ಬೆಂಗಳೂರು : ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವಿನ ದ್ವೇಷದ ರಾಜಕಾರಣಕ್ಕೆ ಡಿ.ಜೆ.ಹಳ್ಳಿ ಘಟನೆಯೇ ನಿದರ್ಶನ. ಇದರ ಪರಿಣಾಮವಾಗಿ ಉಪ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಹುಲಿಯಾ ಕಾಡು ಸೇರಲಿದ್ದು, ಬಂಡೆ ಛಿದ್ರವಾಗಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಲೇವಡಿ ಮಾಡಿದರು.
ಬಿಜೆಪಿ ನಗರ ಕಚೇರಿಯಲ್ಲಿ ಬುಧವಾರ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಹಲವು ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಪೈಪೋಟಿ ನಡೆಯುತ್ತಿದೆ. ಶಿರಾ ಕ್ಷೇತ್ರದಲ್ಲಿ ಅಭ್ಯರ್ಥಿ ಟಿ.ಬಿ.ಜಯಚಂದ್ರರನ್ನು ಸೋಲಿಸಲು ಡಿ.ಕೆ.ಶಿ. ಹಾಗೂ ಆರ್.ಆರ್.ನಗರದಲ್ಲಿ ಕುಸುಮಾ ಅವರನ್ನು ಸೋಲಿಸಲು ಸಿದ್ದರಾಮಯ್ಯ ಸ್ಪರ್ಧೆಗಿಳಿದಿದ್ದಾರೆ ಎಂದರು.
ಸದ್ಯ ಬಿಜೆಪಿಗೆ ಕಾಂಗ್ರೆಸ್, ಜೆಡಿಎಸ್ ಮುಖಂಡರ ಸೇರ್ಪಡೆ ಆರಂಭವಷ್ಟೇ. ಮುಂದೆ ಉಭಯ ಪಕ್ಷಗಳ ಘಟಾನುಘಟಿ ನಾಯಕರು, ಜನಪ್ರತಿನಿಧಿಗಳು ಪಕ್ಷ ಸೇರಲಿದ್ದು, ಈಗಾಗಲೇ ಹಲವರು ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ. ಸಿದ್ದ ರಾಮಯ್ಯನವರ ಸಮಾಜ ಒಡೆದು ಆಳುವ ನೀತಿ, ಡಿ.ಕೆ. ಶಿವಕುಮಾರ್ ಅವರ ಗೂಂಡಾಗಿರಿ ಮನಸ್ಥಿತಿ, ಎಚ್.ಡಿ. ದೇವೇಗೌಡರು ಹಾಗೂ ಮಕ್ಕಳ ಕುಟುಂಬ ರಾಜಕಾರಣದಿಂದ ರೋಸಿ ಹೋದ ವರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ.
– ನಳಿನ್ ಕುಮಾರ್ ಕಟೀಲು, ರಾಜ್ಯ ಬಿಜೆಪಿ ಅಧ್ಯಕ್ಷ