Advertisement

Loan repayment; ಸುಸ್ತಿದಾರನಾಗುವ ದಿಕ್ಕಿನಲ್ಲಿ ಬೈಜೂಸ್‌ ?

08:25 PM Jun 05, 2023 | |

ನವದೆಹಲಿ: ದೇಶದ ಯಶಸ್ವಿ ನವೋದ್ಯಮಗಳಲ್ಲಿ ಒಂದಾಗಿದ್ದ ಬೈಜೂಸ್‌ ಈಗ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. ಸಾಲದಾತರ ಒಕ್ಕೂಟ ನೀಡಿದ್ದ ಜೂ.5ರ ಗಡುವಿನ ಒಳಗೆ 40 ದಶಲಕ್ಷ ಡಾಲರ್‌ ಮರುಪಾವತಿ ಮಾಡದೇ ಹೋದಲ್ಲಿ ಸುಸ್ತಿದಾರನ ಪಟ್ಟಿ ಸೇರುವ ಭೀತಿ ಎದುರಿಸುತ್ತಿದೆ.

Advertisement

ವಿವಿಧ ಸಾಲದಾತರಿಂದ 1.2 ಶತಕೋಟಿ ಡಾಲರ್‌ ಸಾಲ ಪಡೆದಿರುವ ಸಂಸ್ಥೆ, ಮರುಪಾವತಿಗೆ ಹೆಣಗಾಡುತ್ತಿದ್ದು, ಇತ್ತೀಚೆಗಷ್ಟೇ ಸಾಲದಾತರು ಒಕ್ಕೂಟವಾಗಿ ಮರುಪಾವತಿ ಪಡೆಯಲು ಒಪ್ಪಿಗೆ ಸೂಚಿಸಿದರು.

ಅದರಂತೆ ಪ್ರತೀ ತ್ತೈಮಾಸಿಕದಲ್ಲಿ ಬೈಜೂಸ್‌ ಸಂಸ್ಥೆಯು 40 ದಶಲಕ್ಷ ಡಾಲರ್‌ ಮೊತ್ತವನ್ನು ಒಕ್ಕೂಟದಿಂದ ನೇಮಿಸಲಾಗಿರುವ ಹೌಲಿಹಾನ್‌ ಲೋಕಿ ಸಂಸ್ಥೆಗ ಪಾವತಿಸಬೇಕಿದೆ. ಆದರೆ, ಜೂ.5ರಂದು ಬೈಜೂಸ್‌ ಹಣ ಮರುಪಾವತಿ ಮಾಡಿದೆಯೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಒಂದು ವೇಳೆ ಮರುಪಾವತಿ ಆಗದೇ ಇದ್ದಲ್ಲಿ. ಸಂಸ್ಥೆ ಸುಸ್ಥಿಗಾರನಾಗುವುದಲ್ಲದೇ, ಸಾಲದಾತರ ಒಕ್ಕೂಟ ಬೇರೆ ಷರತ್ತಗಳನ್ನೂ ವಿಧಿಸುವ ಸಾಧ್ಯತೆಗಳಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next