Advertisement

ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 31 ಕಿಂಡಿ ಅಣೆಕಟ್ಟಿಗೆ ಅನುದಾನ ಮಂಜೂರು

10:06 PM Feb 17, 2021 | Team Udayavani |

ಕುಂದಾಪುರ : ಅಂತರ್ಜಲ ವೃದ್ಧಿ, ಉಪ್ಪು ನೀರಿನ ಸಮಸ್ಯೆಗೆ ತಡೆ ಹಾಗೂ ಕೃಷಿ ಚಟುವಟಿಕೆಗಳಿಗೆ ಪೂರಕವಾಗುವ ನಿಟ್ಟಿನಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 75 ಕೋ.ರೂ. ವೆಚ್ಚದಲ್ಲಿ ಒಟ್ಟು 31 ಕಿಂಡಿ ಅಣೆಕಟ್ಟುಗಳು ನಿರ್ಮಾಣಗೊಳ್ಳಲಿದೆ.

Advertisement

ಸಂಸದ ಬಿ.ವೈ. ರಾಘವೇಂದ್ರ ಹಾಗೂ ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಮುತುವರ್ಜಿಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಈ ಕಿಂಡಿ ಅಣೆಕಟ್ಟುಗಳಿಗೆ ಅನುದಾನ ಮಂಜೂರಾಗಿದೆ.

ಎಲ್ಲೆಲ್ಲ ಚಾಲನೆ ?
ಈ 31 ಕಿಂಡಿ ಅಣೆಕಟ್ಟುಗಳ ಪೈಕಿ ಈಗಾಗಲೇ ಸುಬ್ಬರಾಡಿ ವೆಂಟೆಡ್‌ ಡ್ಯಾಂ 35 ಕೋ.ರೂ., ಕಾಲ್ತೊಡಿನ ಮೆಟ್ಟಿನಹೊಳೆ 9.09 ಕೋ.ರೂ., ಜಡ್ಡಿನಮೂಲೆ 6.85 ಕೋ.ರೂ., ಹಳಗೇರಿ ಕಂಬದಕೋಣೆ 4.80 ಕೋ.ರೂ., ಬೆಳ್ಳಾಲ ಮೂಡುಮಂದ 1.50 ಕೋ.ರೂ., ಕುಂದಬಾರಂದಾಡಿ 1 ಕೋ.ರೂ., ಶಿರೂರು ಕೋಟೆಮನೆ 6.10 ಕೋ.ರೂ., ಕಮಲಶಿಲೆ ಇಸ್ರಬೇರು 8.20 ಕೋ.ರೂ., ಕಾಲ್ತೊಡು ಯಡೇರಿ 4.70 ಕೋ.ರೂ., ಆಲೂರು ಹುಂತನಗೋಳಿ 9.40 ಕೋ.ರೂ., ಬೆಳ್ಳಾಲ ಕೂಳೂರು 1 ಕೋ.ರೂ., ದೇವರಪಾಲು 1 ಕೋ.ರೂ., ಬೆಳ್ಳಾಲ ಭಟ್ರಬೈಲು 80 ಲಕ್ಷ ರೂ., ಕುಮ್ರಿಗುಡ್ಡೆ 90 ಲಕ್ಷ ರೂ., ನೀರು ಕೊಡ್ಲು 80 ಲಕ್ಷ ರೂ., ಹಳ್ಳಿಹೊಳೆ ನಡುಮುದ್ರೆ 5 ಕೋ.ರೂ., ಹೇರೂರು ಮಂಜುವಂಕಿ 3 ಕೋ.ರೂ., ಹೇರೂರು ಮುಟ್ಟಂಕಿ 2 ಕೋ.ರೂ., ಇಡೂರು ಕುಂಜ್ಞಾಡಿಯ ಪುಸ್ಕೇರಿ 60 ಲಕ್ಷ ರೂ., ನಾಡ ಬೆಳ್ಳಾಡಿಯಲ್ಲಿ 45 ಲಕ್ಷ ರೂ. ಕಿಂಡಿ ಅಣೆಕಟ್ಟಿನ ಕಾಮಗಾರಿಗೆ ಶಿಲಾನ್ಯಾಸ ಆಗಿದೆ.

