Advertisement

Byndoor ಶಿರೂರು: ಕಡಿದು ಬಿದ್ದಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಮೀನುಗಾರ ಮೃತ್ಯು

12:18 AM May 20, 2024 | Team Udayavani |

ಬೈಂದೂರು: ಮನೆಯ ಗೇಟಿನ ಮುಂದೆ ತುಂಡಾಗಿ ಬಿದ್ದಿದ್ದ ವಿದ್ಯುತ್‌ ಪ್ರವಹಿಸುತ್ತಿದ್ದ ತಂತಿಯನ್ನು ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶಿರೂರು ಶಿರೂರು ಗ್ರಾಮದ ಹಡವಿನಕೋಣೆ ಮುದ್ರಮಕ್ಕಿಯಲ್ಲಿ ರವಿವಾರ ಬೆಳಗ್ಗೆ ಸಂಭವಿಸಿದೆ.

Advertisement

ಮುದ್ರುಮಕ್ಕಿ ಸಮೀಪದ ನಿವಾಸಿ ಕುರುಡಿ ಇರ್ಷಾದ್‌ (52) ಮೃತಪಟ್ಟವರು. ಶನಿವಾರ ತಡರಾತ್ರಿ ಸುರಿದ ಗಾಳಿ-ಮಳೆಗೆ ಹಡವಿನ ಕೋಣೆಯಿಂದ ಮುದ್ರುಮಕ್ಕಿಗೆ ತೆರಳುವ ಮಾರ್ಗದಲ್ಲಿದ್ದ ವಿದ್ಯುತ್‌ ತಂತಿ ತುಂಡಾಗಿ ಬಿದ್ದಿತ್ತು. ಇರ್ಷಾದ್‌ ಅವರು ಮನೆಯೊಳಕ್ಕೆ ಸತ್ತುಹೋದ ಇಲಿಯನ್ನು ಹೊರಕ್ಕೆಸೆಯುವ ಸಲುವಾಗಿ ರವಿವಾರ ಬೆಳಗ್ಗೆ ಗೇಟ್‌ ದಾಟಿ ಹೊರಕ್ಕೆ ಬಂದಿದ್ದು ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿಯನ್ನು ತುಳಿದಿದ್ದು, ವಿದ್ಯುತ್‌ ಆಘಾತಕ್ಕೆ ಒಳಗಾಗಿ ಸ್ಥಳದಲ್ಲಿಯೇ ಮೃತಪಟ್ಟರು.

ಸ್ಥಳಕ್ಕೆ ಬೈಂದೂರು ಮೆಸ್ಕಾಂನ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದ ಇರ್ಷಾದ್‌ ಕುರುಡಿ, ಹೆಚ್ಚಾಗಿ ಮಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದರು. ಶನಿವಾರ ವಷ್ಟೆ ಮನೆಗೆ ಆಗಮಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮೆಸ್ಕಾಂ ವಿರುದ್ಧ ಆಕ್ರೋಶ
ಕಳೆದ ವರ್ಷ ಇಲ್ಲಿನ ಉದ್ಯಮಿ ಯೊರ್ವರು ತೋಟದ ಕೆಳಭಾಗದಲ್ಲಿ ಹಾದುಹೋದ ವಿದ್ಯುತ್‌ ತಂತಿ ತಗಲಿ ಸಾವನ್ನಪ್ಪಿದ್ದರು. ಹಡವಿನಕೋಣೆ ಮುದ್ರು ಮಕ್ಕಿಯಲ್ಲಿರುವ ವಿದ್ಯುತ್‌ ಟ್ರಾನ್ಸ್‌ಫಾಮರನ್ನು ಸ್ಥಳಾಂತರಿಸುವಂತೆ ಸ್ಥಳೀಯರು ಈ ಹಿಂದೆ ಹಲವು ಬಾರಿ ಸ್ಥಳೀಯ ಗ್ರಾ.ಪಂ. ಹಾಗೂ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದರು. ಆದರೆ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಮೆಸ್ಕಾಂನ ಬೇಜವಾªರಿತನದಿಂದ ಅವಘಡ ಸಂಭವಿಸಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ. ಮೃತ ರದ್ದು ಬಡ ಕುಟುಂಬ ವಾಗಿದ್ದು ಅವರಿಗೆ ಗರಿಷ್ಠ ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

