Advertisement

ನಗುವಿಗಿದೆ ಹೃದಯ ಅರಳಿಸುವ ಶಕ್ತಿ

01:08 PM Feb 22, 2017 | |

ಹರಪನಹಳ್ಳಿ: ಕಲೆಗೆ ಯಾವುದೇ ಜಾತಿ, ಪ್ರದೇಶದ ಹಂಗಿಲ್ಲ. ಹಾಗಾಗಿ ಜನರನ್ನು ಜಾತಿಯ ಸಂಕೋಲೆಯಿಂದ ಹೊರ ತಂದು ಸಾಂಸ್ಕೃತಿಕವಾಗಿ ಸದೃಢ ಸಮಾಜ ಕಟ್ಟಬೇಕಿದೆ ಎಂದು ಪೆರಿಯಾರ್‌ ಮತ್ತು ಎಂ.ಪಿ.ಪ್ರಕಾಶ್‌ ಸೇವಾ ಸಂಸ್ಥೆ ರಾಜ್ಯ ಗೌರವಾಧ್ಯಕ್ಷ ಕೋಡಿಹಳ್ಳಿ ಭೀಮಪ್ಪ ಹೇಳಿದರು. 

Advertisement

ತಾಲೂಕಿನ ಕಡಬಗೇರಿ ಗ್ರಾಮದಲ್ಲಿ ಪೆರಿಯಾರ್‌ ಮತ್ತು ಎಂ.ಪಿ.ಪ್ರಕಾಶ್‌ ಸೇವಾ ಸಂಸ್ಥೆ, ಯು.ಗೋವಿಂದೇಗೌಡ(ಜೀ-ಜೀ) ಗೆಳೆಯರ ಬಳಗ ಹಾಗೂ ಕಡಬಗೇರಿ ಗ್ರಾಮಸ್ಥರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಚಲನಚಿತ್ರ ನಿರ್ದೇಶಕ, ಕಾಮಿಡಿ ಕಿಲಾಡಿಗಳು ಶೋ ನಟ ಯು.ಗೋವಿಂದೇಗೌಡ ಅವರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ಹಿಂದಿನ ಮೂಢನಂಭಿಕೆ, ಅನಿಷ್ಠ ಪದ್ಧತಿಗಳು ನಶಿಸುತ್ತಿದ್ದು, ತಂತ್ರಜ್ಞಾನವಾಗಿ ಮುಂದುವರೆಯುತ್ತಿರುವ ಕಾಲದಲ್ಲಿ ಜಾತಿ ಪದ್ಧತಿ ಬಲಗೊಳ್ಳುತ್ತಿರುವುದು ದುರಂತ ಸಂಗತಿ. ವಿದ್ಯಾವಂತ ಸಮುದಾಯವೇ ಜಾತಿಗಳಲ್ಲಿ ಒಳ ಪಂಗಡಗಳ ಜಾತಿ ಸಂಘಟನೆ ಕಟ್ಟುತ್ತಿರುವುದು ಅಪಾಯಕಾರಿ. ಮೂಢನಂಬಿಕೆ, ಜಾತಿ ಪದ್ಧತಿ ಇವುಗಳೆಲ್ಲಾವನ್ನು ಮರೆತು ಜನರ ಮನಸ್ಸುಗಳನ್ನು ಸಾಂಸ್ಕೃತಿಕ ಕಟ್ಟಬೇಕಿದೆ ಎಂದು ತಿಳಿಸಿದರು. 

ನಗುವಿಗೆ ಎಲ್ಲರ ಹೃದಯ ಅರಳಿಸಬಲ್ಲ ಶಕ್ತಿಯಿದೆ. ನಗು ನಗುತ್ತಾ ಇದ್ದಲ್ಲಿ ಅನೇಕ ರೋಗಗಳು ಕೂಡ ಬರುವುದಿಲ್ಲ. ಆದರೆ ಜಂಜಾಟದ ಬದುಕಿನಲ್ಲಿ ನಗು ಮರೆತು ಹೋಗಿದೆ. ಇಂತಹ ಸಮಯದಲ್ಲಿ ಖಾಸಗಿ ವಾಹಿನಿಯ ಶೋ ಮೂಲಕ ಪ್ರತಿ ಮನೆಯಲ್ಲಿಯೂ ನಗು ಅರಳಿದೆ. ಹಾಗಾಗಿ ಇಂತಹ ಕಾರ್ಯಕ್ರಮವನ್ನು ಹೆಚ್ಚು ಜನರು ವೀಕ್ಷಿಸಿ ಗೋವಿಂದೇಗೌಡ ಸೇರಿದಂತೆ ಅನೇಕ ಕಲಾವಿದರನ್ನು ಮುಖ್ಯವಾಹಿನಿಗೆ ಬರುವಂತೆ ಮಾಡಿದ್ದಾರೆ.

