Advertisement

ಹೊತ್ತು ಹೊತ್ತಿಗೆ

03:45 AM Jun 25, 2017 | |

ರಹಮತ್‌ ತರೀಕೆರೆ ಅವರ ‘ಸಾಂಸ್ಕೃತಿಕ ಅಧ್ಯಯನ’ ಪುಸ್ತಕ ಪ್ರಕಟಗೊಂಡಿದೆ. ಲೇಖಕರೇ ಹೇಳುವಂತೆ ಇದು ಮರುಮುದ್ರಣವಲ್ಲ ಮರುರಚನೆಗೊಂಡಿದ್ದು.

Advertisement

ಲೇಖಕರ ಮಾತುಗಳಿಂದ ಆಯ್ದ ಸಾಲುಗಳಿವು:
ಈ ಪುಸ್ತಕದ ಉದ್ದೇಶ, ಕನ್ನಡದಲ್ಲಿ ಸಾಂಸ್ಕೃತಿಕ ಅಧ್ಯಯನಗಳು ಉದ್ದಕ್ಕೂ ಹೇಗೆ ನಡೆದುಬಂದಿವೆ ಹಾಗೂ ಈಗ ಹೇಗೆ ಹೊಸ ಹೊಸ ತಿರುವು ಪಡೆದುಕೊಂಡು ನಡೆಯುತ್ತಿವೆ ಎಂಬ ಚರಿತ್ರೆಯನ್ನು ಸರಳವಾಗಿ ದಾಖಲಿಸುವುದೇ ಹೊರತು ಯಾವುದಾದರೂ ಸಂಶೋಧನ ವಿಷಯ ಆರಿಸಿಕೊಂಡು ಸಾಂಸ್ಕೃತಿಕ ಅಧ್ಯಯನ ಹೇಗೆ ಮಾಡಬಹುದು ಎಂಬುದಕ್ಕೆ ಮಾದರಿಯನ್ನು ಮಂಡಿಸುವುದಲ್ಲ. ಇದೊಂದು ಮಾಹಿತಿ ಪ್ರಧಾನವಾದ ಪ್ರವೇಶಿಕೆ. ಇದನ್ನು ಬರೆಯುವಾಗ ನನ್ನ ಕಣ್ಮುಂದೆ ಇರುವವರು ಈ ಕ್ಷೇತ್ರದಲ್ಲಿ ಚಿಂತನೆ ಮತ್ತು ಅಧ್ಯಯನ ಮಾಡಿರುವ ವಿದ್ವಾಂಸರಲ್ಲ. ಬದಲಾಗಿ ಸಾಹಿತ್ಯ, ಭಾಷೆ, ಜಾನಪದ, ಚರಿತ್ರೆ, ಸಮಾಜಶಾಸ್ತ್ರಗಳಲ್ಲಿ ಅಧ್ಯಯನ ಮಾಡುವ ಮಾನವಿಕ ಹಾಗೂ ಸಮಾಜವಿಜ್ಞಾನದ ಪ್ರಾಥಮಿಕ ವಿದ್ಯಾರ್ಥಿಗಳು. ಮುಂದುವರೆದು ಕೆಲವಾದರೂ ಸಾಂಸ್ಕೃತಿಕ ಅಧ್ಯಯನ ಕೈಗೊಳ್ಳುವ ಹೊಸ ತಲೆಮಾರಿನ ಸಂಶೋಧಕರಿಗೆ, ಸಂಶೋಧನ ವಿಧಾನಗಳನ್ನು ಕಂಡುಕೊಳ್ಳುವ ಹೊತ್ತಲ್ಲಿ ಈ ಪುಸ್ತಕ ಉಪಯುಕ್ತವಾದೀತು ಎಂಬ ನಂಬಿಕೆಯಿದೆ.

