ಬ್ಯಾಡಗಿ: ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದಲ್ಲಿ ಕೆರೆಕೊಡಿ ಬಿದ್ದು ಹರಿಯುತ್ತಿದ್ದು, ನೀರಿನ ಒತ್ತಡಕ್ಕೆ ಒಂದು ಕಡೆಯ ಒಡ್ಡು ಕುಸಿಯುತ್ತಿದೆ ಎಂದು ರೈತ ಸಂಘದ ಸದಸ್ಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿ ಕಾರಿಗಳು ಹಿರೇನಂದಿಹಳ್ಳಿ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ್ದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ರೈತ ಕಿರಣ ಗಡಿಗೋಳ, ಸಣ್ಣ ನೀರಾವರಿ ಇಲಾಖೆ ಇದ್ದೂ ಇಲ್ಲಂದತಾಗಿದೆ. ಕೆರೆಗಳ ಹೂಳೆತ್ತಿ ನಿರ್ವಹಣೆ ಮಾಡಬೇಕಿದ್ದ ಇಲಾಖೆ ಅಧಿಕಾರಿಗಳಿಗೆ ರೈತರೇ ಕರೆದು ಸಮಸ್ಯೆ ತೋರಿಸಬೇಕಾ? ನಿಮ್ಮ ಕರ್ತವ್ಯ ನಿರ್ವಹಣೆಗೆ ನಾವು ಆಹ್ವಾನ ನೀಡಬೇಕೆ ಎಂದು ಬೆವರಿಳಿಸಿದರು.
ಬೇಸಿಗೆಯಲ್ಲಿ ಕೆರೆಯ ಅಭಿವೃದ್ಧಿ ಕಾರ್ಯ ಮಾಡಿದ್ದಲ್ಲಿ ಇನ್ನೂ ಹೆಚ್ಚಿನ ನೀರಿನ ಸಂಗ್ರಹಣೆ ಮಾಡಬಹುದಿತ್ತು. ಒಡ್ಡುಗಳನ್ನು ಬಂದೋಬಸ್ತ್ಮಾ ಡಿದ್ದರೆ ಇಂತಹ ಆತಂಕ ಎದುರಾಗುತ್ತಿರಲಿಲ್ಲ. ಇಗಾಗುತ್ತಿರುವ ಸಮಸ್ಯೆ ಹೇಗೆ ಬಗೆ ಹರಿಸಿತ್ತೀರಿ ಹೇಳಿ ಎಂದು ಪ್ರಶ್ನಿಸಿದರು.
ಬಸವರಾಜ ಬನ್ನಿಹಟ್ಟಿ, ಕೆರೆಗಳು ರೈತರ ಅಷ್ಟೇ ಎಕೆ ಪ್ರತಿಯೊಬ್ಬರ ಜೀವನಾಡಿ. ಅವುಗಳನ್ನು ಸಂರಕ್ಷಣೆ ಮಾಡಿದಲ್ಲಿ ಮಾತ್ರ ಅಂತರ್ಜಲ ಹೆಚ್ಚಳವಾಗಿ ನೀರಿನ ಬವಣೆ ತಪ್ಪಲಿದೆ ಎಂದರು. ಸಣ್ಣ ನೀರಾವರಿ ಇಲಾಖೆ ಅಧಿಕಾರಿ ವಿನಾಯಕ ಪವಾರ ಮಾತನಾಡಿ, ರೈತರು ಭಯ ಪಡುವ ಅಗತ್ಯವಿಲ್ಲ .
ಬೇಸಿಗೆಯಲ್ಲಿ ಬಿಸಿಲಿಗೆ ಕೆರೆಯ ಒಡ್ಡಿನಲ್ಲಿ ಏರ್‌ಕ್ರ್ಯಾಕ್ ಉಂಟಾಗಿ ನೀರು ಬಸಿಯುತ್ತಿದೆ. ಇದರಿಂದ ಯಾವುದೇ ತೊಂದರೆಯಾಗಲ್ಲ ಎಂದು ಸಮಜಾಯಿಸಿ ನೀಡಿದರು. ತಾಪಂ ಕಾರ್ಯನಿರ್ವಾಹಕ ಅ ಧಿಕಾರಿ ಅಬೀಬ್ ಗದ್ಯಾಳ, ಸಣ್ಣ ನೀರಾವರಿ ಇಲಾಖೆ ಅನಿಲಕುಮಾರ, ಪಿಡಿಒ ಮಲ್ಲೇಶ ಮೋಟನವರ, ಶಿವಣ್ಣ ಕುಮ್ಮೂರ, ಬಸನಗೌಡ ಸಣ್ಣಗೌಡ್ರ ಇದ್ದರು.