Advertisement

ಬಂಗಾರಪೇಟೆಯಲ್ಲಿ ಹೆಚ್ಚು ರಾಗಿ ಖರೀದಿ

03:59 PM Mar 28, 2021 | Team Udayavani |

ಬಂಗಾರಪೇಟೆ: ಜಿಲ್ಲೆಯ ಮಳೆಯಾಶ್ರಿತಬೆಳೆಯಾದ ರಾಗಿಯು 50 ವರ್ಷಗಳ ಇತಿಹಾಸದಲ್ಲಿಅತಿ ಹೆಚ್ಚು ಇಳುವರಿ ಬಂದಿದೆ. ರಾಜ್ಯ ಸರ್ಕಾರವುರಾಗಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದತೆರೆಯಲಾಗಿದ ª ರಾಗಿ ಖರೀದಿ ಕೇಂದ್ರದಲ್ಲಿ ಉತ್ತಮಬೆಲೆ ನಿಗದಿ ಮಾಡಿರುವ ಕಾರಣ ರೈತರಿಂದನಿರೀಕ್ಷೆಗೂ ಮೀರಿ 15 ಕೋಟಿ ರೂ. ಬೆಲೆಯ ರಾಗಿಶೇಖರಣೆಯಾಗಿದೆ.ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆದೊರೆಯಬೇಕೆಂಬ ಉದ್ದೇಶದಿಂದ ಕೇಂದ್ರ ಬೆಂಬಲಬೆಲೆ (ಎಂಎಸ್‌ಪಿ) ಘೋಷಿಸಿದೆ.

Advertisement

ಅದರಂತೆ ಆಹಾರಮತ್ತು ನಾಗರಿಕ ಸರಬರಾಜು ನಿಗಮದಿಂದತೆರೆಯಲಾಗಿರುವ ರಾಗಿ ಖರೀದಿ ಕೇಂದ್ರಗಳಲ್ಲಿರಾಗಿ ಮಾರಾಟ ಮಾಡಲು ಕಳೆದ ವರ್ಷಕ್ಕಿಂತಸುಮಾರು ಹತ್ತುಪಟ್ಟು ಹೆಚ್ಚಿನ ರೈತರು ಮುಂದೆಬಂದಿದ್ದಾರೆ. ಕೇಂದ್ರಗಳಲ್ಲಿ ಮುಕ ¤ ಮಾರುಕಟ್ಟೆಗಿಂತದುಪ್ಪಟ್ಟು ಹೆಚ್ಚಿನ ಬೆಲೆ ನಿಗದಿಯಾಗಿದೆ.

ಈ ಕಾರಣದಲ್ಲಾಳಿಗಳ ಪ್ರಮೇಯವಿಲ್ಲದೇ ರೈತರು ಕೇಂದ್ರಕೆ Rಬಂದು ತಮ್ಮ ದಾಖಲೆ ನೀಡಿನೋಂದಾಯಿಸಿಕೊಂಡು ರಾಗಿ ಮಾರಾಟಮಾಡುತ್ತಿದ್ದಾರೆ.

ಹತ್ತು ಪಟ್ಟು ಹೆಚ್ಚು ನಿರೀಕ್ಷೆ: ತಾಲೂಕಿನಲ್ಲಿ ಕಳೆದವರ್ಷ ಸುಮಾರು 500 ರೈತರು ಕೇವಲ 7242ಕ್ವಿಂಟಾಲ್‌ ರಾಗಿಯನ್ನು ಮಾತ್ರ ರಾಗಿ ಖರೀದಿಕೇಂದ್ರದಲ್ಲಿ ಮಾರಾಟ ಮಾಡಿದ ªರು. 2020-21ನೇಸಾಲಿನ ವರ್ಷದಲ್ಲಿ ಉತ್ತಮ ಮಳೆಯೊಂದಿಗೆಬೆಳೆಯಾಗಿರುವ ಕಾರಣ ಇಲ್ಲಿಯವರೆಗೂಬರೋಬ್ಬರಿ 2608 ರೈತರು 49,800 ಕ್ವಿಂಟಾಲ್‌ರಾಗಿ ಮಾರಾಟಕ್ಕೆ ನೋಂದಾಯಿಸಿಕೊಂಡಿದ್ದು,2448 ರೈತರು 42,381 ಕ್ವಿಂಟಾಲ್‌ ರಾಗಿ ಮಾರಾಟಮಾಡಿದ್ದಾರೆ.

ರಾಗಿ ಖರೀದಿಗೆ ಮಾ.15ಕ್ಕೆ ಗಡುವುನಿಗದಿಪಡಿಸಿದ್ದರೂ, ಮತೆ ¤ ಮಾ.31ರವರೆಗೆ ವಿಸ್ತರಣೆಮಾಡಿರುವುದರಿಂದ ಮತೆ ¤ ಉಳಿದಿರುವ ರೈತರುರಾಗಿ ಮಾರಾಟಕ್ಕೆ ನೋಂದಾಯಿಸಿಕೊಳ್ಳುತ್ತಿದ್ದಾರೆ.ರೈತರ ಖಾತೆಗೆ ಹಣ ಜಮೆ: ಸರ್ಕಾರ ಶೀಘ್ರ ಖರೀದಿಕೇಂದ್ರ ಆರಂಭಿಸದ ಹಿನ್ನೆಲೆಯಲ್ಲಿ ರೈತರು ಮುಕ್ತಮಾರುಕಟ್ಟೆಯಲ್ಲಿ 1500ರಿಂದ 1800 ರೂ.ಗೆಮಾರಾಟ ಮಾಡುತ್ತಿದ್ದರು. ಸರ್ಕಾರದಿಂದ ಪ್ರತಿಕ್ವಿಂಟಾಲ್‌ ರಾಗಿಗೆ 3295 ರೂ. ಬೆಲೆನಿಗದಿಪಡಿಸಲಾಗಿದೆ.

