ವಿಶ್ವದ ನಂಬರ್ ವನ್ ಬ್ಯಾಡ್ಮಿಂಟನ್ ಆಟಗಾರನಾಗಿರುವ ಕೆಂಟೊ ಮೊಮೊಟ ಶನಿವಾರದ ಸೆಮಿಫೈನಲ್‌ನಲ್ಲಿ ತೈವಾನ್‌ನ ವಾಂಗ್ ಜು ವೀ ಅವರನ್ನು 21-17, 21-12 ನೇರ ಗೇಮ್‌ಗಳಲ್ಲಿ ಮಣಿಸಿದರು.
Advertisement
ಇನ್ನೊಂದು ಸೆಮಿ ಫೈನಲ್‌ನಲ್ಲಿ ವಿಶ್ವದ ನಂ. 8 ಆಟಗಾರ ಗಿಂಟಿಂಗ್ 21-15, 21-15ರಿಂದ ಚೀನದ ಹಾಲಿ ಒಲಿಂಪಿಕ್ ಚಾಂಪಿಯನ್ ಚೆಂಗ್ ಲಾಂಗ್ ವಿರುದ್ಧ ಜಯ ಸಾಧಿಸಿದರು.
ವನಿತಾ ಫೈನಲ್‌ನಲ್ಲಿ ವಿಶ್ವದ ನಂ.2 ಆಟಗಾರ್ತಿ ಚೀನದ ಚೆನ್ ಯುಫಿ ಮತ್ತು ತೈವಾನ್‌ನ ಅಗ್ರ ಶ್ರೇಯಾಂಕಿತೆ ತೈ ಜು ವಿಂಗ್ ನಡುವೆ ನಡೆಯಲಿದೆ. ಚೆನ್ ಯುಫಿ ಜಪಾನಿನ ಅಕಾನೆ ಯಮಾಗುಚಿ ಅವರನ್ನು 21-18, 21-9 ಅಂಕಗಳಿಂದ, ತೈ ಜು ವಿಂಗ್ ಮತ್ತೋರ್ವ ಜಪಾನಿ ಆಟಗಾರ್ತಿ ನೊಜೊಮಿ ಒಕುಹಾರಾ ಅವರನ್ನು 21-15, 21-18 ಅಂತರದಿಂದ ಮಣಿಸಿದರು.