Advertisement

ಸಿದ್ದರಾಮಯ್ಯ ಯಾವಾಗ ಜ್ಯೋತಿಷಿಯಾದ್ರು : ಭೈರತಿ ಬಸವರಾಜ್ ವ್ಯಂಗ್ಯ

07:48 PM Jan 12, 2021 | Team Udayavani |

ಕುಷ್ಟಗಿ: ಸಿಎಂ ಬದಲಾವಣೆ ವಿಚಾರದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯಾವ ಮಾನದಂಡವಿಟ್ಟುಕೊಂಡು ಹೇಳ್ತಾರೋ ಗೊತ್ತಿಲ್ಲ.. ಅವರು ಯಾವಾಗ ಜ್ಯೋತಿಷಿಯಾದ್ರು ಎಂದು ನಗರಾಭಿವೃದ್ಧಿ ಸಚಿವ‌ ಬೈರಥಿ ಬಸವರಾಜ್ ವ್ಯಂಗ್ಯವಾಡಿದರು.

Advertisement

ತಿಂಥಣಿ ಬ್ರಿಡ್ಜ್ ನಲ್ಲಿ ಹಾಲುಮತ ಉತ್ಸವ ಕಾರ್ಯಕ್ರಮಕ್ಕೆ ತೆರಳುವ ಮಾರ್ಗದಲ್ಲಿ ಕುಷ್ಟಗಿ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಬದಲಾವಣೆಯ ಮಾತೇ ಇಲ್ಲ. ಇನ್ನು ಅವರೇ ಎರಡು ವರ್ಷ ನಾಲ್ಕು ತಿಂಗಳ ಅವರೇ ಸಿಎಂ ಆಗಿ ಕಾರ್ಯನಿರ್ವಹಿಸುವರು. ನೀವು(ಮಾಧ್ಯಮದವರು) ಅವರನ್ನೇ ವಿವರವಾಗಿ ಕೇಳಬೇಕಿದೆ. ಸಂಪುಟ ಪುನಾರಚನೆ ಕುರಿತು ಪ್ರಸ್ತಾಪಿಸಿದ ಅವರು, ನಾನು ಬೆಂಗಳೂರಿನಲ್ಲಿ ಇಲ್ಲ. ದಾವಣಗೇರಾ ಜಿಲ್ಲಾ ಪ್ರವಾಸದಲ್ಲಿದ್ದು ಮುಂದಿನ ಪುನಾರಚನೆ ವೇಳೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎನ್ನುವ ವಿಶ್ವಾಸವಿದೆ. ನಮ್ಮ ಜೊತೆಗೆ ಬಂದಿರುವ ಎಲ್ಲರಿಗೂ ಸಚಿವ ಸ್ಥಾನಕ್ಕೆ ಪರಿಗಣಿಸುವ ವಿಶ್ವಾಸವಿದ್ದು ನಾವು ಕೂಡ ಮನವಿ ಮಾಡಿದ್ದೇವೆ. ಇದಕ್ಕೆ ಸಿಎಂ ಸ್ಪಂಧಿಸಿದ್ದಾರೆ.

ನಗರಾಭಿವೃದ್ಧಿಯಲ್ಲಿ ಅಮೂಲಾಗ್ರವಾಗಿ ಬದಲಾವಣೆ ತರಲು ಬದ್ದನಾಗಿರುವೆ ಎಂದ ಅವರು, ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗೂ ಪ್ರವಾಸ ಮಾಡಿದ್ದು ನಗರಾಭಿವೃದ್ಧಿ ಇಲಾಖೆ ತೃಪ್ತಿ ತಂದಿದೆ. ಯಾವುದೇ ಕಾರಣಕ್ಕೂ ನಗರಾಭಿವೃದ್ದಿ ಖಾತೆ ಬದಲಿಸುವುದಿಲ್ಲ. ಇದೇ ಖಾತೆಯಲ್ಲಿ ಮುಂದುವರೆಯುವೆ. ನಗರಾಭಿವೃದ್ದಿ ಇಲಾಖೆಯ ಸಾಧಕ ಬಾದಕಗಳ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಕೊಡುವೆ ಎಂದರು.

ಇದನ್ನೂ ಓದಿ:ಖಾಸಗಿ ಸಂದೇಶ ಹಂಚಿಕೊಳ್ಳುವುದಿಲ್ಲ: ವಾಟ್ಸ್‌ ಆ್ಯಪ್‌ ಸ್ಪಷ್ಟನೆ

ಕುರುಬರ ಸಮಾಜಕ್ಕೆ ಎಸ್ಟಿ ಮೀಸಲಾತಿಯ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವುದು ಸಿಎಂ ಹಾಗೂ ಹಿರಿಯ ನಾಯಕರ ವಿವೇಚನೆಗೆ ಬಿಟ್ಟಿದೆ ಎಂದರು. ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಕೆ.ಶರಣಪ್ಪ, ಬಿಜೆಪಿ ಅಧ್ಯಕ್ಷ ಬಸವರಾಜ್ ಹಳ್ಳೂರು ಮತ್ತೀತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next