮೂಲಕ್ಷೇತ್ರದ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಯು.ಪಿ. ರಾಮಕೃಷ್ಣ, ಉಪಾಧ್ಯಕ್ಷ ವಿಜಯಕುಮಾರ್‌ ಸೊರಕೆ, ದೇವಸ್ಥಾನದ ಮೊಕ್ತೇಸರರಾದ ನಾರ್ಣಪ್ಪ ಗೌಡ ಮಾಚಿಲ, ವ್ಯವಸ್ಥಾಪನ ಸಮಿತಿ ಸದಸ್ಯರಾದ ನಾರಾಯಣ ಗೌಡ ಮಾಚಿಲ, ವನಿತಾ ಕುಂಬ್ಲಾಡಿ, ಭಾಗೀರಥಿ ಕುಂಬ್ಲಾಡಿ, ತನಿಯ ಕುಂಬ್ಲಾಡಿ, ವೆಂಕಪ್ಪ ಗೌಡ ಕಂಪ, ಗಣಪತಿ ಭಟ್‌ ಉಪಸ್ಥಿತರಿದ್ದರು. ಶಿವರಾಮ ಮಾಚಿಲ, ಸುನೀತಾ ಬಾಕಿಲ, ಶಿವರಾಮ ಚೊಕ್ಕಾಡಿ, ಆನಂದ ಕೊಪ್ಪ, ಪ್ರಕಾಶ್‌ ಅರುವ, ವೆಂಕಟ್ರಮಣ ಗೌಡ, ವಸಂತ ಬಾಕಿಲ, ವಿಶ್ವನಾಥ ಖಂಡಿಗ, ಭವಾನಿ ಕುಂಬ್ಲಾಡಿ, ಸುನಂದ ಮಾಧವ, ವಿನ್ಯಾಸ್‌ ಅಂಬುಲ ಅತಿಥಿಗಳನ್ನು ಗೌರವಿಸಿದರು.

ಸನ್ಮಾನ
ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಪಂಗಡದ ಸಂಚಾಲಕ ವಿಶ್ವನಾಥ ಗೌಡ ಕಂಪ, ಸಹ ಸಂಚಾಲಕ ವಿಶ್ವನಾಥ ಖಂಡಿಗ, ಕಾರ್ಯದರ್ಶಿ ಕೇಶವ ಖಂಡಿಗ, ಜತೆ ಕಾರ್ಯದರ್ಶಿ ವಸಂತ ವಜ್ರಡ್ಕ, ಕೋಶಾಧಿಕಾರಿ ಜನಾರ್ದನ ಕೆಳಗಿನಕೇರಿ ಅವರನ್ನು ಸನ್ಮಾನಿಸಲಾಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೆಂಕಪ್ಪ ಗೌಡ ಮಾಚಿಲ ಪ್ರಸ್ತಾವನೆಗೈದರು. ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ಕೆ.ವಿ. ಮಾಧವ ಗೌಡ ಕರಂದ್ಲಾಜೆ ಸ್ವಾಗತಿಸಿ, ಆನಂದ ಖಂಡಿಗ ವಂದಿಸಿದರು. ಪದ್ಮ ಬಿ.ಸಿ. ಚಾರ್ವಾಕ ಕಾರ್ಯಕ್ರಮ ನಿರೂಪಿಸಿದರು.

ಹೊರೆಕಾಣಿಕೆ ಸಮರ್ಪಣೆ
ಪುನರ್‌ ಪ್ರತಿಷ್ಠಾ ವಾರ್ಷಿಕೋತ್ಸವ ನಿಮಿತ್ತ ಭಕ್ತರು ಜ. 28ರಂದು ಹೊರೆಕಾಣಿಕೆ ಸಮರ್ಪಿಸಿದರು. ಅರುವಗುತ್ತು ಮನೆಯಿಂದ ದೇವರ ಆಭರಣ ತರುವುದು, ನಾಲ್ಕಂಬ ಉಳ್ಳಾಲ್ತಿ ಕ್ಷೇತ್ರದಲ್ಲಿ ಪ್ರಾರ್ಥನೆ, ಹೊರೆಕಾಣಿಕೆ ಸಮರ್ಪಣೆ, ಬಳಿಕ ದೇವಸ್ಥಾನದಲ್ಲಿ ತೋರಣ ಮುಹೂರ್ತ, ಅಂಕದ ಕೂಟೇಲುನಲ್ಲಿ ಗಣಪತಿ ಹೋಮ, ಪ್ರಾರ್ಥನೆ, ಮಧ್ಯಾಹ್ನ ಶ್ರೀ ದೇವರ ಮಹಾಪೂಜೆ, ಸಂಜೆ ಕ್ಷೇತ್ರದ ತಂತ್ರಿ ವರ್ಗದವರಿಗೆ ಸ್ವಾಗತ, ರಾತ್ರಿ ಪ್ರಾಸಾದ ಶುದ್ಧಿ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ, ರಾತ್ರಿ ಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಸ್ಥಳೀಯ ತೀರ್ಥಕೇರಿ, ನಾಣಿಲ, ಮುದುವ ಅಂಗನವಾಡಿ ಹಾಗೂ ನಾಣಿಲ ಹಾಗೂ ಕೊಪ್ಪ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Advertisement

