Advertisement
ಮೂಲಗಳ ಪ್ರಕಾರ, “ಸೆಕ್ಸ್ ಸಿ.ಡಿ.’ ಡೀಲ್ ಮಾಡುತ್ತಿರುವ ಚಾನೆಲ್ ಸಿಬಂದಿ “ಸ್ಟಿಂಗ್ ಆಪರೇಷನ್’ ಹೆಸರಿನಲ್ಲಿ ಈ ಹಿಂದೆಯೂ ಹಲವು ರಾಜಕಾರಣಿಗಳು ಹಾಗೂ ಗಣ್ಯರನ್ನು ವೀಡಿಯೋ ಮೂಲಕ ಬ್ಲ್ಯಾಕ್‌ವೆುಲ್ ಮಾಡುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಈ ಹಿಂದೆಯೂ ಮೂವರು ರಾಜಕಾರಣಿಗಳ ವೀಡಿಯೋಗಳನ್ನು ಆರೋಪಿಗಳ ತಂಡ ಸಂಗ್ರಹಿಸಿಕೊಂಡಿದ್ದು, 2019ರಲ್ಲಿ ಇಬ್ಬರು ಪ್ರಮುಖ ರಾಜಕಾರಣಿಗಳಿಂದ ತಲಾ 1 ಕೋ. ರೂ. ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಪ್ರಕರಣದಲ್ಲಿ ಸಿಲುಕಿರುವ ಆರೋಪಿಗಳ ಪೈಕಿ ಇಬ್ಬರು ರಾಷ್ಟ್ರೀಯ ಪಕ್ಷವೊಂದರ ಇಬ್ಬರು ನಾಯಕರ ಜತೆ ಗುರುತಿಸಿಕೊಂಡಿದ್ದಾರೆ. ಆ ಪಕ್ಷದ ಒಬ್ಬ ಮಹಾನಾಯಕನ ಹೆಸರು ಪ್ರಕರಣದಲ್ಲಿ ತಳುಕು ಹಾಕಿಕೊಂಡಿದೆ. ಪ್ರಮುಖ ಆರೋಪಿ ಈ ಹಿಂದೆ ಕೆಲವು ಸುದ್ದಿ ವಾಹಿನಿಗಳ ಸ್ಟಿಂಗ್ ಆಪರೇಷನ್ ತಂಡದಲ್ಲಿದ್ದ. ಈ ವೇಳೆ ಹಲವು ಮಂದಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ಸಂಪಾದಿಸಿದ್ದಾನೆ. ಈ ವಸೂಲಿ ದಂಧೆ ವಿಚಾರ ತಿಳಿದ ಸಂಸ್ಥೆಯ ಮುಖ್ಯಸ್ಥರು ಮೂರು ತಿಂಗಳ ಹಿಂದೆ ಆತನನ್ನು ಕೆಲಸದಿಂದ ಕಿತ್ತು ಹಾಕಿದ್ದರು ಎನ್ನಲಾಗಿದೆ.
Related Articles
Advertisement
ಚಿಕ್ಕಮಗಳೂರಿನ ಮತ್ತೂಬ್ಬ ಆರೋಪಿಯೂ ಈ ಹಿಂದೆ ಕೆಲವು ಸುದ್ದಿವಾಹಿನಿಗಳ ಸ್ಟಿಂಗ್ ಆಪರೇಷನ್ ತಂಡದಲ್ಲಿದ್ದ. ಈತ, ಚಿಕ್ಕಮಗಳೂರಿನ ಆಲ್ದೂರಿನಲ್ಲಿ ಸ್ವಂತ ಹೋಮ್ ಸ್ಟೇ ನಡೆಸುತ್ತಿದ್ದಾನೆ. ಈ ಮಧ್ಯೆ ಬೆಂಗಳೂರಿನಲ್ಲಿ ವಾಸವಾಗಿದ್ದುಕೊಂಡು ರಾಷ್ಟ್ರೀಯ ಪಕ್ಷದ ಇನ್ನೊಬ್ಬ ನಾಯಕರೊಬ್ಬರ ಸಾಮಾಜಿಕ ಜಾಲತಾಣಗಳ ನಿರ್ವಹಣೆ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.
ನಿರ್ಭಯಾ ಗೈಡ್‌ಲೈನ್ಸ್ ಉಲ್ಲಂಘನೆ ಆರೋಪಸಿ.ಡಿ. ಪ್ರಕರಣ ಸಂಬಂಧ “ನಿರ್ಭಯಾ ನಿಯಮ’ ಉಲ್ಲಂಘಿಸಿದ ಆರೋಪದಡಿ ನಗರ ಪೊಲೀಸ್ ಆಯುಕ್ತರಿಗೆ ಕೊಡಿಗೇ ಹಳ್ಳಿಯ ವಕೀಲ ಜಗದೀಶ್ ಎಂಬವರು ದೂರು ನೀಡಿದ್ದಾರೆ. ಯುವತಿಗೆ ಇದುವರೆಗೂ ಯಾವುದೇ ರಕ್ಷಣೆ ನೀಡಿಲ್ಲ. ಸಂತ್ರಸ್ತೆಯ ವೀಡಿಯೋ ಹೇಳಿಕೆ ಮೇಲೂ ಕ್ರಮ ಕೈಗೊಂಡಿಲ್ಲ. ಜಾರಕಿಹೊಳಿ ದೂರಿಗೆ ಮನ್ನಣೆ ನೀಡಿದಂತೆ ಯುವತಿಗೂ ಮನ್ನಣೆ ಕೊಡಬೇಕಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.