ದಾವಣಗೆರೆ: ಬಿಜೆಪಿಯಲ್ಲಿ ಇರುವ ಹಿಂದುಳಿದ ವರ್ಗದ ಸಚಿವರು, ಮುಖಂಡರನ್ನೇ ಗುರಿಯಾಗಿಸಿಕೊಂಡು ಕಾಂಗ್ರೆಸ್ ಷಡ್ಯಂತ್ರ ರೂಪಿಸುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಗಂಭೀರ ಆರೋಪ ಮಾಡಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಹಿಂದುಳಿದ ವರ್ಗಕ್ಕೆ ಸೇರಿದ ಕೆ.ಎಸ್. ಈಶ್ವರಪ್ಪ ವಿರುದ್ಧ ಆರೋಪ ಮಾಡಲಾಗಿತ್ತು. ಅವರು ಶುದ್ದಹಸ್ತರಾಗಿ ಹೊರ ಬಂದಿದ್ದಾರೆ. ಈಗ ತಮ್ಮ ವಿರುದ್ಧ ಯಾರದೋ ಮೂಲಕ ಆಡಿಯೋ ಮಾಡಿಸಿ, ಹಿಂದುಳಿದ ವರ್ಗಗಳವರಿಗೆ ಬಿಜೆಪಿಯಲ್ಲಿ ರಕ್ಷಣೆ ಇಲ್ಲ ಎಂದು ಬೆದರಿಸುವ ಷಡ್ಯಂತ್ರ ರೂಪಿಸಲಾಗಿದೆ. ಇದರ ಹಿಂದೆ ನೇರವಾಗಿಯೇ ಕಾಂಗ್ರೆಸ್ ಕುತಂತ್ರ ಇದೆ ಎಂದು ನೇರ ಆರೋಪ ಮಾಡಿದರು.
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಣತಿಯಂತೆ ಭ್ರಷ್ಟಾಚಾರ ನಡೆಯುತ್ತಿದೆ. ಅದರಲ್ಲಿನ ಪಾಲು ಸಚಿವರಿಗೂ ಪಾಲು ಸೇರುತ್ತಿದೆ ಎಂಬುದಾಗಿ ಕಾಂಗ್ರೆಸ್ ಮಾಡಿರುವ ಆರೋಪಕ್ಕೂ ತಮಗೂ ಯಾವುದೇ ಸಂಬಂಧವೇ ಇಲ್ಲ. ಕಳೆದ ಎರಡು ವರ್ಷ ದಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ನಡೆಸುತ್ತಿರುವುದು, ಜನರಿಗೆ ಸ್ಪಂದಿಸಿ ಕೆಲಸ ಮಾಡುತ್ತಿರುವುದನ್ನ ಸಹಿಸಲಾರದೆ ಈ ರೀತಿಯ ಷಡ್ಯಂತ್ರ ರೂಪಿಸಲಾಗುತ್ತಿದೆ. ಆಡಿಯೋ ಯಾರಾದರೂ ಮಾಡಬಹುದು. ಏನಾದರೂ ಹೇಳಬಹುದು. ತಮ್ಮ ವಿರುದ್ಧ ಮಾಡಿರುವ ಆರೋಪದ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು. ಕಾನೂನು ತಜ್ಞ ರ ಜೊತೆಗೆ ಕೂಲಂಕಷವಾಗಿ ಚರ್ಚಿಸಿ ಯಾವ ರೀತಿಯ ಕಾನೂನು ಹೋರಾಟ ನಡೆಸಬೇಕು ಎಂದು ಚರ್ಚಿಸಿ ಮುಂದಿನ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ : ವಿಟ್ಲ: ಕಾರಣಿಕ ಕ್ಷೇತ್ರ ಕೆಲಿಂಜ ಶ್ರೀ ಉಳ್ಳಾಲ್ತಿ ಕ್ಷೇತ್ರದ ಕಾಣಿಕೆ ಡಬ್ಬಿ ಕಳವು
ಕಲಬುರಗಿಯಲ್ಲಿ ಏಳೆಂಟು ಲಕ್ಷ ಜನರ ಸೇರಿಸಿ ಬಹಳ ಯಶಸ್ವಿಯಾಗಿ ಹಿಂದುಳಿದ ವರ್ಗಗಳ ಸಮಾವೇಶ ನಡೆಸಲಾಗಿದೆ. ಅದನ್ನು ಸಹಿಸದೆ ಈ ರೀತಿಯ ಆರೋಪದ ಷಡ್ಯಂತ್ರ ರೂಪಿಸಲಾಗಿದೆ ಎಂದು ದೂರಿದರು.
ಸತೀಶ್ ಜಾರಕಿಹೊಳಿ ಹಿಂದೂ ಆಶ್ಲೀಲ ಎಂದು ಹೇಳಿಕೆ ನೀಡಿದ್ದರೂ ಕ್ಷಮೆ ಕೇಳುವು ದಿಲ್ಲ ಎಂದು ಹೇಳಿರುವುದಕ್ಕೆ ಏನು ಹೇಳಬೇಕು. ಹಿಂದು, ಹಿಂದೂಸ್ತಾನ್ ಎಂದು ಎಲ್ಲರೂ ಹೇಳುತ್ತಿರುವಾಗ ಈ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ಏನೆಂದು ಅರ್ಥೈಸಿಕೊಳ್ಳಬೇಕು ಎಂದರು.