ದೇವಸ್ಥಾನದ ಆಡಳಿತೆ ಮೊಕ್ತೇಸರ ನಾರ್ಣಪ್ಪ ಗೌಡ ಮಾಚಿಲ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋನಪ್ಪ ಗೌಡ ಉಳವ, ಪ್ರಧಾನ ಅರ್ಚಕ ಗಣಪತಿ ಭಟ್‌, ಶ್ರೀ ನಾಲ್ಕಂಬ ಉಳ್ಳಾಲ್ತಿ ಮೂಲಕ್ಷೇತ್ರ ಮಾಚಿಲ ಕುಂಬ್ಲಾಡಿ ಹಾಗೂ ಸಪರಿವಾರ ದೈವಗಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೆಂಕಪ್ಪ ಗೌಡ ಮಾಚಿಲ, ಗೌರವಾಧ್ಯಕ್ಷೆ ಚಂದ್ರಕಲಾ ಜಯರಾಮ ಅರುವಗುತ್ತು, ಕಾರ್ಯದರ್ಶಿ ವಿಶ್ವನಾಥ ಅಂಬುಲ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರಾಮಕೃಷ್ಣ ಗೌಡ, ಗೌರವಾಧ್ಯಕ್ಷ ಮೋಹನ ಗೌಡ ಇಡ್ಯಡ್ಕ, ಕಾರ್ಯದರ್ಶಿ ಕೆ.ವಿ., ಮಾಧವ ಕರಂದ್ಲಾಜೆ, ಕ್ಷೇತ್ರಶರಾದ ಪೆರ್ಗಡೆ ಗೌಡ ಮಾಚಿಲ, ನಾಲ್ಕಂಬ ಅಭಿವೃದ್ಧಿ ಸಮಿತಿ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ ಉಪಸ್ಥಿತರಿದ್ದರು.

ಇಂದಿನಿಂದ ನವೀಕರಣ ಪ್ರತಿಷ್ಠಾ ಬ್ರಹ್ಮಕಲಶ
ಜ. 30ರಿಂದ ಫೆ. 3ರ ವರೆಗೆ ನಾಲ್ಕಂಬ ಉಳ್ಳಾಲ್ತಿ ಮೂಲಕ್ಷೇತ್ರ ಮಾಚಿಲ ಕುಂಬ್ಲಾಡಿ ಮತ್ತು ನಾಗ ಸಾನ್ನಿಧ್ಯ, ವ್ಯಾಘ್ರ ಚಾಮುಂಡಿ, ಶಿರಾಡಿ ಹಾಗೂ ಪರಿವಾರ ದೈವಗಳ ನವೀಕರಣ ಬ್ರಹ್ಮಕಲಶೋತ್ಸವ ನಡೆಯಲಿದೆ. ಜ. 30ರಂದು ಸವಣೂರು ಪುದುವೆಟ್ಟು ಜಿನ ಮಂದಿರದ ವಠಾರದಿಂದ ಶ್ರೀ ಉಳ್ಳಾಲ್ತಿ ದೇವಿಯ ಪಲ್ಲಕ್ಕಿಯನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಗುವುದು, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಅವರು ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ. ಸಂಜೆ ತಂತ್ರಿಗಳ ಆಗಮನ, ಬಳಿಕ ವಿವಿಧ ಧಾರ್ಮಿಕ ವಿಧಿ – ವಿಧಾನಗಳ ನಡೆಯಲಿದ್ದು, ದೇವಸ್ಥಾನದಿಂದ ಶ್ರೀ ಉಳ್ಳಾಲ್ತಿ ದೇವಿಯ ಭಂಡಾರ ಮೂಲಕ್ಷೇತ್ರಕ್ಕೆ ಆಗಮನವಾಗಲಿದೆ.

ವಸ್ತ್ರಸಂಹಿತೆ ಜಾರಿಯಾಗಲಿ
ಕಾರ್ಯಕ್ರಮ ಉದ್ಘಾಟಿಸಿದ ನ್ಯಾಯವಾದಿ, ಧಾರ್ಮಿಕ ಪರಿಷತ್‌ನ ಮಾಜಿ ಸದಸ್ಯ ಎನ್‌.ಕೆ. ಜಗನ್ನಿವಾಸ್‌ ರಾವ್‌ ಮಾತನಾಡಿ, ದೇವಸ್ಥಾನದೊಳಗೆ ಬರುವಾಗ ದೇವರ ಆರಾಧನೆಯ ವಿಚಾರಗಳು ಮಾತ್ರ ನಮ್ಮ ಮನಸ್ಸಿನಲ್ಲಿರಬೇಕು. ಎಲ್ಲರೂ ಒಂದೇ ಎನ್ನುವ ಭಾವನೆಯನ್ನು ಇಟ್ಟುಕೊಂಡಾಗ ಶ್ರದ್ಧಾ ಕೇಂದ್ರ ಬೆಳೆಯಲು ಸಾಧ್ಯ. ವಸ್ತ್ರ ಸಂಹಿತೆಯನ್ನು ಜಾರಿಗೆ ತಂದರೆ ಉತ್ತಮ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next