ಅಟೋಮೊಬೈಲ್ ಕ್ಷೇತ್ರ ದಿನದಿಂದ ದಿನಕ್ಕೆ ಬೆಳವಣಿಗೆಯಾಗುತ್ತಿದ್ದು, ಅದರಲ್ಲಿಯೂ ವಾಹನ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮನುಷ್ಯ ಒಂದು ಕಿಲೋ ಮೀಟರ್ ಕ್ರಮಿಸಬೇಕಾದರೂ ವಾಹನಗಳ ಮೊರೆ ಹೋಗುತ್ತಿದ್ದಾನೆ. ಅದೇ ಕಾರಣಕ್ಕೆ ರಸ್ತೆಗಳಲ್ಲಿ ವಾಹನಗಳ ಒತ್ತಡ ಹೆಚ್ಚಾಗುತ್ತಿದ್ದು, ಪ್ರತೀ ದಿನ ಟ್ರಾಫಿಕ್ ಜಾಮ್ ಆಗುತ್ತಿದೆ. ಇದೇ ಕಾರಣಕ್ಕೆ ಇತ್ತೀಚಿನ ಕೆಲ ದಿನಗಳಲ್ಲಿ ದೊಡ್ಡ ವಾಹನಗಳ ಖರೀದಿಯತ್ತ ಜನ ಮನಸ್ಸು ಮಾಡುತ್ತಿಲ್ಲ. ಬದಲಾಗಿ, ಬೈಕ್ ಸ್ಕೂಟರ್ ಸೇರಿದಂತೆ ದ್ವಿಚಕ್ರ ವಾಹನಗಳ ಕಡೆ ಒಲವು ತೋರಿಸುತ್ತಿದ್ದಾರೆ.
ಇನ್ನೇನು ಕೆಲ ದಿನಗಳಲ್ಲಿಯೇ ಮಾನ್ಸೂನ್ ಆರಂಭವಾಗಲಿದ್ದು, ದ್ವಿಚಕ್ರ ವಾಹನಗಳನ್ನು ಖರೀದಿ ಮಾಡಿದರೆ ನಿರ್ವಹಣೆ ಸುಲಭ. ಇದೇ ಕಾರಣಕ್ಕೆ ದ್ವಿಚಕ್ರ ವಾಹನಗಳ ಖರೀದಿಗೆ ಸಾರ್ವಜನಿಕರು ಆಸಕ್ತಿ ತೋರುತ್ತಿದ್ದಾರೆ. ಮಂಗಳೂರು ನಗರದಲ್ಲಿಯೂ ದ್ವಿಚಕ್ರ ವಾಹನಗಳ ಖರೀದಿ ಜೋರಾಗಿದೆ. ಕೆಲವೊಂದು ಕಂಪೆನಿಯ ಬೈಕ್, ಸ್ಕೂಟರ್‌ಗಳನ್ನು ಮುಂಗಡ ಬುಕ್ಕಿಂಗ್ ಮೂಲಕ ಖರೀದಿ ಮಾಡುತ್ತಿದ್ದಾರೆ.
ಮಂಗಳೂರಿನಲ್ಲಿ ಹೀರೋ ಕಂಪೆನಿಯ ಸೂಪರ್ ಸ್ಪೆ ್ಲಂಡರ್, ಹೀರೋ ಪ್ಯಾಶನ್, ಗ್ಲಾಮರ್ ಬೈಕ್‌ಗೆ ಬೇಡಿಕೆ ಹೆಚ್ಚಿದೆ. ಏಕೆಂದರೆ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಬೈಕ್‌ಗಳು ಇದಾಗಿದ್ದು, ಸಾಮಾನ್ಯವಾಗಿ ನಿರ್ವಹಣೆ ಕೂಡ ಸುಲಭ. ಮಂಗಳೂರು ನಗರದಲ್ಲಿ ಹೀರೋ ಸಂಸ್ಥೆಯ ಹೀರೊ ಡೆಸ್ಟಿನಿ 125 ಸಿಸಿ, ಮಾಸ್ಟ್ರೋ ಎಡ್ಜ್ 111 ಸಿಸಿ ಬೈಕ್ ಮಾರುಕಟ್ಟೆಯಲ್ಲಿದ್ದು, ಹೀರೊ ಡೆಸ್ಟಿನಿ 125 ಸಿಸಿ ಯ ಸಾಮಾನ್ಯ ಬೈಕ್‌ಗೆ 72,195 ರೂ. ಟಾಪ್ ಮಾಡೆಲ್ಗೆ 75,484 ರೂ. ಮಾರುಕಟ್ಟೆಯಲ್ಲಿದೆ. ಇನ್ನು, ಮಾಸ್ಟ್ರೋ ಎಡ್ಜ್ 111 ಸಾಮಾನ್ಯ ಬೈಕ್‌ಗೆ 68,787ರ. ಇದ್ದು, ಟಾಪ್ ಮಾಡೆಲ್ಗೆ 70,280 ರೂ. ಇದೆ. ಇನ್ನೇನು ಕೆಲ ತಿಂಗಳಲ್ಲಿ ಮಾಸೋr್ರ ಎಡ್ಜ್ 125 ಸಿಸಿ ಬೈಕ್ ಬರಲಿದ್ದು, ಈಗಾಗಲೇ ಬೇಡಿಕೆ ಹೆಚ್ಚುತ್ತಿದೆ. ಇನ್ನು ಕೆಲ ದಿನಗಳಲ್ಲಿಯೇ ಆನ್‌ಲೈನ್ ಬುಕ್ಕಿಂಗ್ ಆರಂಭವಾಗಲಿದ್ದು, ಮಂಗಳೂರಿನ ಜನತೆ ಈ ಬಗ್ಗೆ ಬೈಕ್ ಖರೀದಿ ಅಂಗಡಿಗಳಲ್ಲಿ ವಿಚಾರಿಸುತ್ತಿದ್ದಾರೆ.