ಸ್ಥಳಕ್ಕೆ ಮೆಸ್ಕಾಂ ಸಹಾಯಕ ಎಂಜಿನಿಯರ್‌ ಯಶವಂತ್‌,ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ,ಶಿರೂರು ಶಿರೂರು ಗ್ರಾಮ ಲೆಕ್ಕಾಧಿಕಾರಿ ವಿಜಯ ಕುಮಾರ್‌, ಗ್ರಾ.ಪಂ. ಉಪಾಧ್ಯಕ್ಷ ಕಾಪ್ಸಿ ನೂರ್‌ ಮಹಮ್ಮದ್‌, ಎಸ್‌. ರಾಜು ಪೂಜಾರಿ, ಮೆಸ್ಕಾಂ ಸಿಬಂದಿ ಹಾಗೂ ಗ್ರಾ.ಪಂ. ಸದಸ್ಯರು ಆಗಮಿಸಿದ್ದರು.

ಮೆಸ್ಕಾಂ ಸಿಬಂದಿಗೆ ವಿದ್ಯುತ್‌ ಶಾಕ್‌
ಸುಳ್ಯ: ವಿದ್ಯುತ್‌ ನಿರ್ವಹಣೆಗಾಗಿ ಪರಿವರ್ತಕದ ಕಂಬ ಹತ್ತಿದ ಮೆಸ್ಕಾಂ ಸಿಬಂದಿ ಮಂಜು ವಿದ್ಯುತ್‌ ಶಾಕ್‌ ಹೊಡೆದು ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಬಾಳಿಲದಲ್ಲಿ ಶನಿವಾರ ಸಂಭವಿಸಿದೆ.

ಅವರ ಭುಜ, ಕೆನ್ನೆ, ಕಾಲಿಗೆ ಗಾಯವಾಗಿದ್ದು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಟ್ರಾನ್ಸ್‌ ಫಾರ್ಮರ್‌ ಏರಿದ ವ್ಯಕ್ತಿ ಸಾವು
ಕಾಸರಗೋಡು: ಸಾರ್ವಜನಿಕರು ನೋಡನೋಡು ತ್ತಿದ್ದಂತೆ ಟ್ರಾನ್ಸ್‌ ಫಾರ್ಮರ್‌ ಮೇಲೇರಿದ ಯುವಕನೋರ್ವ ವಿದ್ಯುತ್‌ ಸ್ಪರ್ಶ ದಿಂದ ಸಾವಿಗೀಡಾದ ಘಟನೆ ಕಾಂಞಂಗಾಡ್‌ನ‌ಲ್ಲಿ ಸಂಭವಿಸಿದೆ.

ಕೋಟ್ಟೆಚ್ಚೇರಿ ಪೇಟೆಯಲ್ಲಿ ಗೂಡಂಗಡಿಯಲ್ಲಿ ಕೆಲಸ ಮಾಡು ತ್ತಿದ್ದ ಉದಯ (45) ಮೃತಪಟ್ಟವರು.

ತಂತಿ ಸ್ಪರ್ಶಿಸುತ್ತಿದ್ದಂತೆ ಅವರು ರಸ್ತೆಗೆ ಎಸೆಯಲ್ಪಟ್ಟರು. ಸ್ಥಳದಲ್ಲಿದ್ದವರು ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಸಾವಿಗೀಡಾಗಿ ದ್ದರು. ಕೋಟ್ಟಯಂ ನಿವಾಸಿಯಾಗಿದ್ದ ಅವರು ಕೋಟ್ಟಚ್ಚೇರಿಯಲ್ಲಿ ವಾಸವಾಗಿದ್ದರು

Advertisement

Udayavani is now on Telegram. Click here to join our channel and stay updated with the latest news.

Next