Advertisement
ಸದಾಶಿವನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚದುರಂಗ ಆಡಿದವರೆಲ್ಲಾ ಮುಳುಗಿಹೋಗಿದ್ದಾರೆ. ಯಾರ್ಯಾರು ಏನು ಕೆಲಸ ಮಾಡಿದ್ದಾರೆ ಮತ್ತು ಜನರಿಗೆ ಅದರಿಂದ ಎಷ್ಟು ಲಾಭವಾಗಿದೆ ಎನ್ನುವುದರ ಆಧಾರದ ಮೇಲೆ ಈ ಬಾರಿಯ ಚುನಾವಣೆ ತೀರ್ಮಾನ ಆಗಲಿದೆ. ಜನರೇ ಪಟ್ಟಿ ಮಾಡಿ, ಅಂಕ ನೀಡಲಿದ್ದಾರೆ. ರಣರಂಗವೂ ಇಲ್ಲ, ಚದುರಂಗವೂ ಇಲ್ಲ’ ಎಂದು ಸೂಚ್ಯವಾಗಿ ಹೇಳಿದರು.
Related Articles
Advertisement
ನಿಖಿಲ್ ಅಳು ಅಂದ್ರೆ ಅಳ್ತಾನೆ, ನಗು ಎಂದ್ರೆ ನಗ್ತಾನೆ:
ರಾಮನಗರ: “ನಿಖಿಲ್ ಕುಮಾರಸ್ವಾಮಿ ಎಳೆಯ ಕಂದ, ಇಲ್ಲಿ ನಿಲ್ಲು ಎಂದರೂ ನಿಲ್ಲುತ್ತಾನೆ, ಅಲ್ಲಿ ನಿಲ್ಲು ಎಂದರೂ ನಿಲ್ಲುತ್ತಾನೆ, ನಗು ಎಂದರೆ ನಗುತ್ತಾನೆ, ಅಳು ಎಂದರೆ ಅಳುತ್ತಾನೆ. ಪಾಪ ಅವನ ಬಗ್ಗೆ ನಾನು ಮಾತನಾಡುವುದಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಚನ್ನಪಟ್ಟಣ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸ್ಪರ್ಧೆ ಮಾಡಿರುವುದಾಗಿ ಹೇಳಿದ್ದಾರೆ. ಅವರು ಒತ್ತಡಕ್ಕೆ ಸ್ಪರ್ಧಿಸಿದ್ದಾರೆಯೇ ಹೊರತು ಜನರ ಸೇವೆಗಾಗಿ ಅಲ್ಲ. ಜನ ಉಪಕಾರ ಸ್ಮರಣೆಯನ್ನು ಸ್ಮರಿಸುತ್ತಾರೆ ಎಂಬುದಕ್ಕೆ ಕಳೆದ ವರ್ಷ ಅವರ ಪುತ್ರನನ್ನು ಇಕ್ಬಾಲ್ ವಿರುದ್ಧ ಸೋಲಿಸಿದ್ದೇ ಸಾಕ್ಷಿ. ಕುಮಾರಣ್ಣ ಮತ್ತು ಅನಿತಕ್ಕ ರಾಮನಗರದಲ್ಲಿ ಕೆಲಸ ಮಾಡಿದ್ದರೆ ಜನತೆ ಯಾಕೆ ಸೋಲಿಸುತ್ತಿದ್ದರು ಎಂದು ಪ್ರಶ್ನಿಸಿದರು.
ಯೋಗೇಶ್ವರ್ ರೆಡಿಮೇಡ್ ಗಂಡು. ಅವರಿಗೆ ನಿಮ್ಮ ಕಷ್ಟ, ಸುಖ, ನೋವು ಗೊತ್ತಿದೆ. ನಿಮ್ಮ ಹಳ್ಳಿಗಳು ಗೊತ್ತಿದೆ. ಅವರಿಗೆ ಬೆಂಬಲವಾಗಿ ಸರಕಾರವಿದೆ. ಅವರ ಬೆನ್ನಿಗೆ ಈ ಡಿ.ಕೆ. ಶಿವಕುಮಾರ್ ಇದ್ದಾನೆ ಎಂದರು.