Advertisement

ಬೇರೆ ರಾಜ್ಯದಲ್ಲಿ ತೊಗರಿ ಖರೀದಿ ಪುನರಾರಂಭ

05:09 PM May 10, 2017 | Team Udayavani |

ಕಲಬುರಗಿ: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಕಳೆದ ಏ.22ಕ್ಕೆ ಕರ್ನಾಟಕ ರಾಜ್ಯದಲ್ಲಿ ಸ್ಥಗಿತವಾಗಿದೆ. ಆದರೆ ನೆರೆಯ ಮಹಾರಾಷ್ಟ್ರ , ಗುಜರಾತ್‌ ರಾಜ್ಯದಲ್ಲಿ ಮಾತ್ರ ಮತ್ತೆ ತೊಗರಿ ಖರೀದಿ ಕೇಂದ್ರಗಳನ್ನು ಪುನರಾರಂಭ ಮಾಡುವ ಮೂಲಕ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸಿರುವುದನ್ನು ಮತ್ತೆ ಸಾಬೀತು ಮಾಡಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಆರೋಪಿಸಿದ್ದಾರೆ. 

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್‌ ಹಾಗೂ ಮಹಾರಾಷ್ಟ್ರದಲ್ಲಿ ಮಾತ್ರ ಖರೀದಿ ವಿಸ್ತರಿಸಿ ಕರ್ನಾಟಕ ರಾಜ್ಯದಲ್ಲಿ ಮಾಡದೇ ಇರುವುದು ಈ ಭಾಗದ ರೈತರಿಗೆ ಮಾಡಿದ ದೊಡ್ಡ ಅನ್ಯಾಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಹಾರಾಷ್ಟ್ರ ಮತ್ತು ಗುಜರಾತ್‌ದಲ್ಲಿ ಬಿಜೆಪಿ ಸರ್ಕಾರವಿದೆ ಎನ್ನುವ ಕಾರಣಕ್ಕೆ ಖರೀದಿ ಮತ್ತೆ ಆರಂಭಿಸಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಇದೆ ಎನ್ನುವ ಕಾರಣಕ್ಕೆ ಖರೀದಿ ಮತ್ತೆ ಪುನರಾರಂಭಿಸಿಲ್ಲ. ಇದು ಬಿಜೆಪಿ ರೈತರ ಪರ ಇಲ್ಲ ಎನ್ನುವುದರ ಜತೆಗೆ ಸಂವಿಧಾನ ಬದ್ಧವಾಗಿ ನಡೆದುಕೊಳ್ಳುವುದಿಲ್ಲ ಎಂಬುದನ್ನು ನಿರೂಪಿಸಿದೆ. ಅದೇ ರೀತಿ ರಾಜ್ಯ ಸರ್ಕಾರವು ಖರೀದಿ ಮತ್ತೆ ವಿಸ್ತರಿಸಬೇಕೆಂದು ಕೇಂದ್ರಕ್ಕೆ ಪತ್ರ ಬರೆದು ಕೈ ತೊಳೆದುಕೊಂಡಿದೆ ಎಂದರು. 

ಪಡಿತರ ವಿತರಣೆಗೆ ಬೇಕಾಗಿರುವ ತೊಗರಿ ಬೇಳೆಯನ್ನು ರಾಜ್ಯ ಸರ್ಕಾರ ರೈತರಿಂದ ಖರೀದಿಸದೆ ಅನ್ಯ ರಾಜ್ಯಗಳಿಂದ ಖರೀದಿಗಾಗಿ ಟೆಂಡರ್‌ ಕರೆದಿದೆ. ಇದನ್ನೆಲ್ಲ ಅವಲೋಕಿಸಿದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ತೊಗರಿ ಖಜಣ ಹೈದ್ರಾಬಾದ ಕರ್ನಾಟಕ ಭಾಗದ ರೈತರ ಬಗ್ಗೆ ಎಳ್ಳು ಕಾಳಷ್ಟು ಕಾಳಜಿ ಇಲ್ಲದಿರುವುದು ಸ್ಪಷ್ಟಪಡಿಸುತ್ತದೆ ಎಂದು ಹೇಳಿದರು. 