ಕನ್ನಡದಲ್ಲಿ ಸಾಂಸ್ಕೃತಿಕ ಅಧ್ಯಯನಗಳು ಜ್ಞಾನಶಿಸ್ತಿನ ಎರಡು ಕ್ಷೇತ್ರಗಳಲ್ಲಿ ನಡೆದಿವೆ. ಒಂದು, ಮಾನವಿಕ ಕ್ಷೇತ್ರದ ಸಾಹಿತ್ಯ, ಭಾಷೆ, ಜಾನಪದ ಇತ್ಯಾದಿ ಶಿಸ್ತುಗಳಲ್ಲಿ; ಇನ್ನೊಂದು, ಸಮಾಜವಿಜ್ಞಾನ ಕ್ಷೇತ್ರದ ಸಮಾಜಶಾಸ್ತ್ರ, ಚರಿತ್ರೆ, ಮಾನವಶಾಸ್ತ್ರ, ತತ್ವಶಾಸ್ತ್ರ ಮುಂತಾದ ಶಿಸ್ತುಗಳಲ್ಲಿ. ಮುಖ್ಯ ಸಂಗತಿಯೆಂದರೆ, ಈ ಎರಡೂ ಕ್ಷೇತ್ರಕ್ಕೆ ಸೇರಿದ ಜ್ಞಾನಶಿಸ್ತುಗಳು ಪರಸ್ಪರ ಕೊಡುಕೊಳುವಿಕೆ ಮಾಡುತ್ತ, ನಡುವಣ ಗಡಿಗೆರೆಗಳು ತೀವ್ರವಾಗಿ ಕಲಸಿಕೊಳ್ಳುತ್ತಿರುವುದು. ಇದು ಕನ್ನಡ ಸಾಂಸ್ಕೃತಿಕ ಅಧ್ಯಯನಗಳ ಒಂದು ಲಕ್ಷಣ. ಕನ್ನಡದಲ್ಲಿ ಸಾಂಸ್ಕೃತಿಕ ಅಧ್ಯಯನಗಳನ್ನು ಕೈಗೊಂಡಿರುವವರಲ್ಲಿ ಹೆಚ್ಚಿನವರು ಸಾಹಿತ್ಯದವರು. ಅವರ ಹಿಂದೆ ನಿಂತು ಕೆಲಸ ಮಾಡಿರುವವು ಹೆಚ್ಚಾಗಿ ಸಮಾಜ-ವಿಜ್ಞಾನದ ಚಿಂತನೆಗಳು. ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ಸಾಹಿತ್ಯಕ ಅಧ್ಯಯನಗಳನ್ನು ಇಲ್ಲಿ ಹೆಚ್ಚಾಗಿ ಪರಿಶೀಲಿಸಲಾಗಿದೆ. ಸಮಾಜ-ವಿಜ್ಞಾನದವರು ಸಾಂಸ್ಕೃತಿಕ ಅಧ್ಯಯನ ಪರಿಕಲ್ಪನೆ ಕುರಿತು ಬರೆದರೆ, ಅದು ಖಂಡಿತ ಬೇರೆಯಾಗಿ ಇರಬಲ್ಲದು ಎಂಬ ಖಬರು ನನಗಿದೆ.

ಮುಂಜಾನೆಯ ಬೆಳಕಿನಲ್ಲಿ
(ಫ‌ಸ್ಟ್‌ ಇನ್‌ ದ ಮಾರ್ನಿಂಗ್‌)
ಲೇ.: ಓಶೋ
ಅನು.: ಬೆ.ಕಾ. ಮೂರ್ತಿàಶ್ವರಯ್ಯ
ಪ್ರ.: ಸಪ್ನ ಬುಕ್‌ ಹೌಸ್‌, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-560009
ಮೊದಲ ಮುದ್ರಣ: 2017 ಬೆಲೆ: ರೂ. 360

ರೂಪಾಯಿ ನಿಷೇಧ ಚಕ್ರಕಾವ್ಯ
(ಕವನ ಸಂಕಲನ)
ಲೇ.: ಅರವಿಂದ ಮಾಲಗತ್ತಿ
ಪ್ರ.: ಉಷಾ ಪ್ರಕಾಶನ, 2542, ಹೆಬ್ಟಾಳ್‌ 2ನೇ ಹಂತ, ರೇಣುಕ ಎಲ್ಲಮ್ಮ ದೇವಸ್ಥಾನದ ಹತ್ತಿರ, ಮೈಸೂರು-570017
ಮೊದಲ ಮುದ್ರಣ: 2016 ಬೆಲೆ: ರೂ. 1500

Advertisement

ಬನಸಿರಿ
(ಶ್ರೀ ಭುವನೇಶ್ವರಿ ಹೆಗಡೆ ಅಭಿನಂದನ ಗ್ರಂಥ)
ಸಂ.: ಎನ್‌. ರಾಮನಾಥ್‌
ಪ್ರ.: ತೇಜು ಪಬ್ಲಿಕೇಷನ್ಸ್‌ , ನಂ. 233, 7ನೇ “ಎ’ ಅಡ್ಡರಸ್ತೆ, ಶಾಸಿŒನಗರ, ಬೆಂಗಳೂರು-560028
ಮೊದಲ ಮುದ್ರಣ: 2017 ಬೆಲೆ: ರೂ. 300 

