ಮಹಾನಗರ: ಬಿ.ವಿ.ಕಾರಂತ ಅವರು ಜಗತ್ತಿನ ಶ್ರೇಷ್ಠ ನಿರ್ದೇ ಶಕ ಮಾತ್ರವಲ್ಲದೆ ಮಾನವೀಯ ದೃಷ್ಟಿ ಕೋನವಿದ್ದ ವ್ಯಕ್ತಿಯಾಗಿದ್ದರು ಎಂದು ಬಿ.ವಿ.ಕಾರಂತ ರಂಗ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಎಂ. ಜಯರಾಮ ಪಾಟೀಲ ಹೇಳಿದರು.
ಮಂಚಿಯ ಬಿ.ವಿ. ಕಾರಂತ ರಂಗ ಭೂಮಿಕಾ ಟ್ರಸ್ಟ್ ವತಿಯಿಂದ, ಕರ್ನಾಟಕ ರಾಜ್ಯ ಕಂದಾಯ ಇಲಾಖಾ ನೌಕರರ ಸಂಘ, ಮಂಗಳೂರು ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಸಹಯೋಗದಲ್ಲಿ ಬುಧವಾರ ನಗರದ ಕುದು¾ಲ್ ರಂಗರಾವ್ ಪುರಭವನದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಬಿ.ವಿ.ಕಾರಂತ ನೆನಪಿನ ನಾಟಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಬಿ.ವಿ.ಕಾರಂತ ಅವರ ಹೆಸರು ಮುಂದಿನ ಪೀಳಿಗೆಗೆ ಉಳಿಯು ವಂತಾಗಬೇಕು.ಅಲ್ಲದೆ, ಅವರು ಹುಟ್ಟೂರು ಮಂಚಿಯ ಬಾಬುಕೋಡಿಯನ್ನು ನೆನಪಿಸಿಕೊಳ್ಳುವಂತಾಗಬೇಕು. ರಂಗಭೂಮಿಗೆ ಬರುವ ಯುವಕರಲ್ಲಿ ಇಬ್ಬರಿಗೆ ಕಾರಂತರ ಹೆಸರಿನಲ್ಲಿ ತಲಾ ಒಂದೊಂದು ಲಕ್ಷ ರೂ.ಗಳಂತೆ ಫೆಲೋಶಿಪ್ ನೀಡಲು ತೀರ್ಮಾನಿಸಲಾ ಗಿದೆ. ಮುಂದಿ ನ ದಿನಗಳಲ್ಲಿ ಇದಕ್ಕೆ ಚಾಲನೆ ಸಿಗಲಿದೆ ಎಂದರು. ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅಧ್ಯ ಕ್ಷತೆ ವಹಿಸಿದ್ದರು. ಉದ್ಯಮಿ ಸೂರ್ಯನಾರಾಯಣ ರಾವ್ ಪಿ., ಸ್ಮರಣ ಸಂಚಿಕೆ ಸಂಪಾದಕ ಅನಂತಕೃಷ್ಣ ಹೆಬ್ಟಾರ್ ಉಪಸ್ಥಿತರಿದ್ದರು. ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಸ್ವಾಗತಿಸಿದರು. ಸಭಾಕಾರ್ಯಕ್ರಮದ ಬಳಿಕ ಪ್ರಭಾಕರ ಶಿಶಿಲ ಅವರ ಕಾದಂಬರಿ ಆಧಾರಿತ ಮತ್ಸéಗಂಧಿ ನಾಟಕವನ್ನು ಬೆಂಗಳೂರಿನ ರೂಪಾಂತರ ತಂಡದವರು ಪ್ರದರ್ಶಿಸಿದರು.
ಸ್ಮರಣ ಸಂಚಿಕೆ ಬಿಡುಗಡೆ
ದಶಮಾನೋತ್ಸವ ಸ್ಮರಣ ಸಂಚಿಕೆ “ರಂಗ ಭೂಮಿಕಾ’ವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಬಿಡುಗಡೆಗೊಳಿಸಿ ಮಾತನಾಡಿದರು.