ಮೈಸೂರು: ಪ್ರಸ್ತುತ ಸಂದರ್ಭದಲ್ಲಿ ಬಳಕೆಯಲ್ಲಿರುವ ಡಿಜಿಟಲ್ ತಂತ್ರಜಾnನವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಪತ್ರಿಕೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಔಟ್‌ಲುಕ್ ಪತ್ರಿಕೆ ನಿವೃತ್ತ ಸ್ಥಾನಿಕ ಸಂಪಾದಕ ಕೃಷ್ಣಪ್ರಸಾದ್ ಸಲಹೆ ನೀಡಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಪತ್ರಿಕೋದ್ಯಮ ಕ್ಷೇತ್ರ ಅನೇಕ ತಂತ್ರಜಾnನಕ್ಕೆ ಬದಲಾಗುತ್ತಿದ್ದು, ಇಂದಿನ ಮಾಧ್ಯಮಗಳು ಡಿಜಿಟಲ್ ಆಗುತ್ತಿದೆ. ಇದರಿಂದಾಗಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಇಂದಿನ ಡಿಜಿಟಲ್‌ಯುಗಕ್ಕೆ ತೆರೆದುಕೊಳ್ಳಬೇಕಿದೆ. ಪತ್ರಿಕೋದ್ಯಮ ಎಂಬುದು ಇತ್ತೀಚಿನ ದಿನಗಳಲ್ಲಿಕೇವಲ ಪತ್ರಿಕೆ ಹಾಗೂ ಸುದ್ದಿವಾಹಿನಿಗಳಿಗಷ್ಟೇ ಸೀಮಿತಗೊಳ್ಳದೆ, ನ್ಯೂಸ್ ಹಾಗೂ ಮೀಡಿಯಾ ವೆಬ್‌ಸೈಟ್‌ಗಳಿಗೆ ವ್ಯಾಪಿಸಿದೆ.
ಆದ್ದರಿಂದ ಪತ್ರಿಕೋದ್ಯಮ ವಿದ್ಯಾರ್ಥಿಗಳು ಡಿಜಿಟಲ್ ಯುಗಕ್ಕೆ ತೆರೆದುಕೊಳ್ಳುವ ಮೂಲಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ನೂರಾರು ವರ್ಷ ಇತಿಹಾಸವಿರುವ ಪತ್ರಿಕೋದ್ಯಮದಲ್ಲಿ ಒಳ್ಳೆಯ ಹಾಗೂ ಕೆಟ್ಟ ವಿಷಯಗಳಿದ್ದು, ಇವೆರಡನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಮಾಧ್ಯಮಗಳು ಸಮಾಜದ ಹಿತಾಸಕ್ತಿಯೊಂದಿಗೆ ಕಾವಲು ನಾಯಿಯಂತೆ ಕಾರ್ಯನಿರ್ವಹಿಸಿ ಸಮಾಜವನ್ನು ಸರಿ ದಾರಿಯಲ್ಲಿ ಮುನ್ನಡೆಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.
ಮಾಧ್ಯಮ ಸಂಕಷ್ಟದಲ್ಲಿದೆ: ಪ್ರಸ್ತುತ ಸನ್ನಿವೇಶದಲ್ಲಿ ಭಾರತೀಯ ಮಾಧ್ಯಮ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಭ್ರಷ್ಟಾಚಾರ, ಬ್ಲಾಕ್‌ವೆುàಲ್ ಜತೆಗೆ ಒತ್ತಡದ ಸನ್ನಿವೇಶ ಹೆಚ್ಚಾಗುತ್ತಿದೆ. ಆದರೆ, ನೂರಾರು ವರ್ಷದ ಇತಿಹಾಸವಿರುವ ಭಾರತೀಯ ಮಾಧ್ಯಮಗಳ ವಾಸ್ತವತೆ ಕುರಿತು ಡಾ.ಬಿ.ಆರ್.ಅಂಬೇಡ್ಕರ್, ರಾಮಕೃಷ್ಣ ಪರಮಹಂಸರು ತಮ್ಮದೇ ಆದ ರೀತಿಯಲ್ಲಿ ಬಣ್ಣಿಸಿದ್ದಾರೆ.
