Advertisement

ಬೆಂಗಳೂರು : ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಎ. 17ರಂದು ಮತದಾನ ನಡೆಯಲಿದೆ. ಇವುಗಳ ಫ‌ಲಿತಾಂಶ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಲಾರದು. ಆದರೆ ಕೆಲವು ನಾಯಕರ ಶಕ್ತಿ, ಸಂಘಟನ ಕೌಶಲ, ದೌರ್ಬಲ್ಯಗಳನ್ನು ಒರೆಗೆ ಹಚ್ಚುವುದು ಖಚಿತ.

Advertisement

ಬಿಜೆಪಿ
ಗೆದ್ದರೆ :
– ಉತ್ತರ ಕರ್ನಾಟಕದಲ್ಲಿ ಸಿಎಂ ಬಿಎಸ್‌ವೈ ಶಕ್ತಿ ವೃದ್ಧಿ.
– ನಾಯಕತ್ವ ಬದಲಾವಣೆ ಚರ್ಚೆಗೆ ತೆರೆ ಸಾಧ್ಯತೆ.
– ತಾ.ಪಂ, ಜಿ.ಪಂ. ಚುನಾವಣೆ ಯಲ್ಲಿ ಬಿಜೆಪಿಗೆ ಅನುಕೂಲ.

ಸೋತರೆ
– ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ವಾದಕ್ಕೆ ಪುಷ್ಟಿ.
– ನಾಯಕತ್ವದ ಬದಲಾವಣೆ ಒತ್ತಡ ಹೆಚ್ಚಳ.
– ಬಿ.ವೈ. ವಿಜಯೇಂದ್ರ ವೇಗಕ್ಕೆ ಬ್ರೇಕ್‌.

ಕಾಂಗ್ರೆಸ್‌
ಗೆದ್ದರೆ :
– ಕಾರ್ಯಕರ್ತರು, ಮುಖಂಡ ರಲ್ಲಿ ಹುಮ್ಮಸ್ಸು ಹೆಚ್ಚಳ.
– ಡಿ.ಕೆ.ಶಿ., ಸಿದ್ದರಾಮಯ್ಯ, ಖರ್ಗೆ ವರ್ಚಸ್ಸು ವೃದ್ಧಿ.
– 2023ರ ವಿಧಾನಸಭೆ ಚುನಾವಣೆಗೆ ಹೊಸ ಹುರುಪು.

ಸೋತರೆ
– ಪಕ್ಷದಲ್ಲಿ ಮತ್ತಷ್ಟು ಒಳಕಲಹ
– ಬಿಜೆಪಿ ವಿರುದ್ಧ ಹೋರಾಟಕ್ಕೆ ಅಸ್ತ್ರವೇ ಇಲ್ಲ.
– ಡಿ.ಕೆ.ಶಿ., ಸಿದ್ದರಾಮಯ್ಯ, ಖರ್ಗೆಗೆ ಹಿನ್ನಡೆ.
– ಪಕ್ಷದಲ್ಲಿ ನಾಯಕತ್ವ ಹೋರಾಟ.

Advertisement
Advertisement

Udayavani is now on Telegram. Click here to join our channel and stay updated with the latest news.

Next