Advertisement

ದಾಖಲೆ ಮೆಣಸಿನಕಾಯಿ ಚೀಲ ಆವಕ

08:10 PM Feb 05, 2021 | Team Udayavani |

ಬ್ಯಾಡಗಿ: ಗುರುವಾರ ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಪ್ರಸಕ್ತ ವರ್ಷದಲ್ಲಿ ದಾಖಲೆಯ 1,36,000 ಮೆಣಸಿನಕಾಯಿ ಚೀಲಗಳು ಆವಕಾಗಿದ್ದು, ದರದಲ್ಲಿ ಸ್ಥಿರತೆ ಕಂಡುಬಂದಿದೆ.

Advertisement

ಕಳೆದ ಕೆಲ ವಾರಗಳಿಂದ ಆವಕದ ಕೊರತೆ ಎದುರಿಸುತ್ತಿದ್ದ ಮಾರುಕಟ್ಟೆಯಲ್ಲಿ ಗುರುವಾರ ಆವಕದಲ್ಲಿ ಮ ತ್ತೆ ಏರಿಕೆ ಕಂಡು ಬಂದಿದ್ದು ಮೆಣಸಿನಕಾಯಿ ಘಾಟು ಮತ್ತೆ ಜೋರಾಗುತ್ತಿದೆ. ಕಳೆದ ಸೋಮವಾರ 1 ಲಕ್ಷ 20 ಸಾವಿರ ಮೆಣಸಿನಕಾಯಿ ಆವಕದಿದ್ದರೆ, ಇದೀಗ ಗುರುವಾರ ಪ್ರಸಕ್ತ ವರ್ಷದಲ್ಲಿಯೇ ಅತಿ ಹೆಚ್ಚು ಮೆಣಸಿನಕಾಯಿ ಚೀಲಗಳು ಹರಿದು ಬಂದಿವೆ.ಮಾರುಕಟ್ಟೆಗೆ ಆವಕ ಹೆಚ್ಚಾದ ಕಾರಣ ವ್ಯಾಪಾರಸ್ಥರು ರಸ್ತೆಯನ್ನು ಬಿಡದೆ ಮೆಣಸಿನಕಾಯಿ ಚೀಲಗಳನ್ನು ಟೆಂಡರ್‌ಗೆ ಇಟ್ಟಿದ್ದ ದೃಶ್ಯಗಳು ಕಂಡು ಬಂದವು.

ಇದನ್ನೂ ಓದಿ :ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಬಳಿಕ 2ಗುಂಪಿನ ಮಧ್ಯೆ ಮಾರಾಮಾರಿ: ಕಾರುಗಳ ಗಾಜು ಪುಡಿ

ಗುರುವಾರದ ಮಾರುಕಟ್ಟೆ ದರ:ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಒಟ್ಟು 1.361 73 ಮೆಣಸಿನಕಾಯಿ ಚೀಲಗಳು ಆವಕವಾಗಿದ್ದು ಬ್ಯಾಡಗಿ ಕಡ್ಡಿತಳಿ ಪ್ರತಿ ಕ್ವಿಂಟಲ್‌ಗೆ ಕನಿಷ್ಠ 1300, ಗರಿಷ್ಠ 26999 ಮಾದರಿ 12209 ದರಗಳಿಗೆ ಮಾರಾಟ ವಾದರೇ, ಡಬ್ಬಿ ತಳಿ ಕನಿಷ್ಠ 2109 ಗರಿಷ್ಠ 37611 ಸರಾಸರಿ 15510 ಹಾ ಗೂ ಗುಂಟೂರ ತಳಿ ಕನಿಷ್ಠ 700 ಗರಿಷ್ಟ 10969 ಮಾದರಿ 5469 ರೂ.ಗಳಿಗೆ ಮಾರಾಟವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next