ದೃಶ್ಯ ಕಲಾನ್ವೇಷಣೆ
(ವ್ಯಕ್ತಿ ಚಿತ್ರಣ)
ಲೇ.: ವೇ. ಗುರುಮೂರ್ತಿ
ಪ್ರ.: ಪ್ರೊ. ವೇ. ಗುರುಮೂರ್ತಿ, 29, 6ನೇ ಕ್ರಾಸ್‌, 1ನೇ ಮುಖ್ಯರಸ್ತೆ, ಮಾರುತಿನಗರ, ನಾಗರಭಾವಿ ಮುಖ್ಯರಸ್ತೆ, ಬೆಂಗಳೂರು-72
ಪರಿಷ್ಕೃತ ಮುದ್ರಣ: 2016 ಬೆಲೆ: ರೂ. 50

ಕೋಳYಂಬ
(ಕವನಸಂಕಲನ)
ಲೇ.: ಅಕ್ಷತಾ ಕೃಷ್ಣಮೂರ್ತಿ
ಪ್ರ.: ಉದಯಪ್ರಭಾ ಪ್ರಕಾಶನ, ಕಾರವಾರ-581301
ಮೊದಲ ಮುದ್ರಣ: 2016 ಬೆಲೆ: ರೂ. 80

ಬಸವರಾಜು ಕುಕ್ಕರಹಳ್ಳಿ ಕಥಾಲೋಕ
(ವಿಮಶಾì ಲೇಖನಗಳ ಸಂಕಲನ)
ಸಂ.: ಡಾ. ನೀಲಗಿರಿ ತಳವಾರ, ಡಾ. ಯೋಗೇಶ ಎನ್‌.
ಪ್ರ.: ವಿಜಯಲಕ್ಷ್ಮಿ ಪ್ರಕಾಶನ, 657, ಕೂಗುಬಂಡೆ ರಸ್ತೆ, ಇ ಮತ್ತು ಎಫ್ ಬ್ಲಾಕ್‌, ಕುವೆಂಪುನಗರ, ಮೈಸೂರು-23
ಮೊದಲ ಮುದ್ರಣ: 2017 ಬೆಲೆ: ರೂ. 210 

ಹನುಮನ ಹಲಿಗೆ
(ಕಾದಂಬರಿ)
ಲೇ.: ಪಿ.ಆರ್‌. ವೆಂಕಟೇಶ್‌
ಪ್ರ.: ಸಮಾಜ ವಿಜ್ಞಾನ ವೇದಿಕೆ, ಎಲ್‌.ಐ.ಜಿ. 176, ನೇತಾಜಿ ನಗರ, ಎಚ್‌.ಬಿ. ಕಾಲನಿ, ಬಳ್ಳಾರಿ
ಮೊದಲ ಮುದ್ರಣ: 2016 ಬೆಲೆ: ರೂ. 100

ಜಾಡಮಾಲಿ ಇಲ್ಲದ ನಗರ
(ಹೊಸ ಕವಿತೆಗಳು)
ಲೇ.: ಸಿದ್ಧಾರೂಢ ಕಟ್ಟಿಮನಿ
ಪ್ರ.: ಎಸ್‌.ಎಲ್‌.ಎನ್‌. ಪಬ್ಲಿಕೇಷನ್‌, ನಂ. 3437, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬನಶಂಕರಿ 2ನೇ ಹಂತ, ಬೆಂಗಳೂರು-28
ಮೊದಲ ಮುದ್ರಣ: 2016 ಬೆಲೆ: ರೂ. 90

ಕಿರುವೆರಳ ಸಟೆ
(ಭರತೇಶ ವೈಭವದ ಆಯ್ದ ಭಾಗ)
ಲೇ.: ಶ್ರೀಧರ ಹೆಗಡೆ ಭದ್ರನ್‌
ಪ್ರ.: ಅಭಿನವ, 17/18, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ , ವಿಜಯನಗರ, ಬೆಂಗಳೂರು-560 040
ಪರಿಷ್ಕೃತ ಮುದ್ರಣ: 2017 ಬೆಲೆ: ರೂ. 75

ಸಾಂಸ್ಕತಿಕ ಅಧ್ಯಯನ
(ಕನ್ನಡ ಸಂಸ್ಕೃತಿ ಸಂಶೋಧನೆಯ ಚರಿತ್ರೆ)
ಲೇ.: ರಹಮತ್‌ ತರೀಕೆರೆ
ಪ್ರ.: ಅಭಿನವ, 17/18, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ , ವಿಜಯನಗರ, ಬೆಂಗಳೂರು-560 040
ಪರಿಷ್ಕೃತ ಮುದ್ರಣ: 2017 ಬೆಲೆ: ರೂ. 200

Advertisement

Udayavani is now on Telegram. Click here to join our channel and stay updated with the latest news.

Next