Advertisement

ಬೈಂದೂರು ತಾಲೂಕು ಅಭಿವೃದ್ಧಿ; ಚುರುಕು ಅಗತ್ಯ

01:42 AM Jul 07, 2020 | Sriram |

ಬೈಂದೂರು: ಬಹುತೇಕ ವ್ಯಾವಹಾರಿಕ, ಅಭಿವೃದ್ಧಿಯ ವೇಗಕ್ಕೆ ಕೋವಿಡ್‌ ದಿಂದ ಹಿನ್ನಡೆ ಯಾಗಿದ್ದು ನೂತನ ತಾಲೂಕು ಬೈಂದೂರು ಅಭಿವೃದ್ಧಿಗೆ ಈಗ ಮತ್ತೆ ಗಮನಹರಿಸಬೇಕಿದೆ.

Advertisement

ನಾಲ್ಕು ದಶಕಗಳ ಹೋರಾಟದಿಂದ ಎರಡು ವರ್ಷದ ಹಿಂದೆ ರಾಜ್ಯ ಸರಕಾರ ಬೈಂದೂರನ್ನು ನೂತನ ತಾಲೂಕನ್ನಾಗಿ ಘೋಷಿಸಿತ್ತು. ಸಂಸದರು ಹಾಗೂ ಶಾಸಕರು ಬೈಂದೂರಿನ ಅಭಿವೃದ್ಧಿ ಬಗ್ಗೆ ಗಮನ ಹರಿಸಿದ್ದಾರೆ.

ಬೈಂದೂರಿಗೆ 10 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ, ನೂರು ಹಾಸಿಗೆಗಳ ಆಸ್ಪತ್ರೆಗೆ 2.11 ಎಕ್ರೆ, ಕೋರ್ಟ್‌ ಸಂಕೀರ್ಣಕ್ಕೆ 1.51 ಎಕ್ರೆ, ತಾ.ಪಂ. ಗೆ 50 ಸೆಂಟ್ಸ್‌ ಸ್ಥಳ, ಅಗ್ನಿಶಾಮಕ ಕೇಂದ್ರ ಮುಂತಾದವುಗಳಿಗೆ ಈಗಾಗಲೇ ಸ್ಥಳ ಮಂಜೂರಾಗಿದೆ. ಗುದ್ದಲಿಪೂಜೆ ಶೀಘ್ರ ನಡೆಯಬೇಕಿದೆ. ಬೈಂದೂರಿನ ಬಳಿಕ ಘೋಷಣೆಯಾದ ಹೆಬ್ರಿ ತಾಲೂಕಿನಲ್ಲಿ ಮಿನಿ ವಿಧಾನ ಸೌಧದ ಗುದ್ದಲಿಪೂಜೆ ಮುಗಿದಿದೆ.

ಹೀಗಾಗಿ ಬೈಂದೂರು ವಿಚಾರದಲ್ಲಿ ಕೋವಿಡ್‌ ಕಾರಣದಿಂದ ಸರಕಾರದ ಮಟ್ಟದಲ್ಲಿ ಮಂಜೂರಾದ ಯೋಜನೆಗಳಿಗೆ ಜನಪ್ರತಿನಿಧಿಗಳು ಚುರುಕು ಮುಟ್ಟಿಸದಿದ್ದರೆ ಅಭಿವೃದ್ದಿ ವೇಗ ಕುಂಠಿತವಾಗುವ ಆತಂಕವಿದೆ.

ಪ್ರಯತ್ನ ನಡೆಯಬೇಕಿದೆ
ಬೈಂದೂರಿಗೆ ನ್ಯಾಯಾಲಯ ಮಂಜೂ ರಾದರೂ ಸಹ ಆರಂಭವಾಗದ ಕಾರಣ ಕುಂದಾಪುರಕ್ಕೆ ತೆರಳಬೇಕಿದೆ. ಕಂದಾಯ ಇಲಾಖೆಯ ಆಹಾರ ವಿಭಾಗ ಸೇರಿದಂತೆ ಬಹುತೇಕ ಹಂತಗಳಿಗೆ ಕುಂದಾಪುರ ತಾಲೂಕು ಕಚೇರಿಗೆ ಅಲೆಯುವುದು ತಪ್ಪಿಲ್ಲ. ಇನ್ನು ಬಹುಮುಖ್ಯ ತಾಲೂಕು ಸಮುದಾಯ ಆರೋಗ್ಯ ಕೇಂದ್ರ ಕೋವಿಡ್‌ ಕಾರಣದಿಂದ ಜನರಿಗೆ ಸೇವೆಯಿಂದಲೇ ದೂರವಾಗಿದೆ. ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರದಿರುವುದರಿಂದ ಅಗತ್ಯ ಸೌಲಭ್ಯಕ್ಕೆ 40 ಕಿ.ಮೀ ತೆರಳಬೇಕು. ಅಗ್ನಿಶಾಮಕ ದಳ ಇನ್ನೊಂದು ವಾರದಲ್ಲಿ ಆರಂಭವಾಗುವ ಲಕ್ಷಣಗಳಿವೆ. ಬಸ್‌ ಡಿಪೋ ಕಾಮಗಾರಿ ಮಂಜೂರಾಗಿ ವರ್ಷ ಕಳೆದರೂ ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಬೈಂದೂರಿಗೆ ಮಂಜೂರಾದ ಯೋಜನೆಗಳು ಈಡೇರಲು ಸಂಸದರು ಮತ್ತು ಶಾಸಕರು ಒತ್ತಡ ಹೇರುವುದು ಅಗತ್ಯ.

Advertisement

ಬೈಂದೂರು ಮಾದರಿ ಕ್ಷೇತ್ರವಾಗಿ ನಿರ್ಮಾಣ
ಬೈಂದೂರು ಕ್ಷೇತ್ರಕ್ಕೆ ಈಗಾಗಲೇ ಸಂಸದರು ಮತ್ತು ಮುಖ್ಯಮಂತ್ರಿಗಳ ನಿಧಿಯಿಂದ ಅಧಿಕ ಅನುದಾನ ದೊರೆತಿದೆ. ಅಗ್ನಿಶಾಮಕ ಕೇಂದ್ರ ಇನ್ನೊಂದು ವಾರದಲ್ಲಿ ಆರಂಭವಾಗಲಿದೆ. ಅಭಿವೃದ್ಧಿಗೆ ಕೋವಿಡ್‌ ದಿಂದ ಹಿನ್ನೆಡೆಯಾಗಿರುವುದು ಸಹಜ. ಸದ್ಯದಲ್ಲೇ ಅಧಿಕಾರಿಗಳ ಸಭೆ ಕರೆದು ಶೀಘ್ರ ಬೈಂದೂರಿನ ಅಭಿವೃದ್ಧಿ ಯೋಜನೆ ಕುರಿತು ಚರ್ಚಿಸುತ್ತೇನೆ. ಮಾದರಿ ಕ್ಷೇತ್ರವಾಗಿ ರೂಪಿಸುತ್ತೇನೆ.
-ಬಿ.ಎಂ. ಸುಕುಮಾರ ಶೆಟ್ಟಿ , ಶಾಸಕರು, ಬೈಂದೂರು ವಿಧಾನಸಭಾ ಕ್ಷೇತ್ರ

 

Advertisement

Udayavani is now on Telegram. Click here to join our channel and stay updated with the latest news.

Next