Advertisement
ತಾಲೂಕಿನ ವಿವಿಧೆಡೆ ಭಾನುವಾರ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ, ಮತ್ತಿತರರೊಂದಿಗೆ ಮತಯಾಚಿಸಿ ಅವರು ಮಾತನಾಡಿ, ಕ್ಷೇತ್ರದಲ್ಲಿ ಮೂರು ದಿನದ ಹಿಂದೆ ಇದ್ದ ಟ್ರೆಂಡ್ ಈಗಿಲ್ಲ. ನಿಮಗೆ ನಿಮ್ಮ ಸ್ಥಾನ ಸಿಗುತ್ತೆ ಅಂತ ನಾನು ಸಿ.ಪಿ.ಯೋಗೇಶ್ವರ್ ಅವರಿಗೆ ಹೇಳಿದ್ದೆ. ಆದರೆ, ಅವರು ಒಳಒಪ್ಪಂದ ಮಾಡಿಕೊಂಡು ಪಕ್ಷಾಂತರ ಮಾಡಿದರು ಎಂದು ಆರೋಪಿಸಿದರು.
ಚನ್ನಪಟ್ಟಣ ಮತ್ತು ಮದ್ದೂರು ಮಾರ್ಗ ಮಧ್ಯೆ ರೈಲ್ವೆ ನಿಲ್ದಾಣ ಮಾಡಿದರೆ 15,000 ಯುವಕರಿಗೆ ಉಪಯೋಗ ಆಗುತ್ತೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಸೋಮಣ್ಣ ಅವರ ಬಳಿ ಪ್ರಸ್ತಾಪಿಸದಾಗ ತಕ್ಷಣವೇ ಕಾರ್ಯರೂಪಕ್ಕೆ ತರುತ್ತೇನೆಂದು ಭರವಸೆ ನೀಡಿದರು.