Advertisement

ದುಬಾೖಯಲ್ಲಿ ಮನೆ ಖರೀದಿ: ಭಾರತೀಯರ ಸಂಖ್ಯೆಯೇ ಹೆಚ್ಚು

01:47 AM Feb 06, 2023 | Team Udayavani |

ಅಬುಧಾಬಿ: ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಆಸ್ತಿ, ನಿವೇಶನಗಳನ್ನು ಹೊಂದುತ್ತಿರುವ ಭಾರ ತೀಯರ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆ ದುಬಾೖಯಲ್ಲೂ ಭಾರತೀಯರ ಠಿಕಾಣಿ ಹೆಚ್ಚುತ್ತಿದ್ದು, 2022ರಲ್ಲಿ ದುಬಾೖಯಲ್ಲಿ ಸ್ವಂತ ಮನೆಗಳನ್ನು ಖರೀದಿಸುವುದಕ್ಕಾಗಿ ಭಾರತೀ ಯರು ಬರೋಬ್ಬರಿ 33,500 ಕೋಟಿ ರೂ. ಖರ್ಚು ಮಾಡಿದ್ದಾರಂತೆ.

Advertisement

ಐಷಾರಾಮಿ ಜೀವನಕ್ಕೆ ಹೆಸರಾಗಿರುವ ದುಬಾೖಯಲ್ಲಿರುವ ವಿದೇಶಿಗರ ಪೈಕಿ ಭಾರತೀಯರೇ ಹೆಚ್ಚು. ಉದ್ಯೋಗಕ್ಕಾಗಿ ದುಬಾೖಗೆ ತೆರಳಿದ ಎಷ್ಟೋ ಮಂದಿ, ಈಗ ಅಲ್ಲಿನ ಪ್ರಜೆಗಳೇ ಆಗಿಹೋಗಿದ್ದೂ ಇದೆ. ಇತ್ತೀಚಿನ ವರ್ಷಗಳಲ್ಲಂತೂ ಭಾರತೀಯರು ದುಬಾೖಯಲ್ಲಿ ಮನೆಗಳ ಖರೀದಿಗೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಮಾಡುತ್ತಿರುವ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

2022ರ ರಿಯಲ್‌ ಎಸ್ಟೇಟ್‌ ವರದಿಗಳ ಪ್ರಕಾರ ದುಬಾೖರಿ ಯಲ್‌ ಎಸ್ಟೇಟ್‌ ಮಾರುಕಟ್ಟೆ ಕಳೆದ ವರ್ಷ 16 ಶತಕೋಟಿ ಧೀರಮ್‌(33,500 ಕೋಟಿ ರೂ.)ಗಳನ್ನು ಗಳಿಸಿದೆ. ಇದು 2021ರಲ್ಲಿನ ಮೌಲ್ಯಕ್ಕೆ ಹೋಲಿಸಿದರೆ 2 ಪಟ್ಟು ಹೆಚ್ಚು. ಇನ್ನು ದುಬಾೖಯಲ್ಲಿ ಮನೆಗಳನ್ನು ಖರೀದಿಸಿರುವ ವರ ಪೈಕಿ ಶೇ.40 ಮಂದಿ ದಿಲ್ಲಿ ಎನ್‌ಸಿಆರ್‌, ಅಹ್ಮದಾಬಾದ್‌, ಸೂರತ್‌, ಹೈದರಾಬಾದ್‌, ಪಂಜಾಬ್‌ನವರಾಗಿದ್ದಾರೆ. ಉಳಿದ ಶೇ.40 ಮಂದಿ ದುಬಾೖಯಲ್ಲಿಯೇ ವಾಸವಿರುವ ಭಾರತೀಯ ರಾಗಿದ್ದಾರೆ, ಶೇ.20 ಮಂದಿ ವಿಶ್ವದ ಬೇರೆ-ಬೇರೆ ರಾಷ್ಟ್ರಗಳ ಲ್ಲಿರುವ ಭಾರತೀಯರಾಗಿದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next