ಉಪ್ಪುಂದ : ನಾಗೂರು ರಾ. ಹೆದ್ದಾರಿ 66ರಲ್ಲಿ ಇನೋವಾ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಇಬ್ಬರು ಗಂಭೀರ ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಕಾರವಾರ ಜಿ.ಪಂ. ಮಾಜಿ ಸದಸ್ಯ ರತ್ನಾಕರ ನಾಯ್ಕ ಹಾಗೂ ವಕೀಲರು ಗಾಯಗೊಂಡವರು.
ಕುಂದಾಪುರದಿಂದ ಕಾರಾವಾರಕ್ಕೆ ಹೋಗುತ್ತಿರುವಾಗ ನಾಗೂರು ಹನುಮಾನ್ ದೈವಸ್ಥಾನದ ಸನಿಹದ ರಾ.ಹೆ.66ರಲ್ಲಿ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಹೆದ್ದಾರಿಯ ಡಿವೈಡರ್‌ಗೆ ಹತ್ತಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಿದ್ಯುತ್ ಕಂಬ ಕಾಂಕ್ರೀಟ್ ಬುಡ ಸಮೇತ ಕಿತ್ತು ರಸ್ತೆಯ ಇನ್ನೊಂದು ಬದಿಗೆ ಬಿದ್ದಿದೆ.
ಇದನ್ನೂ ಓದಿ : ತಾನೊಬ್ಬನೇ ಪುತ್ರನಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ ಸಹೋದರಿಯರಿಗೆ ವಂಚಿಸದ ಸಹೋದರ
ಅಪಘಾತದ ಪರಿಣಾಮ ರತ್ನಾಕರ ನಾಯ್ಕ ಅವರ ಮೂರು ಬೆರಳು ತುಂಡಾಗಿ ರಸ್ತೆಗೆ ಬಿದ್ದಿತ್ತು. ಕಾಲು ಮುರಿತಕ್ಕೊಳಗಾಗಿದ್ದಾರೆ. ಇನ್ನೊಬ್ಬರಿಗೆ ತಲೆಗೆ ತೀವ್ರ ಪೆಟ್ಟಾಗಿದೆ. ಗಾಯಾಳುಗಳನ್ನು ತತ್‌ಕ್ಷಣ ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು, ಸಾರ್ವಜನಿಕರು ಸಹಕರಿಸಿದರು.
ಕುಂದಾಪುರ ಸಂಚಾರ ಠಾಣೆಯ ಎಸ್‌ಐ ಸುಧಾ ಪ್ರಭು ಹಾಗೂ ಸಿಬಂದಿ ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.