Advertisement
ನೇಮಿನಾಥ ಅವರು ಎಸ್‌ಎಸ್‌ಎಲ್‌ಸಿವರೆಗೆ ಓದಿದ್ದಾರೆ. ತಮ್ಮ 20ನೇ ವಯಸ್ಸಿನಲ್ಲಿ ನೀರಾವರಿ ಸೌಲಭ್ಯ ಪಡೆದು ಸಮಗ್ರ ಕೃಷಿ ಕೈಗೊಂಡಿದ್ದು ಅವರ 8 ಎಕರೆ ಭೂಮಿ ಹಸಿರಿನಿಂದ ಕಂಗೊಳಿಸುತ್ತಿದೆ.ಕೃಷಿಯಿಂದ ಸಾಕಷ್ಟು ಆದಾಯ ಸಾಧ್ಯವಿದೆ.
Related Articles
ಅವರು. ತಿಪ್ಪೆ ಬಳಿಸಿ ಗೋಬರ್ ಗ್ಯಾಸ್ ಅಳವಡಿಕೆ ಮಾಡಿದ್ದು ಅದನ್ನು ಮನೆಯ ಅಡುಗೆ ತಯಾರಿಗೆ ಬಳಸುತ್ತಾರೆ. ಸೋಲಾರ್ ಅಳವಡಿಸಿ ಮನೆಯ ಮತ್ತು ಪಂಪಸೆಟ್ ಬಳಕೆಗೆ ಉಪಯೋಗಿಸುತ್ತಾರೆ.
Advertisement
ಎರೆಹುಳು ಮೂಲಕ ಸಾವಯವ ಗೊಬ್ಬರ ತಯಾರಿಸಿ ಸಾವಯವ ಕೃಷಿ ಮಾಡುತ್ತಾರೆ. ಹೊಲದಲ್ಲಿ ಮಾವಿನಗಿಡ, ಪೇರಲ, ಸೀತಾಫಲ, ಪಪ್ಪಾಯಿ, ನಿಂಬೆ, ಟೆಂಗಿನಕಾಯಿ, ಚಿಕ್ಕು ಮರ ಬೆಳೆಸಿದ್ದಾರೆ. 2 ಗೀರ್ ಆಕಳು, ಎಚ್‌ಎಫ್ 2 ಆಕಳು, 1 ಜರ್ಸಿಆಕಳು, 1 ಜವಾರಿ ಆಕಳು, 2 ಎತ್ತುಗಳು, 10 ಆಡುಗಳನ್ನು ಸಾಕಿದ್ದಾರೆ. ಇವೆಲ್ಲ ವರಮಾನ ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ. ಇವೆಲ್ಲಕ್ಕೂ ಇರುವ ಭೂಮಿಯ ಒಂದು ಮೂಲೆಯಲ್ಲೇ ಹುಲ್ಲು ಬೆಳೆಯುತ್ತಿದ್ದಾರೆ. ಆಕಳಿನಿಂದ ಮೂರು ದಿನಕ್ಕೊಮ್ಮೆ 25 ಲೀಟರ್ಹಾಲಿನಲ್ಲಿ 1 ಕೆಜಿ ಬೆಣ್ಣೆ ತೆಗೆಯುತ್ತಾರೆ. ಹಾಲು ಮತ್ತು ಬೆಣ್ಣೆ ಮಾರಾಟದಿಂದ 2500 ರೂ. ಹಣ ಬರುತ್ತದೆ. ಹೊಲದಲ್ಲಿ ಒಂದು ಬಾವಿ ಕೊರೆಸಿ ನೀರಾವರಿ ಮೂಲಕ ಕೃಷಿ ಮಾಡುತ್ತಿದ್ದಾರೆ. ಟ್ರ್ಯಾಕ್ಟರ್ ಮೂಲಕ ಬಿತ್ತನೆ, ಎಡೆ ಹೊಡೆಯುತ್ತಾರೆ. ನೇಗಿಲು, ರೂಟರ್, ಚಾಪ್ ಕಟರ್ (ಹುಲ್ಲು ಕತ್ತರಿಸುವ ಯಂತ್ರ) ಇವನ್ನೆಲ್ಲ ಕೃಷಿ ಇಲಾಖೆಯ
ಸಹಾಯಧನದಲ್ಲಿ ತೆಗೆದುಕೊಂಡಿದ್ದಾರೆ. ಶ್ರೇಷ್ಠ ಕೃಷಿಕ ಪ್ರಶಸ್ತಿ: 2018 ರಲ್ಲಿ ಕೃಷಿ ಇಲಾಖೆ ಆತ್ಮಾ ಯೋಜನೆಯಡಿ ತಾಲೂಕು ಮಟ್ಟದ ಪ್ರಶಸ್ತಿ, 2004 ರಲ್ಲಿ ಹೆ„ಬ್ರಿಡ್ ಜೋಳ ಉತ್ತಮವಾಗಿ ಬೆಳೆದಿರುವದಕ್ಕೆ ಕೃಷಿ ಇಲಾಖೆಯಿಂದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದಿದ್ದಾರೆ. ಇವರ ಸಂಪರ್ಕ ಸಂಖ್ಯೆ-8105701008. *ಸಿ.ವಾಯ್. ಮೆಣಶಿನಕಾಯಿ