ಕಳೆದ ಜನವರಿ ಕೊನೆ ವಾರದಲ್ಲಿ ನಗರದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ತೊಗರಿ ಬೆಂಬಲ ಬೆಲೆ ಹೆಚ್ಚಿಸುವುದು ಜತೆಗೆ ಕನಿಷ್ಠ ಸಾವಿರ ರೂ. ಹೆಚ್ಚಳ ಮಾಡುವ ಕುರಿತಾಗಿ ನಿಯೋಗ ಹೋಗುವುದಾಗಿ ಹೇಳಲಾಗಿತ್ತು. ನಂತರ ಇಂದಿನ ದಿನದವರೆಗೂ ಚಕಾರವೆತ್ತಿಲ್ಲ.

Advertisement

ಬಿಜೆಪಿ ಆತಂರಿಕ ಕಚ್ಚಾಟದಿಂದ ಮುಖಂಡರೆಲ್ಲರೂ ನರಸತ್ತಂತಾಗಿದ್ದಾರೆ ಎಂದು ಲೇವಡಿ ಮಾಡಿದರು. ನಿಯೋಗ ಹೋಗದಿದ್ದರೂ ಪರ್ವಾಗಿಲ್ಲ. ಕೊನೆ ಪಕ್ಷ ತೊಗರಿ ಖರೀದಿ ಮತ್ತೂಂದು ಅವಧಿಗೆ ವಿಸ್ತರಣೆ ಮಾಡಲು ರಾಜ್ಯ ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರಲಿಲ್ಲ.

ಇನ್ನೂ ಕಲಬುರಗಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೂ ಸಂಸತ್ತಿನಲ್ಲಿ ತೊಗರಿ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡಲು ಮುಂದಾಗಿಲ್ಲ. ಜತೆಗೆ ನವದೆಹಲಿಯಲ್ಲಿ ರಾಜ್ಯದ ಏಳು ಜನ ಸಂಸದರೊಂದಿಗೆ ಕೊನೆ ಪಕ್ಷ ಸಾಂಕೇತಿಕವಾಗಿ ಪ್ರತಿಭಟನೆಯನ್ನು ನಡೆಸಲಿಲ್ಲ. ಒಟ್ಟಾರೆ ತೊಗರಿ ರೈತನ ಸಮಸ್ಯೆಗೆ ಯಾರೂ ದಿಕ್ಕಿಲ್ಲ ಎನ್ನುವಂತಾಗಿದೆ ಎಂದರು. 

3800ರೂ.ಗೆ ಮಾರಾಟ: ಮಾರುಕಟ್ಟೆಯಲ್ಲಿಂದು ತೊಗರಿ ಕ್ವಿಂಟಾಲ್‌ಗೆ 3800 ರೂ. ಗೆ ಮಾರಾಟವಾಗುತ್ತಿದೆ. ಆದರೆ ಬೆಂಬಲ ಬೆಲೆಗಿಂತ ಸಾವಿರದಿಂದ 1200 ರೂ. ಕಡಿಮೆ ದರದಲ್ಲಿ ಮಾರಾಟವಾಗುತ್ತಿದೆ. ಇದು ಕನಿಷ್ಠ ಬೆಂಬಲ ನಿಗದಿ ಆಯೋಗದ ವಿರುದ್ಧವಾಗಿದೆ. ಈ ಕುರಿತು ಹೈಕೋಟ್‌ ìನಲ್ಲಿ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಲು ಚಿಂತನೆ ನಡೆದಿದೆ ತಿಳಿಸಿದರು. ಶರಣಬಸಪ್ಪ ಮಮಶೆಟ್ಟಿ, ಪಾಂಡುರಂಗ ಮಾವಿನಕರ, ಅಶೋಕ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next