Advertisement

ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ 5 ಎಕರೆಗೆ 50 ಕ್ವಿಂಟಾಲ್‌ವರೆಗೆ ರಾಗಿ ಖರೀದಿಗೆಅವಕಾಶವಿದೆ. ರೈತರಿಂದ ಖರೀದಿ ಮಾಡಿದ ಬೆಳೆಗೆಹಣವನ್ನು ನೇರವಾಗಿ ರೈತರ ಖಾತೆಗೆ ಜಮೆಮಾಡಲಾಗುತ್ತಿದೆ. ಈ ಕಾರಣದಿಂದ ಹೆಚ್ಚಿನಸಂಖ್ಯೆಯಲ್ಲಿ ಖರೀದಿ ಕೇಂದ್ರಗಳತ್ತ ರೈತರು ಮುಖಮಾಡುತ್ತಿದ್ದಾರೆ. ರಾಗಿ ಸರಬರಾಜು ಮಾಡಿರುವ2448 ರೈತರ ಪೈಕಿ 1405 ರೈತರಿಗೆ ನೇರವಾಗಿ ಅವರಖಾತೆಗೆ ಹಣ ಜಮೆ ಮಾಡಲಾಗಿದೆ.

ಬೆಲೆ ಸಮೀಕ್ಷೆಯಲ್ಲಿ ಬೆಳೆ ಅದಲು ಬದಲು: ಬೆಳೆಸಮೀಕ್ಷೆಯಲ್ಲಿ ಸಾಕಷ್ಟು ರೈತರ ಬೆಳೆಗಳನ್ನು ಸಮರ್ಪಕರೀತಿಯಲ್ಲಿ ನೋಂದಾಯಿಸದೆ ಬೆಳೆ ಅದಲುಬದಲಾಗಿ ರಾಗಿ ಮಾರಾಟ ಮಾಡಲು ಸಾಧ್ಯವಾಗಿಲ್ಲ.ರೈತರು ಬೆಳೆಯನ್ನು ಸೇರಿಸಲು ತಾಲೂಕಿನಲ್ಲಿ 68 ಜನರೈತರು ಆಕ್ಷೇಪಣೆ ಸಲ್ಲಿಸಿದ್ದರು. ಈ ಪೈಕಿ 62 ರೈತರಆಕ್ಷೇಪಣೆಯನ್ನು ಇಲಾಖೆಯಿಂದ ಸರಿಪಡಿಸಿ, ರಾಗಿಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಕೋಲಾರಜಿಲ್ಲೆಯಲ್ಲಿಯೇ ಬಂಗಾರಪೇಟೆ ತಾಲೂಕು ಅತಿಹೆಚ್ಚು ರಾಗಿ ಖರೀದಿ ಮಾಡಲಾಗಿದ್ದು, ಕೋಲಾರ,ಶ್ರೀನಿವಾಸಪುರ, ಮಾಲೂರು, ಮುಳಬಾಗಿಲುಹಾಗೂ ಕೆಜಿಎಫ್ ತಾಲೂಕುಗಳಲ್ಲಿ ನಿರೀಕ್ಷೆಗೂ ಮೀರಿರಾಗಿ ಖರೀದಿಯಾಗಿಲ್ಲ.ಮುಕ್ತ ಮಾರುಕಟ್ಟೆಯಲ್ಲಿ ರಾಗಿಗೆ ಸೂಕ್ತ ಬೆಲೆಸಿಗುತ್ತಿಲ್ಲದ ಕಾರಣ ಅಲ್ಲಿ ಮಾರಾಟ ಮಾಡಿದರೆ,ಕೂಲಿ ಹಣ ಸಹ ಸಿಗುವುದಿಲ್ಲ. ಆದರೆ, ಸರ್ಕಾರತೆರೆದಿರುವ ಕೇಂದ್ರದಲ್ಲಿ ದಲ್ಲಾಳಿಗಳ ಕಾಟವಿಲ್ಲದೇನೇರ ಖರೀದಿಯೊಂದಿಗೆ ಉತ ¤ಮ ಬೆಲೆ ಸಿಗುತ್ತಿದೆ.ಇದರಿಂದ ನಷ್ಟದಿಂದ ಪಾರಾಗಬಹುದು ಎನ್ನುವಉದೆ ªàಶದಿಂದ ಸರ್ಕಾರಿ ನೇಮಿಸಿರುವ ರಾಗಿಕೇಂದ್ರದಲ್ಲಿಯೇ ರಾಗಿ ಮಾರಾಟ ಮಾಡುತ್ತಿದ್ದಾರೆ.

ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next