Advertisement

ಬೈಂದೂರು ತಾ|: ಪ್ರಾಕೃತಿಕ ವಿಕೋಪ ಎದುರಿಸಲು ಸನ್ನದ್ಧ

10:49 PM Jun 21, 2019 | Sriram |

ಬೈಂದೂರು: ನೂತನ ತಾಲೂಕು ಕೇಂದ್ರವಾದ ಬೈಂದೂರು ವ್ಯಾಪ್ತಿಯಲ್ಲಿ ಮುಂಗಾರಿನ ಪ್ರಾಕೃತಿಕ ವಿಕೋಪ ಎದುರಿಸಲು ಇಲಾಖೆ ಸರ್ವ ಸನ್ನದ್ಧವಾಗಿದೆ. ಈಗಾಗಲೇ ವಿವಿಧ ಹಂತದ ಸಭೆಗಳನ್ನು ಕರೆದು ಪ್ರತ್ಯೇಕ ತಂಡ ರಚಿಸಿ ತತ್‌ಕ್ಷಣ ಸ್ಪಂದಿಸಲು ವಹಿಸಬೇಕಾದ ಮುಂಜಾಗ್ರತೆ ಬಗ್ಗೆ ತಿಳಿಸಲಾಗಿದೆ. ಕಳೆದ ವರ್ಷ ನೆರೆಹಾವಳಿ ಮತ್ತು ಕಡಲ್ಕೊರೆತ ಬೈಂದೂರು ತಾಲೂಕಿನಲ್ಲಿ ಅಪಾರ ನಷ್ಟ ಉಂಟುಮಾಡಿತ್ತು. ಕರಾವಳಿ ಮತ್ತು ಮಲೆನಾಡು ಎರಡು ಭಾಗಗಳು ಈ ತಾಲೂಕು ವ್ಯಾಪ್ತಿಗೆ ಒಳಪಡುವುದರಿಂದ ಸೂಕ್ತ ಮುಂಜಾಗ್ರತೆ ಹಾಗೂ ತಯಾರಿ ನಡೆಸಬೇಕಾದ ಅನಿವಾರ್ಯತೆ ಬಹಳಷ್ಟಿದೆ.

Advertisement

ಕಂದಾಯ ಇಲಾಖೆ ಆಯಾಯ ಗ್ರಾಮ ಮಟ್ಟದಲ್ಲಿ ಪ್ರತ್ಯೇಕ ತಂಡ ರಚಿಸಿ ಈಜುಗಾರರು, ಪೋಲಿಸ್‌ ಇಲಾಖೆ, ಗಂಜಿ ಕೇಂದ್ರ, ಆ್ಯಂಬುಲೆನ್ಸ್‌, ದೋಣಿ ಸೌಲಭ್ಯ ಮುಂತಾದವುಗಳ ಬಗ್ಗೆ ಸಮಗ್ರ ಮಾಹಿತಿ ಸಿದ್ಧಪಡಿಸಿದೆ. ಅಗತ್ಯ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳ ನೆರವನ್ನು ಪಡೆಯುವ ಮೂಲಕ ಮಳೆಗಾಲ ಎದುರಿಸಲು ಬೈಂದೂರು ತಾಲೂಕಿನ ತಹಶೀಲ್ದಾರರ ತಂಡ ಸಂಪೂರ್ಣ ಸಿದ್ಧ‌ªವಾಗಿದೆ.

ಕಡಲ್ಕೊರೆತ ಸಂಭವಿಸಬಹುದಾದ ಸ್ಥಳಗಳು
ಕರ್ಕಿಕಳಿ ಉಪ್ಪುಂದ, ಕಿರಿಮಂಜೇಶ್ವರದ ಹೊಸಹಿತ್ಲು, ಕೊಡೇರಿ, ಮರವಂತೆ, ಪಡುವರಿ, ದೊಂಬೆ, ತಾರಾಪತಿ, ಅಮ್ಮನವರತೊಪು, ಶಿರೂರು ಕರಾವಳಿ, ಕಳಿಹಿತ್ಲು.