ನಕಾರಾತ್ಮಕ ಸಂಗತಿಗಳ ನಡುವೆಯೂ ಮಾಧ್ಯಮ ಅನೇಕ ಸಂದರ್ಭಗಳಲ್ಲಿ ತನ್ನದೇ ಆದ ಗಂಭೀರತೆ ಕಾಪಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಡಿಜಿಟಲ್ ಯುಗದ ಸದ್ಬಳಕೆ ಮಾಡಿಕೊಳ್ಳಿ ಇದರ ಬದಲಿಗೆ ಕೇವಲ ಹಣ ಮಾಡುವ ಉದ್ದೇಶದೊಂದಿಗೆ ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರುವ ಪ್ರವೃತ್ತಿಯನ್ನು ಬದಿಗೊತ್ತಿ, ಸ್ವಪ್ರೇರಣೆಯೊಂದಿಗೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಶಿಬಿರದ ಅಂಗವಾಗಿ ನಡೆದ ಗೋಷ್ಠಿಗಳಲ್ಲಿ ಕನ್ನಡ ಪತ್ರಿಕೆಗಳಲ್ಲಿ ಭಾಷೆಯ ಬಳಕೆ ಕುರಿತು ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ, ಇಂಗ್ಲಿಷ್ ಪತ್ರಿಕೆಗಳಲ್ಲಿ ಭಾಷೆಯಬಳಕೆ ಕುರಿತು ದಯಾನಂದ ಸಾಗರ್, ವಿವಿಯ ಪ್ರಾಧ್ಯಾಪಕ ಕೃಷ್ಣ, ಪತ್ರಿಕೋದ್ಯಮದಲ್ಲಿ ಮಹಿಳೆಯರಿಗೆ ಇರುವ ಅವಕಾಶಗಳು ಮತ್ತು ಸವಾಲುಗಳು ಕುರಿತು ಹಿರಿಯ ಪತ್ರಕರ್ತೆ ನಾಹೀದ್ ಅತಾವುಲ್ಲ ಹಾಗೂ ದೃಶ್ಯ ಮಾಧ್ಯಮ ಕುರಿತು ಪತ್ರಕರ್ತ ಬದ್ರುದ್ದೀನ್ ಕೆ.ಮಾಣಿ ವಿಷಯ ಮಂಡಿಸಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು, ಕಾರ್ಯದರ್ಶಿ ಎಸ್.ಶಂಕರಪ್ಪ, ಸದಸ್ಯ ಕೆ.ಶಿವಕುಮಾರ್, ಮುತ್ತು ನಾಯ್ಕರ ಹಾಜರಿದ್ದರು.
ಭಾರತೀಯ ಪತ್ರಿಕೋದ್ಯಮಕ್ಕೆ ತನ್ನದೇ ಆದ ಇತಿಹಾಸವಿದೆ. ದೇಶದ ಸ್ವಾತಂತ್ರ ಸಂಗ್ರಾಮ ಸೇರಿದಂತೆ ಅನೇಕ ಸಾಮಾಜಿಕ ಕಳಕಳಿಯ ಸಂಗತಿಗಳಿಗೆ ಪತ್ರಿಕೋದ್ಯಮ ಸಾಕ್ಷಿಯಾಗಿದೆ. ದಿನ ಕಳೆದಂತೆ ಕ್ಷೇತ್ರ ಬದಲಾಗುತ್ತಿದ್ದು, ಇದರ ಪರಿಣಾಮ ಸುದ್ದಿ ಎಂಬುದು ಮೊಬೈಲ್ ಸಿಮ್‌ಕಾರ್ಡ್ ನಂತಿದೆ, ಪ್ರೀಪೇಯ್ಡ ಹಾಗೂ ಪೋಸ್ಟ್‌ಪೇಯ್ಡ ಸುದ್ದಿಗಳಿಂದ ಕೂಡಿರುತ್ತದೆ.
-ಕೃಷ್ಣಪ್ರಸಾದ್, ನಿವೃತ್ತ ಸ್ಥಾನಿಕ ಸಂಪಾದಕ, ಔಟ್‌ಲುಕ್