Advertisement
ಡಿನೋಟಿಫಿಕೇಷನ್ ಕೆಲಸ ಮಾತ್ರ ಸ್ಥಗಿತ ಮದ್ದೂರಿನಲ್ಲಿ ಪ್ರಚಾರ ಭಾಷಣ ಮಾಡಿದ ಕುಮಾರಸ್ವಾಮಿ, ಹಣ ಬಲದಿಂದ ಚುನಾವಣೆ ನಡೆಸುವುದು ಜೆಡಿಎಸ್ ಜಾಯಮಾನವಲ್ಲ. ಅದು ಬಿಜೆಪಿ ಜಾಯಮಾನ. ಹಣದಿಂದ ರಾಜಕಾರಣ ಮಾಡುವುದನ್ನು ಕಲಿಸಿಕೊಟ್ಟಿದ್ದೇ ಬಿಜೆಪಿ. ನಾವು ಜನರ ಪ್ರೀತಿ ವಿಶ್ವಾಸದ ಮೇಲೆ ರಾಜಕಾರಣ ಮಾಡುತ್ತಿದ್ದೇವೆ. ಹಣದಿಂದ ಅಧಿಕಾರ ಗಳಿಸಬೇಕೆಂಬ ಅಗತ್ಯ, ಅನಿವಾರ್ಯತೆ ನಮಗಿಲ್ಲ ಎಂದರು.
ರೈತರನ್ನು ಕರೆಸಿ ಸಂಪೂರ್ಣ ಸಾಲ ಮನ್ನಾದ ಬಗ್ಗೆ ಘೋಷಣೆ ಮಾಡಲಾಗುವುದು ಎಂದರು.
Related Articles
● ಎಚ್.ಡಿ.ಕುಮಾರಸ್ವಾಮಿ, ಸಿಎಂ
Advertisement
ಸರ್ಕಾರ ಸಂಪೂರ್ಣ ದಿವಾಳಿ, ಬೊಕ್ಕಸ ಖಾಲಿ ನಾಗಮಂಗಲದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ ಯಡಿಯೂರಪ್ಪ, ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದ್ದು, ಬೊಕ್ಕಸದಲ್ಲಿ ಹಣವಿಲ್ಲ. ಅಭಿವೃದ್ಧಿ ಯೋಜನೆಗಳಿಗೆ ದೇವಾಲಯಗಳ ಹುಂಡಿ ಹಣಕ್ಕೆ ಕೈ ಹಾಕಿದೆ.ಶ್ರೀರಂಗಪಟ್ಟಣದ ಶ್ರೀರಂಗನಾಥ, ಮೇಲು ಕೋಟೆ ಚೆಲುವನಾರಾಯಣಸ್ವಾಮಿ ಹುಂಡಿ ಹಣವನ್ನು ಸರ್ಕಾರ ತೆಗೆದುಕೊಂಡಿದೆ. ಕಳೆದ ಆರು ತಿಂಗಳಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ನಡೆದಿಲ್ಲ. ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಿರಲಿ, ಶವಸಂಸ್ಕಾರಕ್ಕೂ ಸರ್ಕಾರದ ಬಳಿ ಹಣವಿಲ್ಲ. ಇಂಥ ಸರ್ಕಾರದಿಂದ ಯಾವ ರೀತಿ ಅಭಿವೃದಿಟಛಿ ನಿರೀಕ್ಷಿಸಲು ಸಾಧ್ಯ ಎಂದರು. ರೈತರ ಸಂಪೂರ್ಣ
ಸಾಲ ಮನ್ನಾ ಮಾಡುವಲ್ಲಿ ವಿಫಲವಾಗಿರುವ ಸಮ್ಮಿಶ್ರ ಸರ್ಕಾರ ಮೊದಲು ಸಾಲ ಮನ್ನಾ ಮಾಡುವ ಸಾಮರ್ಥ್ಯ ಪ್ರದರ್ಶಿಸುವಂತೆ ಸವಾಲು ಹಾಕಿದರು. ಚೆಲುವರಾಯಸ್ವಾಮಿಯನ್ನು ನಾಗ ಮಂಗಲದಲ್ಲಿ ಸೋಲಿಸಿ ಅವಮಾನ ಮಾಡಿದ್ದಾರೆ. ಅವರ ಬೆಂಬಲಿಗರೆಲ್ಲರೂ ಜೆಪಿಗೆ ಮತ ಹಾಕಿ ಗೆಲ್ಲಿಸಬೇಕು. ಇದರಿಂದ ಅವರಿಗೆ ಅವಮಾನ ಮಾಡಿದವರಿಗೆ ಪಾಠ ಕಲಿಸಿದಂತಾಗುವುದು ಎಂದು ತಿಳಿಸಿದರು. ಬಹಿರಂಗ ಸಭೆಯಲ್ಲಿ ಯಡಿಯೂರಪ್ಪ ಭಾಷಣ ಮಾಡುವ ವೇಳೆ ಬಿಜೆಪಿ ಕಾರ್ಯಕರ್ತರು ಚೆಲುವರಾಯಸ್ವಾಮಿ ಪರ ಜೈಕಾರ ಕೂಗಿದರು. ಮದ್ದೂರಿನಲ್ಲಿ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಶನಿ, ರಾಹು, ಕೇತು ಒಂದಾಗಿದ್ದಾಗಿ ಸ್ವತಃ ಅವರೇ ಹೇಳಿದ್ದು ಶನಿ, ರಾಹು, ಕೇತು ಯಾರೆಂಬುದು ಈಗಾಗಲೇ ಜನರಿಗೆ ಅರಿವಾಗಿದೆ. ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಸ್ವಲ್ಪ ಅಂತರದಿಂದ ಗೆದ್ದು ತಮ್ಮ ಮರ್ಯಾದೆ ಉಳಿಸಿಕೊಂಡಿದ್ದಾರೆ ಎಂದರು. ವಿಧಾನಸೌಧದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಸಭೆಗೆ ಹಾಜರಾಗದೆ ಜನಾಂಗಕ್ಕೆ ಅಪಮಾನವೆಸಗಿದ್ದಾರೆ. ವಾಲ್ಮೀಕಿ ಪ್ರಶಸ್ತಿ ಸ್ವೀಕರಿಸಲು ಆಗಮಿಸದ ದೇವೇಗೌಡ ಅವರು ಕ್ಷಮೆಯಾಚಿಸಬೇಕು.
● ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