Advertisement

ಕಾರು ಖರೀದಿ :ರಾಜ್ಯದಲ್ಲಿ ದಕ್ಷಿಣ ಕನ್ನಡ ನಂ. 2

02:11 AM Feb 04, 2021 | Team Udayavani |

ಮಂಗಳೂರು: ಪರೀಕ್ಷಾ ಫ‌ಲಿತಾಂಶಗಳ ಸಹಿತ ಹಲವು ಕ್ಷೇತ್ರಗಳಲ್ಲಿ ಕರಾವಳಿ ರಾಜ್ಯಕ್ಕೆ ಮುಂಚೂಣಿಯಲ್ಲಿದೆ. ಈ ಸಾಲಿಗೆ ನೂತನ ಸೇರ್ಪಡೆ ಹೊಸ ಕಾರುಗಳ ಖರೀದಿ ಸದ್ಯ ರಾಜ್ಯದಲ್ಲಿ ಬೆಂಗಳೂರು ನಗರ ಬಿಟ್ಟರೆ ಅತೀ ಹೆಚ್ಚು ಹೊಸ ಕಾರುಗಳ ಖರೀದಿ ಮತ್ತು ನೋಂದಣಿ ನಡೆಯುತ್ತಿ ರುವ ಜಿಲ್ಲೆ ದಕ್ಷಿಣ ಕನ್ನಡ. ಆ ಮೂಲಕ ಹೆಚ್ಚು ರಸ್ತೆ ತೆರಿಗೆ ಪಾವತಿಸಿ ಸರಕಾರಿ ಬೊಕ್ಕಸಕ್ಕೆ ಆದಾಯ ತಂದುಕೊಡುವಲ್ಲಿಯೂ ಜಿಲ್ಲೆಯ ಜನತೆ ಮುಂದಿದ್ದಾರೆ. ಸಾರಿಗೆ ಇಲಾಖೆಯ ನಾಲ್ಕು ವರ್ಷಗಳ ಅಂಕಿ ಅಂಶಗಳು ಇದನ್ನು ಶ್ರುತಪಡಿಸುತ್ತಿವೆ.

Advertisement

ಅಧಿಕ ಜನಸಾಂದ್ರತೆ ಮತ್ತು ಮೆಟ್ರೊ ನಗರ ಹೊಂದಿರುವ ಬೆಂಗಳೂರು ಜಿಲ್ಲೆ ಹೊಸ ಕಾರುಗಳ ಮಾರಾಟ ಮತ್ತು ನೋಂದಣಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಅಲ್ಲಿ 4,15,331 ಕಾರುಗಳು ನೋಂದಣಿ ಯಾಗಿವೆ. ಎರಡನೇ ಸ್ಥಾನದಲ್ಲಿರುವ ದಕ್ಷಿಣ ಕನ್ನಡದಲ್ಲಿ ಇದೇ ಅವಧಿಯಲ್ಲಿ ನೋಂದಣಿಯಾಗಿರುವ ಕಾರುಗಳು 44,998. ಬೆಂಗಳೂರಿಗೆ ಹೋಲಿಸಿದರೆ ದಕ್ಷಿಣ ಕನ್ನಡದ ವ್ಯಾಪ್ತಿ, ಜನಸಂಖ್ಯೆ ಕಡಿಮೆ. ಬೆಂಗಳೂರಿನಲ್ಲಿ 10 ಆರ್‌ಟಿಒ ಕಚೇರಿಗಳಿದ್ದರೆ ದ.ಕ.ದಲ್ಲಿರುವುದು ಕೇವಲ ಮೂರು. ಹೀಗಿದ್ದರೂ ಇಲ್ಲಿ ಅಧಿಕ ಕಾರು ಖರೀದಿ ಮತ್ತು ನೋಂದಣಿ ದಾಖಲಾಗಿರುವುದು ವಿಶೇಷ.

ಸಾರಿಗೆ ಇಲಾಖೆ ಕಾರು ಖರೀದಿಯಲ್ಲಿ ಮೈಸೂರು ಮೂರನೇ ಸ್ಥಾನದಲ್ಲಿದ್ದು, ಐದು ವರ್ಷಗಳಲ್ಲಿ 29,768 ಕಾರು ನೋಂದಣಿಯಾಗಿವೆ. ಉಡುಪಿ ಜಿಲ್ಲೆಯಲ್ಲಿ 20,650 ಕಾರುಗಳು ನೋಂದಣಿಗೊಂಡಿವೆ. ಬೆಂಗಳೂರು ಬಳಿಕ ಅತೀ ಹೆಚ್ಚು ಆರ್‌ಟಿಒ ಕಚೇರಿ ಹೊಂದಿರುವ ಬೆಳಗಾವಿ ಯಲ್ಲಿ ಇದೇ ಅವಧಿಯಲ್ಲಿ ನೋಂದಣಿ ಯಾಗಿರುವುದು 25,281 ಕಾರುಗಳು.

ಇದೆ ಹಲವು ಕಾರಣ
ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಕಾರು ಖರೀದಿಸುವಲ್ಲಿ ಮುಂದಿರುವುದಕ್ಕೆ ಹಲವಾರು ಕಾರಣಗಳಿವೆ. 2011ರ ಜನಗಣತಿಯಂತೆ ದಕ್ಷಿಣ ಕನ್ನಡದ ಜನ ಸಂಖ್ಯೆ 20.90 ಲಕ್ಷ ಇದ್ದು, ರಾಜ್ಯದಲ್ಲಿ 8ನೇ ಸ್ಥಾನದಲ್ಲಿದೆ.

ಕರಾವಳಿ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚು. ಬೆಂಗಳೂರು ಬಿಟ್ಟರೆ ಕರಾವಳಿಯಲ್ಲಿ ಕಾರು ನೋಂದಣಿ ಹೆಚ್ಚಾಗುತ್ತಿದೆ. ಇದರಿಂದ ಸಾರಿಗೆ ಇಲಾಖೆಗೆ ಹೆಚ್ಚಿನ ಸಂಪನ್ಮೂಲ ಸಂಗ್ರಹ ಆಗುತ್ತಿದೆ.

Advertisement

– ಶಿವರಾಜ್‌ ಬಿ. ಪಾಟೀಲ್‌ ಅಪರ ಸಾರಿಗೆ ಆಯುಕ್ತರು, ಬೆಂಗಳೂರು

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next