Advertisement
ಬಾಕಿ ಇದ್ದ 35 ಕ್ಷೇತ್ರಗಳ ಪೈಕಿ 23 ಕ್ಷೇತ್ರಗಳಿಗೆ ಬುಧವಾರ ತಡರಾತ್ರಿ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿತು. ಈ ಪೈಕಿ 14 ಹಾಲಿ ಶಾಸಕರ ಕ್ಷೇತ್ರಗಳಾಗಿದ್ದವು. ಇದರಲ್ಲಿ ಬೈಂದೂರು ಸಹ ಒಂದಾಗಿತ್ತು. ಇಲ್ಲಿಯ ಟಿಕೆಟ್ ಘೋಷಣೆ ಸಂಬಂಧ ಹೈಕಮಾಂಡ್ ಕಡೆಯಿಂದ ಬುಧವಾರ ಸಂಜೆವರೆಗೂ ನಿರ್ಧಾರ ಹೊರಬಿದ್ದಿರಲಿಲ್ಲ. ಆದರೆ ತಡರಾತ್ರಿ 11ರ ವೇಳೆಗೆ ಪ್ರಕಟಿಸಲಾಗಿದೆ.ಕ್ಷಣಕ್ಕೊಂದು ಸುದ್ದಿ ಕೇಳಿ ಬರುತ್ತಿದ್ದು, ಹಾಲಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟರಿಗೆ ಪಕ್ಷದಿಂದ ನಾಯಕರು ಕರೆ ಮಾಡಿದ್ದಾರೆನ್ನಲಾಗಿದೆ. ಆದರೆ ಇವರ ಬೆಂಬಲಿಗರು ಆಕ್ರೋಶಗೊಂಡಿದ್ದು, ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಮಂಗಳವಾರ ತಡರಾತ್ರಿಯವರೆಗೂ ಶಾಸಕರ ನಿವಾಸದಲ್ಲಿ ನೂರಾರು ಮಂದಿ ಬೆಂಬಲಿಗರು ಸೇರಿದ್ದರು.
ಸುಕುಮಾರ್ ಶೆಟ್ಟರು ತಮ್ಮ ಬೆಂಬಲಿಗರೊಂದಿಗೆ ಶಿಕಾರಿಪುರಕ್ಕೆ ತೆರಳಿದ್ದು, ಬಿ.ಎಸ್.ಯಡಿಯೂರಪ್ಪ ಅವರ ಪುತ್ರರಾದ ಸಂಸದ ಬಿ.ವೈ. ರಾಘವೇಂದ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದು, ಆಶಾದಾಯಕ ಭರವಸೆ ಸಿಕ್ಕಿದೆ ಎನ್ನುವುದು ಅವರ ಬೆಂಬಲಿಗರ ಅಭಿಮತ. ಮುಂದಿನ ವರ್ಷ ಲೋಕಸಭಾ ಚುನಾವಣೆಯೂ ನಡೆಯಲಿದೆ. ಬೈಂದೂರು ಕ್ಷೇತ್ರವು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿದ್ದು, ಆ ನಿಟ್ಟಿನಲ್ಲಿಯೂ ಇಲ್ಲಿನ ಟಿಕೆಟ್ ಹಂಚಿಕೆಗೆ ತೂಗಿ ಅಳೆಯಲಾಗುತ್ತಿತ್ತು. ಹಾಲಿಯೋ? ಹೊಸಮುಖವೋ?
ಬೈಂದೂರು ಬಿಜೆಪಿ ಟಿಕೆಟ್‌ಗೆ ಸಂಬಂಧಿಸಿದಂತೆ ಈಗ ಹಾಲಿಯೋ ಅಥವಾ ಹೊಸಮುಖವೋ ಅನ್ನುವ ಚರ್ಚೆ ಸಾಕಷ್ಟು ನಡೆದಿತ್ತು. ಉಡುಪಿ ಜಿÇÉೆಯಲ್ಲಿ ಮೂವರು ಸೇರಿದಂತೆ, ಕರಾವಳಿಯಲ್ಲಿ ಈಗಾಗಲೇ 6 ಮಂದಿ ಹೊಸಮುಖಗಳಿಗೆ ಅವಕಾಶ ನೀಡಿದೆ.
Related Articles
Advertisement
ಬೈಂದೂರಿಗೂ ಹೊಸಮುಖ: ಗುರುರಾಜ್ ಗಂಟಿಹೊಳೆಗೆ ಟಿಕೆಟ್ಹಾಲಿ ಶಾಸಕ ಸುಕುಮಾರ ಶೆಟ್ಟರಿಗೆ ತಪ್ಪಿದ ಟಿಕೆಟ್
ಕುಂದಾಪುರ: ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹೊಸಮುಖ ಗುರುರಾಜ್ ಗಂಟಿಹೊಳೆ ಅವರಿಗೆ ಟಿಕೆಟ್ ನೀಡಿದೆ. ಕೊನೆಗೂ ಬಿಜೆಪಿ ಹೈಕಮಾಂಡ್ ಅಳೆದು – ತೂಗಿ ಕುತೂಹಲ ಕೆರಳಿಸಿದ್ದ ಬೈಂದೂರಿಗೆ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ. ಈ ಮೂಲಕ ಹಾಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟರಿಗೆ ಈ ಬಾರಿ ಟಿಕೆಟ್ ತಪ್ಪಿದಂತಾಗಿದೆ. ಆರೆಸ್ಸೆಸ್ ಹಿನ್ನೆಲೆಯ ಗುರುರಾಜ್ ಹಿಂದೂ ಸಂಘಟನೆ ಮುಖಂಡರಾಗಿ ಸಕ್ರಿಯರಾಗಿದ್ದು, ಹಿಂದೆ ಬಿಜೆಪಿ ಜಿಲ್ಲಾ ಮಾಜಿ ಪ್ರಧಾನ ರ್ಕಾಯದರ್ಶಿಯಾಗಿ, ಜಿಲ್ಲಾ ಉಪಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಬೈಂದೂರು ತಾಲೂಕಿನ ಉಪ್ಪುಂದ ಸಮೀಪದ ಬಿಜೂರು ಸಮೀಪದ ಗಂಟಿಹೊಳೆ ಇವರ ಹುಟ್ಟೂರು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಗುರುರಾಜ್ ಆರೆಸ್ಸೆಸ್‌ನಲ್ಲಿ ನಾನಾ ಕಡೆ ಪ್ರಚಾರಕರಾಗಿ ಸಂಘಟನೆಯನ್ನು ಬಲಪಡಿಸಿದವರು. ಬಿಜೆಪಿಯ ಉಡುಪಿ ಜಿಲ್ಲಾ ಸಂಘಟನ ಕಾರ್ಯದರ್ಶಿಯಾಗಿ ವಿವಿಧ ಸ್ಥಳದ ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಆರೆಸ್ಸೆಸ್‌ನಲ್ಲಿ 10 ವರ್ಷಗಳ ಕಾಲ ಪ್ರಚಾರಕನಾಗಿ ಕಾರ್ಯನಿರ್ವಹಿಸಿದ್ದಾರೆ. ಅಖೀಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿಯೂ ಇದ್ದರು.