Advertisement

ಬಿಡಬ್ಲ್ಯುಎಫ್ ವರ್ಲ್ಡ್ ಟೂರ್‌ ಬ್ಯಾಡ್ಮಿಂಟನ್‌ : ಸಿಂಧು, ಶ್ರೀಕಾಂತ್‌ ಸೋಲಿನ ಆರಂಭ

11:13 PM Jan 27, 2021 | Team Udayavani |

ಬ್ಯಾಂಕಾಕ್‌: ಭಾರತ ಸ್ಟಾರ್‌ ಶಟ್ಲರ್‌ಗಳಾದ ಪಿ.ವಿ. ಸಿಂಧು ಮತ್ತು ಕೆ. ಶ್ರೀಕಾಂತ್‌ “ಬಿಡಬ್ಲ್ಯುಎಫ್ ವರ್ಲ್ಡ್ ಟೂರ್‌ ಬ್ಯಾಡ್ಮಿಂಟನ್‌ ಟೂರ್ನಿ’ಯ ಮೊದಲ ಪಂದ್ಯದಲ್ಲೇ ಮುಗ್ಗರಿಸಿದ್ದಾರೆ.

Advertisement

ಬುಧವಾರ ನಡೆದ “ಬಿ’ ವಿಭಾಗದ ವನಿತಾ ಸಿಂಗಲ್ಸ್‌ ಪಂದ್ಯದಲ್ಲಿ ಪಿ.ವಿ. ಸಿಂಧು 21-19, 12-21, 17-21 ಅಂತರದಿಂದ ವಿಶ್ವದ ನಂಬರ್‌ ವನ್‌ ಆಟಗಾರ್ತಿ ತೈ ಜು ಯಿಂಗ್‌ ವಿರುದ್ಧ ಸೋಲನುಭವಿಸಿದರು. ಇದು ತೈ ಜು ಯಿಂಗ್‌ ವಿರುದ್ಧ ಆಡಿದ 21 ಪಂದ್ಯಗಳಲ್ಲಿ ಸಿಂಧು ಅನುಭವಿಸಿದ 16ನೇ ಸೋಲಾಗಿದೆ.

ಮೊದಲ ಗೇಮ್‌ನಲ್ಲಿ ಭರ್ಜರಿ ನಿರ್ವಹಣೆ ತೋರಿ ಗೆಲುವು ದಾಖ ಲಿಸಿದ ಸಿಂಧು, ದ್ವಿತೀಯ ಗೇಮ್‌ನಲ್ಲಿ ಇದೇ ರಭಸ ಕಾಯ್ದುಕೊಳ್ಳುವಲ್ಲಿ ವಿಫ‌ಲರಾದರು. ನಿರ್ಣಾಯಕ ಗೇಮ್‌ನಲ್ಲಿ ಪ್ರಬಲ ಹೋರಾಟ ನಡೆಸಿದರೂ ಅದೃಷ್ಟ ಕೈಕೊಟ್ಟಿತು. ಎದುರಾಳಿಯ ಆಕ್ರಮಣಕಾರಿ ಆಟಕ್ಕೆ ಶರಣಾದರು.

2018ರಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಜಯಿಸಿದ್ದ ಸಿಂಧು ಇನ್ನು ತವರಿನ ನೆಚ್ಚಿನ ಆಟಗಾರ್ತಿ ರಚನೋಕ್‌ ಇಂತಾನನ್‌ ವಿರುದ್ಧ ಆಡಲಿದ್ದಾರೆ.

ಎಡವಿದ ಶ್ರೀಕಾಂತ್‌ :

Advertisement

ತೀವ್ರ ಪೈಪೋಟಿಯಿಂದ ಕೂಡಿದ ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಕೆ. ಶ್ರೀಕಾಂತ್‌ 21-15, 16-21, 18-21 ಗೇಮ್‌ಗಳಿಂದ  ಡೆನ್ಮಾರ್ಕ್‌ನ ಆ್ಯಂಡ್ರೆಸ್‌ ಆ್ಯಂಟನ್ಸೆನ್‌ ವಿರುದ್ಧ ಪರಾಭವಗೊಂಡರು. ಇವರ ಹೋರಾಟ 77 ನಿಮಿಷಗಳ ಕಾಲ ಸಾಗಿತು. ಶ್ರೀಕಾಂತ್‌ ಅವರ ಮುಂದಿನ ಎದುರಾಳಿ ಚೈನೀಸ್‌ ತೈಪೆಯ ವಾಂಗ್‌ ಜು ವೀ.

Advertisement

Udayavani is now on Telegram. Click here to join our channel and stay updated with the latest news.

Next