Advertisement

ಬೈಂದೂರು: ಎಟಿಎಂ ಕಳವಿಗೆ ಯತ್ನ

04:06 AM May 05, 2019 | Sriram |

ಬೈಂದೂರು: ಗ್ಯಾಸ್‌ ಕಟ್ಟರ್‌ ಬಳಸಿ ಎಟಿಎಂ ಒಡೆದು ಹಣ ದೋಚಲು ವಿಫಲ ಪ್ರಯತ್ನ ಮಾಡಿದ ಘಟನೆ ಬೈಂದೂರಿನಲ್ಲಿ ನಡೆದಿದೆ.

Advertisement

ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳರು ಗ್ಯಾಸ್‌ ಸಿಲಿಂಡರ್‌ ಬಳಸಿ ಬೆಂಕಿಯಿಂದ ಸುಟ್ಟಿದ್ದು,ಮೆಷಿನ್‌ ಮುಂಭಾಗವನ್ನು ಜಖಂಗೊಳಿಸಿದ್ದಾರೆ.ಸಿಸಿಕೆಮರಾದ ಹಾರ್ಡ್‌ಡಿಸ್ಕ್ ಕೂಡ ಸುಟ್ಟುಹೋಗಿದೆ. ಕಳವು ನಡೆ ಸಲು ವಿಫಲರಾದ ಬಳಿಕ ಗ್ಯಾಸ್‌ ಸಿಲಿಂಡರ್‌ ಬಿಟ್ಟು ಪರಾರಿಯಾಗಿದ್ದಾರೆ. ಕಳ್ಳರ ಕೃತ್ಯದಿಂದ ಸುಮಾರು 1.25 ಲ.ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.

ಶಿರೂರಿನ ಮೈದಿನಪುರದ ಅಂಗಡಿ ಯೊಂದರಿಂದ ಗ್ಯಾಸ್‌ ಸಿಲಿಂಡರ್‌ ಕಳವಾಗಿದ್ದು, ಇದೇ ಸಿಲಿಂಡರನ್ನು ಕಳ್ಳತನಕ್ಕೆ ಬಳಸಲಾಗಿದೆ ಎಂದು ತಿಳಿದು ಬಂದಿದೆ.ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next