ನೆರೆಪೀಡಿತ ಪ್ರದೇಶಗಳು
ಮರವಂತೆ, ಕಂಡುಹಿತ್ಲು, ಹೊಳೆಬಾಗಿಲು, ಮಧ್ಯಸ್ಥರ ಬೆಟ್ಟು, ಕಳಿಹಿತ್ಲು, ನಂದಿಕಂಠ, ಕೋಣಿR, ಕೊಡ್ಗಿತ್ಲು, ಕೆಂಬೈಲು, ಚುಂಗಿಗುಡ್ಡೆ, ಪಡುಕೋಣೆ, ಚಿಕ್ಕೊಳ್ಳಿ, ಹಡವು, ಹೆಬ್ಟಾರ್‌ ಸಾಲು, ವಕ್ಕೇರಿ,ಬಡಾಕೆರೆ, ಸಾಲುºಡ, ಕಂಡಿಕೇರಿ, ಹೊಳೆಕೆರೆ, ನಾವುಂದ, ಕಳಿಹಿತ್ಲು, ಬಿಜೂರು.

ತುರ್ತು ಸ್ಪಂದನೆ
ಮಳೆಗಾಲ ಕುರಿತಂತೆ ಈಗಾಗಲೇ ವಿವಿಧ ಹಂತದಲ್ಲಿ ಸಭೆ ನಡೆಸಿ ಗ್ರಾಮ ಮಟ್ಟದ ಅಧಿಕಾರಿಗಳನ್ನು ಸೇರಿಸಿ ವಿಶೇಷ ತಂಡ ರಚಿಸಲಾಗಿದೆ. ಸಾರ್ವಜನಿಕರು ಯಾವುದೇ ಸಂದರ್ಭದಲ್ಲೂ ಕೂಡ ಇವರನ್ನು ಸಂಪರ್ಕಿಸಬಹುದಾಗಿದೆ. ತುರ್ತು ಸಂದರ್ಭಗಳಲ್ಲಿ ಆಯಾಯ ಇಲಾಖೆಯ ಅಧಿಕಾರಿಗಳು ಸ್ಪಂದಿಸಲಿದ್ದಾರೆ.ದಿನದ 24 ಗಂಟೆಯೂ ಕರೆ ಸ್ವೀಕರಿಸಲಾಗುವುದು. ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಮಳೆಗಾಲ ಕುರಿತಂತೆ ಸಂಪೂರ್ಣ ತಯಾರಿ ನಡೆಸಲಾಗಿದೆ.
– ಬಸಪ್ಪ ಪಿ.ಪೂಜಾರ್‌, ತಹಶೀಲ್ದಾರರು, ಬೈಂದೂರು

Advertisement

ಪುನರ್‌ ವಸತಿ ಮತ್ತು ಗಂಜಿ ಕೇಂದ್ರಗಳು
ಸ.ಹಿ.ಪ್ರಾ. ಶಾಲೆ ಬಡಾಕೆರೆ, ಮಹಾಗಣಪತಿ ಕಲ್ಯಾಣ ಮಂಟಪ ನಾವುಂದ, ಮಹಾವಿಷ್ಣು ದೇವಸ್ಥಾನ ಹಡವು, ಸೀತಾರಾಮಚಂದ್ರ ಕಲ್ಯಾಣ ಮಂಟಪ ನಾಡ, ಸ.ಹಿ.ಪ್ರಾ. ಶಾಲೆ ಉಪ್ಪುಂದ, ಸ.ಹಿ.ಪ್ರಾ. ಶಾಲೆ ಕಿರಿಮಂಜೇಶ್ವರ, ಸ.ಹಿ.ಪ್ರಾ.ಶಾಲೆ ಮರವಂತೆ, ಸ.ಹಿ.ಪ್ರಾ. ಶಾಲೆ ಮೂಡು ಮರವಂತೆ, ಸ.ಹಿ.ಪ್ರಾ. ಶಾಲೆ ಹಡವಿನಕೋಣೆ ಶಿರೂರು, ಸರಕಾರಿ ಹಿ.ಪ್ರಾ.ಶಾಲೆ ಬಿಜೂರು.


-ಅರುಣ ಕುಮಾರ್‌ ಶಿರೂರು


Advertisement

Udayavani is now on Telegram. Click here to join our channel and stay updated with the latest news.

Next