ಮಾರ್ಚ್‌, ಎಪ್ರಿಲ್‌ನಲ್ಲಿ ಆರಂಭ
ಈಗಾಗಲೇ ಬಹುತೇಕ ಕಿಂಡಿ ಅಣೆಕಟ್ಟು ಕಾಮಗಾರಿ ಆರಂಭವಾಗಿದೆ. ಇನ್ನು ಕೆಲವೆಡೆಗಳಲ್ಲಿ ನೀರಿದ್ದು ಅಲ್ಲಿ ಕಾಮಗಾರಿ ಈಗ ಆರಂಭಿಸುವುದು ಕಷ್ಟ. ನೀರು ಕಡಿಮೆಯಾದ ಬಳಿಕ ಅಂದರೆ ಮಾರ್ಚ್‌, ಎಪ್ರಿಲ್‌ನಲ್ಲಿ ಬಹುತೇಕ ಎಲ್ಲ ಕಡೆಗಳಲ್ಲಿ ಕಾಮಗಾರಿ ಆರಂಭವಾಗಲಿದೆ.
– ಪುನೀತ್‌ ಕುಮಾರ್‌, ನಾಗಲಿಂಗ, ಎಂಜಿನಿಯರ್‌ಗಳು ಸಣ್ಣ ನೀರಾವರಿ ಇಲಾಖೆ

ಕಾಮಗಾರಿ ಆರಂಭ
ಈ ಪೈಕಿ ಜಡ್ಡಿಮೂಲೆ ಆಜ್ರಿ, ಸುಬ್ಬರಾಡಿ, ಕೋಟೆಮನೆ, ಇಸ್ರಬೇರು, ಆಲೂರು ಹುಂತನ ಗೋಳಿ, ಹಳ್ಳಿಹೊಳೆ ನಡುಮದ್ರೆ ಸೇರಿದಂತೆ ಒಟ್ಟು 8 ಕಡೆಗಳಲ್ಲಿ ಕಾಮಗಾರಿ ಆರಂಭವಾಗಿದೆ.

Advertisement

ಕೃಷಿ, ಕುಡಿಯುವ ನೀರಿಗೆ ಪೂರಕ
ಬೈಂದೂರು ವಿಧಾನ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ, ಕಡಲ ತೀರ ಪ್ರದೇಶದಲ್ಲಿ ಉಪ್ಪು ನೀರಿನ ಸಮಸ್ಯೆಯಿದ್ದು, ಅದಕ್ಕಾಗಿ ಸಣ್ಣ ನೀರಾವರಿ ಇಲಾಖೆಯಿಂದ 75.5 ಕೋ.ರೂ. ವೆಚ್ಚದಲ್ಲಿ ಹೊಸದಾಗಿ 31 ಕಿಂಡಿ ಅಣೆಕಟ್ಟುಗಳು ಮಂಜೂರಾಗಿವೆ. ಒಂದೊಂದಾಗಿಯೇ ಕಾಮಗಾರಿಗೆ ಶಿಲಾನ್ಯಾಸ ನೇರವೇರಿಸಲಾಗುತ್ತಿದೆ. ಇನ್ನು ಒಂದೆರಡು ವರ್ಷಗಳಲ್ಲಿ ಕ್ಷೇತ್ರದ ನೀರಿನ ಸಮಸ್ಯೆ ಸಂಪೂರ್ಣ ಬಗೆಹರಿಯಲಿದೆ.

ಬಾಕಿ
ಕೆಂಚನೂರು ಗ್ರಾಮದ ಕಟ್ಕೇರಿಗುಡ್ಡೆ 70 ಲಕ್ಷ ರೂ., ಬಂಟ್ವಾಡಿ 70 ಲಕ್ಷ ರೂ., ಬಿಜೂರಿನ ಕಳಿಸಾಲು 65 ಲಕ್ಷ ರೂ., ಸೇನಾಪುರದ ಚಿಕ್ಕಟ್ಟು 50 ಲಕ್ಷ ರೂ., ಗೋಳಿಹೊಳೆಯ ಹೊಡುವಣ 70 ಲಕ್ಷ ರೂ., ಬೈಂದೂರಿನ ತೋಕ್ತಿ 40 ಲಕ್ಷ ರೂ., ಗುಲ್ವಾಡಿ 9.40 ಕೋ.ರೂ., ಆಜ್ರಿಯ ತಗ್ಗುಂಜೆ ಮಕ್ಕಿಮನೆ 1 ಕೋ.ರೂ., ಹೇರಂಜಾಲು ಕರ್ಕುಂಡಿ 80 ಲಕ್ಷ ರೂ., ಯಡ್ತರೆ ಅಂತರ್ಗದ್ದೆ, ವಂಡ್ಸೆಯಲ್ಲಿ 2 ಸೇರಿದಂತೆ ಇನ್ನು ಕೆಲವು ಕಿಂಡಿ ಅಣೆಕಟ್ಟುಗಳಿಗೆ ಅನುದಾನ ಮಂಜೂರಾಗಿದ್ದು, ಕಾಮಗಾರಿ ಇನ್ನಷ್ಟೇ ಆರಂಭಗೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next