ಇನ್ನು, ಹೋಂಡಾ ಕಂಪೆನಿಯ ದ್ವಿಚಕ್ರ ವಾಹನಗಳಿಗೂ ಮಂಗಳೂರಿನಲ್ಲಿ ಬೇಡಿಕೆ ಹೆಚ್ಚಾಗಿದೆ. ಇದೀಗ ಹೋಂಡಾ ಆ್ಯಕ್ಟಿವಾ 5ಜಿ ಬೇಡಿಕೆ ಇದ್ದು, ಡಿಜಿಟಲ್ ಮೀಟರ್ ಬೈಕ್ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಡಿಯೋ ಮತ್ತು ಇತ್ತೀಚೆಗೆ ಮಾರುಕಟ್ಟೆಗೆ ಕಾಲಿಟ್ಟ ಹೋಂಡಾ ಗ್ರಾಸಿಯಾ 125 ಸಿಸಿ ಗಾಡಿ ಖರಿದಿಯತ್ತಲೂ ಹೆಚ್ಚಿನ ಮಂದಿ ಆಸಕ್ತಿ ಹೊಂದಿದ್ದಾರೆ. ಮಂಗಳೂರು ಮಾರುಕಟ್ಟೆಯಲ್ಲಿ ಒಂದು ತಿಂಗಳಿಗೆ ಸುಮಾರು 500 ಆ್ಯಕ್ಟಿವಾ, 250 ಡಿಯೋ,125ರಷ್ಟು ಗ್ರಾಸಿಯಾ ಗಾಡಿಗಳು ಮಾರಾಟವಾಗುತ್ತಿದೆ. ಅದೇ ರೀತಿ ಟಿವಿಎಸ್, ಸುಜುಕಿ ಸೇರಿದಂತೆ ವಿವಿಧ ಕಂಪೆನಿಯ ಬೈಕ್ ಖರೀದಿ ಕೂಡ ಮಂಗಳೂರಿನಲ್ಲಿದೆ.
ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನ ಖರೀದಿಗೆ ವಿವಿಧ ಬಗೆಯ ಆಫರ್‌ಗಳಿವೆ. ಅದರಲ್ಲಿಯೂ ಫುಲ್ ಟ್ಯಾಂಕ್ ಪೆಟ್ರೋಲ್, ಇಎಂಐ, ಜೀರೋ ಡೌನ್‌ಪೇಮೆಂಟ್, ಲಕ್ಕಿ ಡ್ರಾ ಸೇರಿದಂತೆ ವಿವಿಧ ಬಗೆಯ ಆಫರ್‌ಗಳಿವೆ. ಇನ್ನೇನು ಕೆಲ ದಿನಗಳಲ್ಲಿ ಮಾನ್ಸೂನ್ ಆರಂಭವಾಗಲಿದ್ದು, ಈ ವೇಳೆ ಮತ್ತಷ್ಟು ಆಫರ್‌ಗಳು ಮಾರುಕಟ್ಟೆಗೆ ಕಾಲಿಡಲಿವೆ ಎನ್ನುತ್ತಾರೆ ಬೈಕ್ ಶೋರೂಂ ಮಾಲಕರು.
ಹೀರೋ ಮೊದಲ ಸ್ಥಾನ
ದೇಶದಲ್ಲಿ ಬೈಕ್, ಸ್ಕೂಟರ್ ಖರೀದಿಗೆ ಸಾರ್ವಜನಿಕರು ಆಸಕ್ತಿ ತೋರುತ್ತಿದ್ದಾರೆ. ಎಪ್ರಿಲ್ ತಿಂಗಳಿನಲ್ಲಿ ಹೀರೋ ಸ್ಕೂಟರ್ ಹಾಗೂ ಬೈಕ್ 5,67,932 ಮಾರಾಟವಾಗಿದೆ. ಇನ್ನು 2ನೇ ಸ್ಥಾನದಲ್ಲಿರುವ ಹೊಂಡಾ 4,32,767 ವಾಹನ ಮಾರಾಟವಾಗಿದೆ. ಉಳಿದಂತೆ ಟಿವಿಎಸ್ 2,48,456, ಬಜಾಜ್ 2,05,875, ಯಮಹಾ 60,781, ರಾಯಲ್ ಎನ್‌ಫೀಲ್ಡ್ 59,137 ಮತ್ತು ಸುಜಿಕಿ ಕಂಪೆನಿಯ 57,053 ಬೈಕ್‌ಗಳು ಮಾರಾಟವಾಗಿದೆ. ಬೈಕ್ ಕ್ರೇಜ್ ಇರುವ ಯುವ ಜನತೆ ಹೀರೋ ಬೈಕ್‌ಗಳಿಗೆ ಮೊರೆಹೋಗುತ್ತಿದ್ದಾರೆ.•
ನವೀನ್ ಭಟ್ ಇಳಂತಿಲ