ರಾಮನಗರ: ತಾಲೂಕಿನ ಬಿಡದಿಹೋಬಳಿ ಕೇತಗನಹಳ್ಳಿಯ ತಮ್ಮತೋಟದಲ್ಲಿ ಚನ್ನಪಟ್ಟಣ ಶಾಸಕ ಹಾಗೂಮಾಜಿ ಸಿಎಂ ಎಚ್.ಡಿ.ಕುಮಾರ ಸ್ವಾಮಿಕುಟುಂಬ ಸಮೇತ ಹಲವು ದಿನದಿಂದವಾಸ್ತವ್ಯವಿದ್ದು, ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಕಳೆದ ವಾರದಿಂದ ಗೋವುಗಳ ಸಾಕಾಣಿಕೆಯನ್ನು ಆರಂಭಿಸಿರುವ ಕುಮಾರಸ್ವಾಮಿ, ಬುಧವಾರ ಭೂಮಿ ಉಳುಮೆಗೆಸಹಕಾರಿಯಾಗುವಂತೆ ಟ್ರ್ಯಾಕ್ಟರ್ ಖರೀದಿಸಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಟ್ರ್ಯಾಕ್ಟರ್‌ಗೆ ಪೂಜೆ ಸಲ್ಲಿಸಿದರು. ಪೂಜಾ ಕಾರ್ಯಕ್ರಮದನಂತರ ಎಚ್.ಡಿ.ಕುಮಾರಸ್ವಾಮಿಟ್ರ್ಯಾಕ್ಟರ್ ಚಾಲನೆ ಮಾಡಿ, ಕೃಷಿ ಚಟುವಟಿಕೆ ಆರಂಭಿಸಿದರು. ಮಾಗಡಿ ಶಾಸಕಎ.ಮಂಜುನಾಥ್ ಹಾಜರಿದ್ದರು.
ಕೇತಗನಹಳ್ಳಿಯಲ್ಲೇ ವಾಸ್ತವ್ಯ: ಕೇತಗನಹಳ್ಳಿಯಲ್ಲಿ ಕೆಲವು ವರ್ಷಗಳ ಹಿಂದೆಕುಮಾರಸ್ವಾಮಿ ಮನೆ ನಿರ್ಮಿಸಿಕೊಂಡಿದ್ದಾರೆ. ಆಗಾಗ್ಗೆ ಇಲ್ಲಿಗೆ ಬಂದು ವಿಶ್ರಾಂತಿಪಡೆಯುತ್ತಿದ್ದರು. ಆದರೆ, ಕಳೆದ ಕೆಲವುತಿಂಗಳಿಂದ ಇಲ್ಲೇ ವಾಸ್ತವ್ಯವಿದ್ದಾರೆ. ಪತ್ನಿಅನಿತಾ ಕುಮಾರಸ್ವಾಮಿ, ಮಗ ನಿಖೀಲ್‌ಮತ್ತು ಸೊಸೆ ರೇವತಿ ಸಹ ಇಲ್ಲೇ ಇದ್ದಾರೆ.
ಕೆಲವು ದಿನಗಳ ಹಿಂದೆ ಕಪಿಲ, ಸ್ವರ್ಣಮತ್ತು ಗಿರ್ ತಳಿಯ ಗೋವುಗಳಪಾಲನೆಆರಂಭಿಸಿದ್ದಾರೆ. ಮೇ 24ರಂದು ತಂದೆಎಚ್.ಡಿ.ದೇವೇಗೌಡ ಮತ್ತು ತಾಯಿಚೆನ್ನಮ್ಮ ತಮ್ಮ 67ನೇ ವಿವಾಹ ವಾರ್ಷಿಕೋತ್ಸವವನ್ನು ಕೇತಗನಹಳ್ಳಿಯ ತೋಟದಲ್ಲೇ ಆಚರಿಸಿಕೊಂಡಿದ್ದರು. ಕೇತಗನಹಳ್ಳಿಯ ತೋಟ ಕುಮಾರಸ್ವಾಮಿಯವರಕುಟುಂಬ ಸಮ್ಮಿಲನದ ಜೊತೆಗೆ ರಾಜಕೀಯ ಚಿಂತನೆಗಳ ಸ್ಥಳವಾಗಿ ಚಟುವಟಿಕೆಯಿಂದಕೂಡಿದೆ.