ಇಂತಹ ಶಕ್ತಿ ಹಾಸ್ಯಕ್ಕಿದೆ ಎಂದು ಹೇಳಿದರು. ಸನ್ಮಾನ ಸ್ವೀಕರಿಸಿದ ಚಲನಚಿತ್ರ ನಿರ್ದೇಶಕ, ನಟ ಯು. ಗೋವಿಂದೇಗೌಡ ಮಾತನಾಡಿ, ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳದೇ ಕೆಲಸ ಮಾಡಿದ್ದಲ್ಲಿ ಯಶಸ್ಸು ಸಿಗುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ. ಸಾಧಿಸಲೇಬೇಕು ಎಂಬ ಹಠದಿಂದ ಕಡಬಗೇರಿ ಎಂಬ ಕುಗ್ರಾಮದಿಂದ ಮಾಯಾನಗರಿ ಬೆಂಗಳೂರಿಗೆ ಹೋಗಿ ಇಂದು ರಿಯಾಲಿಟಿ ಶೋ ಮೂಲಕ ರಾಜ್ಯದ ಜನರ ಮನಸ್ಸು ಗೆದ್ದಿದ್ದೇನೆ.

Advertisement

ಕಲೆಗೆ ಎಲ್ಲಾ ವರ್ಗದ ಜನರನ್ನು ತನ್ನೆಡೆಗೆ ಸೆಳೆಯುವಂತಹ ಶಕ್ತಿಯಿದೆ. ರಂಗಭೂಮಿ ಮತ್ತು ಸಿನಿಮಾ ಎರಡು ಕ್ಷೇತ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿರುವ ನನಗೆ ನಿಮ್ಮ ಪ್ರೋತ್ಸಾಹ ಸದಾ ಇರಲಿ ಎಂದರು. ಸಾಧು ವೀರಶೈವ ಸಮಾಜದ ತಾಲೂಕಾಧ್ಯಕ್ಷ ಗುಂಡಗತ್ತಿ ಮಂಜುನಾಥ್‌ ಮಾತನಾಡಿ, ಮಧ್ಯ ಕರ್ನಾಟಕದ ಗ್ರಾಮೀಣ ಪ್ರದೇಶದ ಪ್ರತಿಭೆ ಗೋವಿಂದೇಗೌಡ ಇಂದು ದೇಶದ್ಯಾಂತ ಹೆಸರು ಮಾಡಿದ್ದಾರೆ. 

ಹಳ್ಳಿಗಳ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಕ್ಕಲ್ಲಿ  ಏನು ಬೇಕಾದರೂ ಸಾಧನೆ ಮಾಡಿ ತೋರಿಸುತ್ತಾರೆ ಎಂದು ಹೇಳಿದರು. ತಾಪಂ ಸದಸ್ಯ ಪ್ರಕಾಶ್‌, ಬಿಜೆಪಿ ಮುಖಂಡ ನಾಗನಗೌಡ ಪಾಟೀಲ್‌  ಮಾತನಾಡಿದರರು. ಗ್ರಾಪಂ ಅಧ್ಯಕ್ಷ ಪರುಶುರಾಮ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಅಧ್ಯಕ್ಷೆ ಬಿ.ಭಾಗ್ಯಮ್ಮ, ಪೆರಿಯಾರ್‌ ಮತ್ತು ಎಂ.ಪಿ.ಪ್ರಕಾಶ್‌ ಸೇವಾ ಸಂಸ್ಥೆ ಜಿಲ್ಲಾಧ್ಯಕ್ಷ ಪುಣಬಗಟ್ಟಿ ನಿಂಗಪ್ಪ, ಮುಖಂಡರಾದ ಮಲ್ಲಿಕಾರ್ಜುನಪ್ಪ, 

ಬುಳ್ಳನಗೌಡ, ಚನ್ನಬಸಪ್ಪ, ಸೀತಮ್ಮ, ವಕೀಲ ಕೆ.ಆನಂದ್‌, ಶಿಕ್ಷಕ ಸಿದ್ದಪ್ಪ, ರವಿಕುಮಾರ್‌, ಬಸವರಾಜ್‌, ಪಿಡಿಒ ದುರುಗಪ್ಪ, ಬಂದೋಳ್‌ ನಾಗರಾಜ್‌, ಗೆಳೆಯರ ಬಳಗದ ಎಸ್‌.ಎನ್‌. ಕುಮಾರ್‌, ಕೆ.ಉಚ್ಚೆಂಗೆಪ್ಪ, ಎಚ್‌ .ದೇವರಾಜ್‌, ತೆಲಿಗಿ ಉಮಾಕಾಂತ್‌, ಟಿ.ಬಿ.ರಾಜು, ಎಚ್‌.ಕರಿಬಸಪ್ಪ, ಈಶ್ವರನಾಯ್ಕ, ಎನ್‌.ಇಂದ್ರಪ್ಪ, ಹನುಮಂತ, ಭರತ್‌ ಇತರರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next