Advertisement
ಸೋಮವಾರ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ತಾಲೂಕಿನ ಗುತ್ತರಗಿ ತಾಂಡಾದ ಯುವಕರು ಕಾಂಗ್ರೆಸ್, ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದ ಸಂದರ್ಭದಲ್ಲಿ ಅವರು ಮಾತನಾಡಿದರು.
Related Articles
Advertisement
ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಬಿ.ಎಚ್. ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಡಾ| ಅನಿಲ ನಾಯಕ, ಮಲ್ಲು ಪಟ್ಟಣಶೆಟ್ಟಿ, ಮಲ್ಲು ಪೂಜಾರಿ ಸೇರಿದಂತೆ ಗುತ್ತರಗಿ ತಾಂಡಾದ ಆನಂದ ಪವಾರ, ರೋಹಿತ್ ರಾಠೊಡ, ತುಕಾರಾಮ ಚವ್ಹಾಣ, ಕಿಸನರಾವ್ ರಾಠೊಡ, ಅನಿಲ ಪವಾರ, ಪಂಡಿತ ನಾಯಕ, ಶಿವಾಜಿ ಪವಾರ ಸೇರಿದಂತೆ ಇತರರು ಇದ್ದರು.
ಶಾಸಕ ಶಿವಾನಂದ ಸಮ್ಮುಖ ಕಾಂಗ್ರೆಸ್‌ಗೆ ಸೇರ್ಪಡೆ
ಬಿಜೆಪಿ ದುರಾಡಳಿತದಿಂದ ಬೇಸತ್ತು ಅನೇಕರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದಾರೆ. ಪ್ರತಿ ಹಳ್ಳಿ, ಹಳ್ಳಿಯಲ್ಲಿಯೂ ಅನೇಕರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಬಸವನಬಾಗೇವಾಡಿಯ ಶಾಸಕ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಸಾಸಾಬಾಳ ಗ್ರಾಮದಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಅವರು ಯುವಕರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.
ಬಿಜೆಪಿಗೆ ಯಾರು ಯಾವತ್ತು ಮತ ಹಾಕಬೇಡಿ. ಭ್ರಷ್ಟ ಬಿಜೆಪಿ ಸರ್ಕಾರದಿಂದ ರಾಜ್ಯ ಯಾವತ್ತೂ ಅಭಿವೃದ್ಧಿಯಾಗುವುದಿಲ್ಲ. ದಿ| ಎಂ.ಸಿ. ಮನಗೂಳಿ ಅತ್ಯಂತ ಸಜ್ಜನಿಕೆಯ ವ್ಯಕ್ತಿ. ಅವರ ನೀರಾವರಿ ಯೋಜನೆಗಳು ಇವತ್ತಿಗೂ ಶಾಶ್ವತವಾಗಿ ಈ ಕ್ಷೇತ್ರದಲ್ಲಿ ಉಳಿದಿವೆ. ನಮ್ಮ ಹಿಂದಿನ ಹಿರಿಯರು ತಪ್ಪು ಮಾಡಿದ್ದರಿಂದ ನಮ್ಮ ಬರದ ನಾಡಾಗಿತ್ತು. ನೀರಾವರಿ ಕ್ಷೇತ್ರ ಅಭಿವೃದ್ಧಿಯಾಗಿದ್ದಿಲ್ಲ. ಸಿಂದಗಿ ಮತಕ್ಷೇತ್ರದ ಎಲ್ಲ ಹಳ್ಳಿಗಳು ಬಿ ಸ್ಕೀಂ ನೀರಾವರಿ ಯೋಜನೆಯಲ್ಲಿ ಇದ್ದವು. ದಿ| ಎಂ.ಸಿ. ಮನಗೂಳಿ ಅವರ ಹೋರಾಟದಿಂದ ಎ ಸ್ಕಿಮ್ ತಂದು ಈ ಭಾಗದ ನೀರಾವರಿ ಮಾಡಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಈ ರಾಜ್ಯ ಅತ್ಯಂತ ಸುಭದ್ರವಾಗಿ ಕಂಡಿತ್ತು. ಮತ್ತೊಮ್ಮೆ ಮನಗೂಳಿ ಮನೆತನದ ಅಶೋಕ ಮನಗೂಳಿಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.
ಪಕ್ಷದ ಮುಖಂಡರಾದ ಹನುಮಂತ್ರಾಯಗೌಡ ಚಿಂಚೋಳಿ, ಬಾಬುಗೌಡ ಬಿರಾದಾರ, ಶಾಂತಗೌಡ ಬಿರಾದಾರ, ಶಿವು ಚಿಂಚೋಳ್ಳಿ, ಮುರಗೆಪ್ಪಗೌಡ ರದ್ದೆವಾಡಗಿ, ಮಲ್ಲಣ್ಣ ಸಾಲಿ, ಎನ್.ಎಸ್. ಪಾಟೀಲ ಡಂಬಳ, ಸಂಗನಗೌಡ ಪಾಟೀಲ ಕರವಿನಾಳ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಶಿವು ಹತ್ತಿ, ಬಸವರಾಜ ಮಾರಲಬಾವಿ, ಬೀಮರಾಯ ಅಮ್ಮರಗೋಳ, ಶ್ರೀಶೈಲ ಜಾಲವಾದಿ, ರಾಮಚಂದ್ರ ರಾಠೊಡ, ಮೈಬೂ ದೊಡಮನಿ, ಮಡು ನಾಯ್ಕೊಡಿ, ರಾಮನಗೌಡ ಪಾಟೀಲ, ರಾಜುಗೌಡ ಪಾಟೀಲ, ಸಿದ್ದಣ್ಣ ಪೂಜಾರಿ, ಮುನ್ನಾ ಯಡ್ರಾಮಿ, ಶಾಂತಪ್ಪ ಹರಿಜನ, ಮಾಂತಗೌಡ ಬಿರಾದಾರ, ಪ್ರವೀಣ ತಳವಾರ, ಶರಣಪ್ಪ ತಳವಾರ, ಶರಣಪ್ಪ ಹೊಸಮನಿ, ಉಮೇಶ ಪಾಟೀಲ, ಗೋಲ್ಲಾಳಪ್ಪ ಬಂಥಾಳ, ಮಹಾಂತೇಶ ಕೆಳಗಿನಮನಿ, ರಾಜು ಹೊಳಕುಂದಿ ಸೇರಿದಂತೆ ಇತರರು ಇದ್ದರು